BS Yeddyurappa| ನಾಯಕತ್ವ ಬದಲಾವಣೆ ವಿಚಾರದಲ್ಲಿ ತಮ್ಮನ್ನು ಬೆಂಬಲಿಸಿದವರಿಗೆ ಬರಪೂರ ಕೊಡುಗೆ ನೀಡ್ತಾರ ಯಡಿಯೂರಪ್ಪ?

ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹಲವು ಶಾಸಕರನ್ನ ಒಟ್ಟುಗೂಡಿಸಿ ಸಿಎಂ ಮುಂದುವರಿಕೆಗೆ ಅರುಣ್ ಸಿಂಗ್ ಬಳಿ ಒತ್ತಾಯ ಮಾಡಿದ್ದರು. ಅಲ್ಲದೆ, ರಾಜ್ಯ ಬಿಜೆಪಿ ಯಡಿಯೂರಪ್ಪ ನಾಯಕತ್ವವನ್ನು ಬಲವಾಗಿ ನಂಬಿಕೊಂಡಿದೆ ಎಂದು ಮನದಟ್ಟು ಮಾಡಿದ್ದರು.

ಬಿಎಸ್ ಯಡಿಯೂರಪ್ಪ.

ಬಿಎಸ್ ಯಡಿಯೂರಪ್ಪ.

  • Share this:
    ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಮೂಡಿದ್ದ ಎಲ್ಲಾ ಗೊಂದಲಗಳೂ ಕೊನೆಗೂ ಅಂತ್ಯವಾಗಿದೆ. 3 ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದ ಉಸ್ತುವಾರಿ ಅರುಣ್ ಸಿಂಗ್ ಈಗಾಗಲೇ ಹೈಕಮಾಂಡ್​ಗೆ ತನ್ನ ವರದಿ ನೀಡಿದ್ದು, ಸಿಎಂ ಯಡಿಯೂರಪ್ಪ ಕಾರ್ಯವೈಖರಿಗೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಅಲ್ಲದೆ, ಸಿಎಂ ಬದಲಿಸುವ ಅಗತ್ಯತೆ ಇಲ್ಲ ಎಂದೂ ತಿಳಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರ ಸ್ಥಾನ ಮುಂದಿನ 2 ವರ್ಷಗಳಿಗೆ ಭದ್ರವಾಗಿರಲಿದೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ನಾಯಕತ್ವದ ವಿಚಾರದಲ್ಲಿ ತನ್ನನ್ನು ಬೆಂಬಲಿಸಿದ ಶಾಸಕರು ಮತ್ತು ಸಚಿವರುಗಳ ಕ್ಷೇತ್ರಗಳಿಗೆ ಯಡಿಯೂರಪ್ಪ ಬರಪೂರ ಕೊಡುಗೆಗಳನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ. ಇಂದು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಿಎಂ ವಿಷೇಷ ಅನುದಾನ ನೀಡಲಿದ್ದಾರೆ ಎನ್ನಲಾಗುತ್ತಿದೆ.

    ಅರುಣ್ ಸಿಂಗ್ ರಾಜ್ಯ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್​, ಸಿ.ಪಿ. ಯೋಗೇಶ್ವರ್​, ಹೆಚ್​. ವಿಶ್ವನಾಥ್​ ಹಾಗೂ ಅರವಿಂದ್​ ಬೆಲ್ಲದ್​ ಸೇರಿದಂತೆ ಅನೇಕ ನಾಯಕರು ಸಿಎಂ ಯಡಿಯೂರಪ್ಪ ವಿರುದ್ಧ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಅಲ್ಲದೆ, ಅತೃಪ್ತ ಮತ್ತು ಬಂಡಾಯ ಶಾಸಕರಿಂದ ಸಹಿ ಸಂಗ್ರಹವನ್ನೂ ನಡೆಸಿದ್ದರು. ಹೀಗಾಗಿ ಯಡಿಯೂರಪ್ಪ ಸ್ಥಾನ ಕತ್ತಿಯಂಚಿನ ನಡಿಗೆಯಾಗಿತ್ತು.

    ಆದರೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹಲವು ಶಾಸಕರನ್ನ ಒಟ್ಟುಗೂಡಿಸಿ ಸಿಎಂ ಮುಂದುವರಿಕೆಗೆ ಅರುಣ್ ಸಿಂಗ್ ಬಳಿ ಒತ್ತಾಯ ಮಾಡಿದ್ದರು. ಅಲ್ಲದೆ, ರಾಜ್ಯ ಬಿಜೆಪಿ ಯಡಿಯೂರಪ್ಪ ನಾಯಕತ್ವವನ್ನು ಬಲವಾಗಿ ನಂಬಿಕೊಂಡಿದೆ ಎಂದು ಮನದಟ್ಟು ಮಾಡಿದ್ದರು. ಇದೇ ಕಾರಣಕ್ಕೆ ಅರುಣ್ ಸಿಂಗ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸಲು ಒಲವು ತೋರಿಸಿದ್ದರು ಎನ್ನಲಾಗುತ್ತಿದೆ.

    ಇದನ್ನೂ ಓದಿ: Ravi Poojari| ಭೂಗತ ಪಾತಕಿ ರವಿ ಪೂಜಾರಿಯನ್ನು ಶೂಟೌಟ್​ ಪ್ರಕರಣದಲ್ಲಿ ಕಸ್ಟಡಿಗೆ ನೀಡುವಂತೆ ಗುಜರಾತ್ ಮನವಿ

    ಹೀಗಾಗಿ ತನ್ನ ಸ್ಥಾನವನ್ನು ಉಳಿಸಿದ ಶಿಷ್ಯ ಪಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಭರ್ಜರಿ ಕೊಡು ಮೂಲಕ ಗುರು ಕಾಣಿಕೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಸಚಿವ ಸಂಪುಟದಲ್ಲಿ ವಿಶೇಷ ಅನುದಾನ ನೀಡುವ ಸಾಧ್ಯತೆ ಇದ್ದು, ರೇಣುಕಾಚಾರ್ಯ ಕ್ಷೇತ್ರಕ್ಕೆ ಹೆಚ್ಚಿನ ಬಂಪರ್ ಕೊಡುಗೆಗಳು ಸಿಗಲಿವೆ ಎನ್ನಲಾಗುತ್ತಿದೆ. ಹೊನ್ನಾಳಿಯ ಹಲವು ಯೋಜನೆಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ.

    ಪ್ರಮುಖ ಯೋಜನೆಗಳಾದ ಗೋವಿನಕೆರೆ, ಹನುಮಸಾಗರಕ್ಕೆ ನೀರಾವರಿ ಯೋಜನೆ ಹಾಗೂ ಸಾಸಿವೆಹಳ್ಳಿ ಲಿಫ್ಟ್ ಇರಿಗೇಶನ್ ಯೋಜನೆಗಳಿಗೆ ನೂರಾರು ಕೋಟಿ ಅನುದಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹನುಮಸಾಗರ ಹಾಗೂ ಗೋವಿನಕೋವಿ ಸೇರಿ 94ಕರೆಗಳಿಗೆ ನೀರು ತುಂಬಿಸುವ ಯೋಜನೆಗೆ 415 ಕೋಟಿ, ಸಾಸಿವೆಹಳ್ಳಿ ಏತನೀರಾವರಿಗೆ 167 ಕೋಟಿಗೆ ಅನುಮೋದನೆ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: Explained| ಸದ್ಯಕ್ಕೆ ಯಡಿಯೂರಪ್ಪ ಸ್ಥಾನ ಭದ್ರ....ಆದರೂ, ಆ ಮೂವರು ಕಮಲ ನಾಯಕರು ಸಿಎಂ ವಿರುದ್ಧ ಬಂಡಾಯ ಎದ್ದಿರುವುದು ಏಕೆ?

    ಈ ಯೋಜನೆಗಳಿಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದರೆ, ಹೊನ್ನಾಳಿ ಕ್ಷೇತ್ರ ಸಾವಿರಾರು ಏಕರೆ ಭೂ ಪ್ರದೇಶಗಳಿಗೆ ಕೃಷಿ ಮತ್ತು ಕುಡಿಯುವ ನೀರು ಪೂರೈಕೆಯಾಗಲಿದೆ. ಅಲ್ಲದೆ, ಈ ಯೋಜನೆಗಳು ಹೊನ್ನಾಳಿಯ ಜನರ ದಶಕದ ಕನಸಾಗಿದೆ. ಇದಲ್ಲದೆ, ಇನ್ನೂ ಅನೇಕ ಯೋಜನೆಗಳಿಗೆ ಸಿಎಂ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: