ಇಂದು ದೆಹಲಿಗೆ ಸಿಎಂ ಬಿಎಸ್ ವೈ ಭೇಟಿ; ಕುತೂಹಲ ಮೂಡಿಸಿದ ಯಡಿಯೂರಪ್ಪ ನಡೆ!

ಇದೀಗ ಮತ್ತೆ ಆರು ತಿಂಗಳ ಬಳಿಕ ದೆಹಲಿ ಭೇಟಿಗೆ ಮುಂದಾಗಿರುವ ಯಡಿಯೂರಪ್ಪ ಅವರು ರಾಜ್ಯಕ್ಕೆ ಬರಬೇಕಾದ ಸವಲತ್ತುಗಳ ಬಗ್ಗೆ ಮಾತುಕಥೆಯ ಜೊತೆಗೆ ಇತರೇ ಏನಾದರೂ ವಿಷಯಗಳ ಬಗ್ಗೆ ಪ್ರಸ್ತಾಪಿಸಲಿದ್ದಾರ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ.

ಬಿ.ಎಸ್​. ಯಡಿಯೂರಪ್ಪ - ಬಿ.ವೈ. ವಿಜಯೇಂದ್ರ.

ಬಿ.ಎಸ್​. ಯಡಿಯೂರಪ್ಪ - ಬಿ.ವೈ. ವಿಜಯೇಂದ್ರ.

 • Share this:
  ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಕೂಗಿನ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿ ಪ್ರವಾಸ ಕೈಗೊಂಡಿದ್ದು ಇಡೀ ಬಿಜೆಪಿ ನಾಯಕರ ಕಣ್ಣು ದೆಹಲಿಯ ಕಡೆಗೆ ನೆಟ್ಟಿದ್ದು ಯಡಿಯೂರಪ್ಪ ಅವರು ಯಾವ ಲೆಕ್ಕಾಚಾರ ಇಟ್ಟುಕೊಂಡು ರಾಷ್ಟ್ರ ರಾಜಧಾನಿಗೆ ಹಾರಿದ್ದಾರೆ ಎಂದು ಕುತೂಹಲ ಭರಿತ ಕಣ್ಣುಗಳಿಂದ ನೋಡುತ್ತಿದ್ದಾರೆ. ಸಿಎಂ ಕಚೇರಿಯ ಮೂಲಗಳ ಪ್ರಕಾರ, ಮೇಕೆದಾಟು ಯೋಜನೆ, ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳು, ಲಸಿಕೆ ಹೆಚ್ಚುವರಿ, ಬಾಕಿ ಜಿಎಸ್​ಟಿ ಅನುದಾನ ಸಂಬಂಧ ಚರ್ಚೆಗೆ ತೆರಳುತ್ತಿದ್ದಾರೆ ಎಂದು ಮಾಹಿತಿ ಇದೆ. ಆದರೂ ಈ ಭೇಟಿ ಇದೊಂದೆ ವಿಷಯಕ್ಕೆ ಸಂಬಂಧಪಟ್ಟಿದ್ದಲ್ಲ ಎಂಬುದು ರಾಜಕೀಯ ಲೆಕ್ಕಾಚಾರ.

  ಕಳೆದ ಜನವರಿ 10 ರಂದು ದೆಹಲಿಗೆ ಹೋಗಿದ್ದ ಯಡಿಯೂರಪ್ಪ ಅವರು ಅಲ್ಲಿಂದ ಬಂದಾಗ ಶಾಂಕಿಂಗ್​ ನ್ಯೂಸ್​ ಹರಿದಾಡಿತ್ತು. ನಾಯಕತ್ವ ಬದಲಾವಣೆಗೆ ಯಡಿಯೂರಪ್ಪ ಅವರು ಒಪ್ಪಿದ್ದಾರೆ ಎಂದು, ಆದರೆ ಆ ಊಹಾಪೋಹವು ಸಹ ನಂತರದ ದಿನಗಳಲ್ಲಿ ಸುಳ್ಳಾಗಿತ್ತು.

  ಇದೀಗ ಮತ್ತೆ ಆರು ತಿಂಗಳ ಬಳಿಕ ದೆಹಲಿ ಭೇಟಿಗೆ ಮುಂದಾಗಿರುವ ಯಡಿಯೂರಪ್ಪ ಅವರು ರಾಜ್ಯಕ್ಕೆ ಬರಬೇಕಾದ ಸವಲತ್ತುಗಳ ಬಗ್ಗೆ ಮಾತುಕಥೆಯ ಜೊತೆಗೆ ಇತರೇ ಏನಾದರೂ ವಿಷಯಗಳ ಬಗ್ಗೆ ಪ್ರಸ್ತಾಪಿಸಲಿದ್ದಾರ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ.

  ಇವರ ದೆಹಲಿ ಭೇಟಿ ವಿಚಾರ ಸಿಎಂ ವಿರೋಧಿ ಬಣಗಳಿಗಂತೂ ಸಿಹಿ-ಹುಳಿಯ ವಿಚಾರ ಎಂದೇ ಕರೆಯಬಹುದು.

  ಗುರುವಾರ ಮಧ್ಯಾಹ್ನದ ಒಳಗೆ ಪ್ರಧಾನಿ ಮೋದಿ ಅವರ ಭೇಟಿಗೆ ಸಮಯ ನಿಗದಿ ಬಗ್ಗೆ ಪ್ರಧಾನಿ ಕಚೇರಿ ಮಾಹಿತಿ ಕೊಡಲಿದೆ. ಪಿಎಂ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ಸಿಕ್ಕಿದರೆ ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಗ್ಗೆ ದೆಹಲಿಗೆ ಪ್ರಯಾಣಿಸಲು ಸಿಎಂ ಯಡಿಯೂರಪ್ಪ ಅವರು ನಿರ್ಧರಿದ್ದಾರೆ ಎಂದು ಹೇಳಲಾಗಿದೆ.

  ಕಳೆದ ಜನವರಿ ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆದು ಬಂದಿದ್ದ ಸಿಎಂ ಯಡಿಯೂರಪ್ಪ ಅವರು ಇದೀಗ ಎರಡನೇ ಸಲ ದೆಹಲಿಗೆ ಹೋಗುತ್ತಿರುವುದು ರಾಜ್ಯದ ಅಭಿವೃದ್ಧಿ, ವಿವಿಧ ಯೋಜನೆಗಳಿಗೆ ಒಪ್ಪಿಗೆ, ಹೆಚ್ಚುವರಿ ಲಸಿಕೆ ಬೇಡಿಕೆ, ಬಾಕಿ ಅನುದಾನ ಸಂಬಂಧ ಚರ್ಚೆ ಮಾಡಲಿದ್ದಾರೆ ಎಂಬುದು ಸದ್ಯದ ಮಾಹಿತಿ. ಆದರೆ ತನ್ನ ವಿರೋಧಿಗಳನ್ನು ಕಟ್ಟಿ ಹಾಕಿ ಸಿಎಂ ಬೆಂಬಲಿಗರಿಗೆ ಏನಾದರೂ ಪಟ್ಟ ಕಟ್ಟುತ್ತಾರಾ ಅಥವಾ ತಮ್ಮ ಮಗ ವಿಜಯೇಂದ್ರ ಅವರಿಗೆ ಏನಾದರೂ ಆಯಕಟ್ಟಿನ ಸ್ಥಾನ ಕೊಡಿಸಲಿದ್ದಾರಾ ಎಂಬುದು ಕುತೂಹಲದ ವಿಷಯವಾಗಿದೆ.

  ಇದನ್ನೂ ಓದಿ: ನಾನು ರಾಷ್ಟ್ರಪತಿ ಚುನಾವಣೆಗೆ ನಿಲ್ಲುವುದಿಲ್ಲ, ಎಲ್ಲಾ ಊಹಾಪೋಹಗಳು ಸುಳ್ಳು: ಎನ್​ಸಿಪಿ ನಾಯಕ ಶರದ್​ ಪವಾರ್​

  ಪ್ರಧಾನಿ ಸೇರಿದಂತೆ ವಿವಿಧ ಸಚಿವರ ಭೇಟಿಗೂ ಇದೇ ಸಮಯದಲ್ಲಿ ವೇಳಾಪಟ್ಟಿ ಹಾಕೊಕೊಂಡಿರುವ ಯಡಿಯೂರಪ್ಪ ಅವರು ಮೇಕೆದಾಟು ವಿಚಾರವನ್ನು ಪ್ರಸ್ತಾಪಿಸಿ ಏನಾದರೂ ಡ್ಯಾಮೇಜ್​ ಕಂಟ್ರೋಲ್​ ಮಾಡುತ್ತಾರಾ ಕಾದು ನೋಡಬೇಕಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: