Seema.RSeema.R
|
news18-kannada Updated:February 27, 2020, 7:08 PM IST
ಮೃತ ಯೋಧ
ಬೆಂಗಳೂರು (ಫೆ.27): ಕಾಶ್ಮೀರದಲ್ಲಿ ಹುತಾತ್ಮರಾಗಿರುವ ಕೋಲಾರ ಮೂಲದ ಯೋಧನ ಸಾವಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕೋಲಾರದ ಬಂಗಾರಪೇಟೆಯ ಕಣಿಂಬೆಲೆ ಗ್ರಾಮದ ಪ್ರಶಾಂತ್ (25) ಹುತಾತ್ಮ ಯೋಧ. ಮದ್ರಾಸ್ ಎಂಆರ್ಸಿ 17ನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರಶಾಂತ್ ಜಮ್ಮು ಕಾಶ್ಮೀರದ ರಜೋರಿಯಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆನ್ನಲಾಗಿದೆ.
ಇವರ ಸಾವಿಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ದೇಶಕ್ಕಾಗಿ ವೀರಮರಣ ಅಪ್ಪಿದ ಪ್ರಶಾಂತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದ ಸದಸ್ಯರಿಗೆ ಈ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಜೀವನ್ಮರಣದ ಹೋರಾಟದಲ್ಲಿರುವ ಮುತ್ತಪ್ಪ ರೈ ವಿರುದ್ಧ ಆಪ್ತರಿಂದಲೇ ಸಿಸಿಬಿಗೆ ದೂರು
ಯೋಧ ಪ್ರಶಾಂತ್ ಯೋಧನ ಸಾವಿನ ಸುದ್ದಿಯಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಅವರ ಪಾರ್ಥಿವ ಶರೀರ ನಾಳೆ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.
First published:
February 27, 2020, 6:58 PM IST