ಪ್ರವಾಹದಲ್ಲಿ ಮಗನ ಜೊತೆಗೆ ಮನೆಯನ್ನೂ ಕಳೆದುಕೊಂಡ ತಾಯಿಗೆ ಇನ್ನೂ ಸಿಕ್ಕಿಲ್ಲಾ ಪರಿಹಾರ

ಪ್ರವಾಹ ಬಂದ ಹೋದ ನಂತರ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪನವರೇ ಡಿ ಎನ್ ಎ ವರದಿ ಬರುವವರೆಗೂ ಕಾಯಬೇಡಿ ಮೊದಲು ಲಲಿತಮ್ಮನಿಗೆ ಪರಿಹಾರ ನೀಡಿ ಎಂದು ಹೇಳಿದ್ದರು.

G Hareeshkumar | news18-kannada
Updated:February 6, 2020, 7:30 AM IST
ಪ್ರವಾಹದಲ್ಲಿ ಮಗನ ಜೊತೆಗೆ ಮನೆಯನ್ನೂ ಕಳೆದುಕೊಂಡ ತಾಯಿಗೆ ಇನ್ನೂ ಸಿಕ್ಕಿಲ್ಲಾ ಪರಿಹಾರ
ಮೃತ ಬಾಲಕನ ಪೋಟೊ ನೋಡಿ ಅಳುತ್ತಿರುವ ತಾಯಿ
  • Share this:
ಚಿಕ್ಕೋಡಿ(ಫೆ.06) :  ಆತ ಚುರುಕಾದ ಹುಡುಗ ಶಾಲೆಯಲ್ಲಿ ಓದುವುದರಲ್ಲಿ ಮುಂದು, ಅಮ್ಮನ ಮುದ್ದಿನ ಮಗ, ಅಮ್ಮನಿಗೆ ಕೊಂಚ ತೊಂದ್ರೆಯಾದರೂ ಸಾಕು ಸಹಿಸದ ಪ್ರೀತಿಯ ಮಗ, ಕಳೆದ ವರ್ಷ ಆಗಸ್ಟ್​ ನಲ್ಲಿ ಅಥಣಿ ಭಾಗದಲ್ಲಿ ಬಂದಿದ್ದ ಮಹಾಪೂರದಲ್ಲಿ ಕಾಲು ಜಾರಿ ಬಿದ್ದು ಅದೆಲ್ಲಿ ಮರೆಯಾಗಿ ಹೋದ ಎಂಬುದು ಗೊತ್ತಿಲ್ಲ. ಮಗ ಹೆಣವಾಗಿ ಸಿಕ್ಕ ನಂತರ ಮಗನನ್ನು ಕಳೆದುಕೊಂಡ ತಾಯಿಗೆ ಪರಿಹಾರ ಕೊಡ್ತಿವಿ ಅಂತ ಹೇಳಿ ಸರ್ಕಾರದಿಂದ ಸಿಗಬೇಕಿದ್ದ ಪರಿಹಾರ ಇನ್ನೂ ನೀಡಿಲ್ಲ.

ಕಳೆದ ವರ್ಷ ಅಗಸ್ಟ್ ತಿಂಗಳು ರಾಜ್ಯದ ಪಾಲಿಗೆ ಕರಾಳ ತಿಂಗಳಾಗಿತ್ತು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ಅದೆಷ್ಟೋ ಜನರು ತಮ್ಮ ಜೀವ ತೆತ್ತಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲೂ ಸಹ ನದಿ ದಾಟಿ ಸುರಕ್ಷಿತ ಪ್ರದೇಶಕ್ಕೆ ತೆರಳುವ ಸಂದರ್ಭ ಬಸವರಾಜ್ ಮಾನಿಕ್ ಕಾಂಬಳೆ ಎಂಬ ಬಾಲಕ ಹರಿವ ನೀರಿನಲ್ಲಿ ಕಾಲು ಜಾರಿ ಬಿದ್ದು ಮಾಯವಾಗಿದ್ದ. ನೋಡ ನೋಡುತ್ತಲೆ ತುಂಬಿ ಹರಿಯುತ್ತಿದ್ದ ಕೃಷ್ಣೆಯ ಪ್ರತಾಪಕ್ಕೆ ಆಹುತಿಯಾಗಿದ್ದ ಬಸವರಾಜ ಈ ಲಲಿತಮ್ಮನ ಪ್ರೀತಿಯ ಮಗ ಬಸವರಾಜ್ ನೀರಿನಲ್ಲಿ ಕಾಣೆಯಾದ ಬಳಿಕ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಹಾಗೂ ಸ್ಥಳೀಯರೂ ಸಹ ಬಸವರಾಜ್ ಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ.

ಪ್ರವಾಹ ಇಳಿಮುಖವಾದ ಒಂದು ತಿಂಗಳ ಬಳಿಕ ಕಬ್ಬಿನ ಗದ್ದೆಯೊಳಗೆ ಅಸ್ತಿಪಂಜರ ರೀತಿಯಲ್ಲಿ ಬಸವರಾಜ್ ಶವ ಪತ್ತೆಯಾಗಿತ್ತು.‌ಹೆಗಲಿಗೆ ಹಾಕಿದ್ದ ಸ್ಕೂಲ್ ಬ್ಯಾಗ್ ಬಸವರಾಜ್ ಹಾಕಿದ್ದ ಟೀಶರ್ಟ್ ನೋಡಿ ಇದು ನನ್ನ ಮಗನ ಶವವೇ ಅಂತ ಬಸವರಾಜ್ ತಾಯಿ ಲಲಿತಮ್ಮ ಗೋಳಾಡಿದ್ರು. ಆ ಕೆಟ್ಟ ಘಟನೆ ನಡೆದು 5 ತಿಂಗಳು ಕಳೆದರೂ ಸಹ ಲಲಿತಮ್ಮನಿಗೆ ಇನ್ನೂ ಸಹ ಸರ್ಕಾರದಿಂದ ಸಿಗಬೇಕಿದ್ದ ಪರಿಹಾರ ಇನ್ನೂ ಸಿಕ್ಕಿಲ್ಲ..

ಶವ ಸಿಕ್ಕ ಬಳಿಕ ಡಿ ಎನ್ ಎ ಪರೀಕ್ಷೆಗೆ ಅಂತ ಮಾದರಿಗಳನ್ನ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ತೆಗೆದುಕೊಂಡು ಹೋಗಿದ್ದೆ ಬಂತು. ಆ ಮಾದರಿ ಕಥೆ ಎನಾಗಿದೆ.‌ ಡಿ ಎನ್ ಎ ಪರೀಕ್ಷೆಯ ವರದಿ ಎನಾಗಿದೆ ಎಂದು ಲಲಿತಮ್ಮನಿಗಾಗಲಿ ಗ್ರಾಮಸ್ಥರಿಗಾಗಲಿ ಮಾಹಿತಿ ಇಲ್ಲ. ಅಧಿಕಾರಿಗಳನ್ನು ಕೇಳಿದರೇ ಡಿ ಎನ್ ಎ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ ಬಂದ ಬಳಿಕವೇ ನಿಮಗೆ ಪರಿಹಾರರ ಸಿಗುತ್ತೆ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ ಪ್ರವಾಹ ಬಂದ ಹೋದ ನಂತರ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪನವರೇ ಡಿ ಎನ್ ಎ ವರದಿ ಬರುವವರೆಗೂ ಕಾಯಬೇಡಿ ಮೊದಲು ಲಲಿತಮ್ಮನಿಗೆ ಪರಿಹಾರ ನೀಡಿ ಎಂದು ಹೇಳಿದ್ದರಂತೆ ಆದರೆ ಅಧಿಕಾರಿಗಳು ಪರಿಹಾರವನ್ನೂ ನೀಡುತ್ತಿಲ್ಲ. ಈ ಬಗ್ಗೆ ಅಥಣಿ ತಹಶೀಲ್ದಾರ್ ಅವರನ್ನ ಕೇಳಿದ್ರೆ ಪೊಲೀಸ್ ಇಲಾಖೆ ನಮಗೆ ಇನ್ನೂ ವರದಿ ನೀಡಿಲ್ಲ ಅಂತ ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಸಿಎಂ ಬಣ್ಣದ ಮಾತಿಗೆ ಮರುಳಾಗಿ ನೆರೆ ಸಂತ್ರಸ್ತರಿಂದ ಬಿಜೆಪಿಗೆ ಮತ - ಗೆದ್ದ ಶಾಸಕರ ವರ್ತನೆಯಿಂದ ಸಂತ್ರಸ್ತರು ಅತಂತ್ರ

ಸ್ವತಹ ಮುಖ್ಯಮಂತ್ರಿಗಳೇ ಪರಿಹಾರ ನೀಡಿ ಎಂದು ಆದೇಶ ಮಾಡಿದರೂ ಸಹ ಅಧಿಕಾರಿಗಳು ಪರಿಹಾರ ನೀಡುವುದಕ್ಕೆ ಮೀನ ಮೇಷ ಎಣಿಸುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಇತ್ತ ಡಿ ಎನ್ ಎ ಪರೀಕ್ಷೆಯ ವರದಿ ಎನಾಯ್ತು ಎಂಬ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿಯೂ ಇಲ್ಲ ಹೀಗಾಗಿ ಪ್ರವಾಹದಲ್ಲಿ ಮಗನನ್ನೂ ಕಳೆದುಕೊಂಡು ಮನೆಯನ್ನೂ ಸಹ ಕಳೆದುಕೊಂಡು ಲಿಲತಮ್ಮ ಸಧ್ಯ ಬೇರೆಯವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.(ವರದಿ : ಲೋಹಿತ್ ಶಿರೋಳ)
First published: February 6, 2020, 7:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading