ಉಪಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ, ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತ; ಸಿದ್ದರಾಮಯ್ಯ ಭವಿಷ್ಯ

ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸಿದ ತಕ್ಷಣ ಕಾರ್ಯಕರ್ತರು ಅವರನ್ನು ಸುತ್ತುವರೆರು. ಈ ವೇಳೆ ಸಿದ್ದರಾಮಯ್ಯ ಅವರು ಎಲ್ಲರಿಗೂ ಸಾಮಾಜಿಕ ಅಂತರದ ಪಾಠ ಮಾಡಿದರು. ಎಲ್ಲರೂ ದೂರ ಹೋಗಿ. ನನ್ನಿಂದ 6 ಅಡಿ ದೂರ ಇರಿ. ನನ್ನ ಅಕ್ಕ ಪಕ್ಕ ನಿಂತರೂ ನಾನು ಬರೋಲ್ಲ‌. ನೀವು ಅಲ್ಲಿ ನಿಂತರೆ ನಾನು ಮಾಧ್ಯಮಗಳಿಗೂ ಮಾತನಾಡಲ್ಲ ಎಂದು ಹೇಳಿ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತನನ್ನು ದೂರ ತಳ್ಳಿದರು. 

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಮೈಸೂರು; ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ. ಶಿರಾದಲ್ಲಿ ಜಯಚಂದ್ರ ಗೆಲ್ತಾರೆ. ಆರ್ ಆರ್ ನಗರದಲ್ಲಿ ಕುಸುಮಾ ಗೆಲ್ಲುವ ಸಾಧ್ಯತೆ ಇದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

  ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಇದು ಕಾಂಗ್ರೆಸ್ ಪರವಾದ ಮತಗಳಾಗಿವೆ. ಶಿರಾದಲ್ಲಿ ಕಳೆದ ಬಾರಿ ಅಪಪ್ರಚಾರ ಆಗಿತ್ತು. ಆರ್ ಆರ್ ನಗರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿತ್ತು. ಇದರ ಜೊತೆಗೆ ನಾವೆಲ್ಲ ಪ್ರಚಾರ ಮಾಡಿದಾಗಲು ಜನರು ಕಾಂಗ್ರೆಸ್ ಪರ ಒಲವು ತೋರಿದ್ದರು. ಈ ಎಲ್ಲ ಕಾರಣದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.

  ಈ ವರ್ಷ ಶಾಲೆಗಳನ್ನು ಆರಂಭಿಸುವುದು ಬೇಡ. ಇದು ಸರ್ಕಾರಕ್ಕೆ ನನ್ನ ವೈಯುಕ್ತಿಕ ಸಲಹೆ. ಈ ವರ್ಷ ಆನ್‌ಲೈನ್ ಕ್ಲಾಸ್ ಮಾಡಿ ಎಲ್ಲರನ್ನು ಪಾಸ್ ಮಾಡಲಿ. ಸಂಪೂರ್ಣ ಕೊರೋನಾ ಮುಕ್ತವಾದ ನಂತರ ಶಾಲೆಗಳನ್ನು ಆರಂಭಿಸಲಿ. ತರಾತುರಿಯಲ್ಲಿ ಶಾಲೆ ಆರಂಭಿಸುವುದು ಬೇಡ ಎಂದು ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಲಹೆ ನೀಡಿದರು.

  ಅಮೆರಿಕಾದಲ್ಲಿ ಮೋದಿ ಹೆಸರು ನಡೆಯೋದಿಲ್ಲ. ಅಲ್ಲಿ ಜನ ಮೋದಿ ಮುಖ ನೋಡಿ ಓಟ್ ಹಾಕ್ತಾರಾ?. ಟ್ರಂಪ್ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿಕೊಂಡು ಮತ ಕೇಳಿದ್ದರು. ಅಮೆರಿಕಾ ಚುನಾವಣೆಯೇ ಬೇರೆ. ಅಲ್ಲಿನ ಅನಿವಾಸಿ ಭಾರತೀಯರೂ ಮೋದಿ ಮುಖ ನೋಡಿಕೊಂಡು ಮತ ಹಾಕಲ್ಲ. ಭಾರತದಲ್ಲೇ ಮೋದಿ ವಿರುದ್ಧ ಜನಾಭಿಪ್ರಾಯ ಶುರುವಾಗಿದೆ. ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿದ್ದಾರೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ.
  ಹೀಗಾಗಿ ಯುವ ಜನರು ಮೋದಿ ವಿರುದ್ಧ ಸಿಟ್ಟು ಹೊರಹಾಕುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮೇಲೆ ಈರುಳ್ಳಿ ಎಸೆದಿದ್ದಾರೆ. ಇಂತಹ ಸಂದರ್ಭದಲ್ಲಿ ಚುನಾವಣೆಯಲ್ಲಿ ಮೋದಿ ಹೆಸರು ಬಳಕೆಯಾಗೋಲ್ಲ ಎಂದು ಅಭಿಪ್ರಾಯಪಟ್ಟರು.

  ಇದನ್ನು ಓದಿ: US Election 2020 Results | ಜೊ ಬಿಡೆನ್​ಗೆ ಮುನ್ನಡೆ, ಟ್ರಂಪ್​ಗೆ ಹಿನ್ನಡೆ; ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದ ಹಾಲಿ ಅಧ್ಯಕ್ಷ

  ಉಪಚುನಾವಣೆ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು. ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡ್ತಾರೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವುದಿಲ್ಲ. ಖಡಾಖಂಡಿತವಾಗಿಯೂ ಯಡಿಯೂರಪ್ಪ ಬದಲಾಗ್ತಾರೆ. ನನಗೆ ದೆಹಲಿಯಿಂದ ಬಂದಿರುವ ಮಾಹಿತಿ ಆಧಾರದ ಮೇಲೆ ಹೇಳುತ್ತಿದ್ದೇನೆ. ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವುದು ಸಹ ಒಂದು ಕಾರಣ ಇರಬಹುದು. ಹಲವು ದಿನದಿಂದ ಸಿಎಂ ಬದಲಾವಣೆ ಮಾಡುವ ಚಿಂತನೆಯಲ್ಲಿ ಬಿಜೆಪಿ ಇದೆ. ಹಾಗಾಗಿ ಉಪಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಹೇಳಿದರು.

  ಕಾರ್ಯಕರ್ತರಿಗೆ ಕೊರೋನಾ ಪಾಠ

  ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸಿದ ತಕ್ಷಣ ಕಾರ್ಯಕರ್ತರು ಅವರನ್ನು ಸುತ್ತುವರೆರು. ಈ ವೇಳೆ ಸಿದ್ದರಾಮಯ್ಯ ಅವರು ಎಲ್ಲರಿಗೂ ಸಾಮಾಜಿಕ ಅಂತರದ ಪಾಠ ಮಾಡಿದರು. ಎಲ್ಲರೂ ದೂರ ಹೋಗಿ. ನನ್ನಿಂದ 6 ಅಡಿ ದೂರ ಇರಿ. ನನ್ನ ಅಕ್ಕ ಪಕ್ಕ ನಿಂತರೂ ನಾನು ಬರೋಲ್ಲ‌. ನೀವು ಅಲ್ಲಿ ನಿಂತರೆ ನಾನು ಮಾಧ್ಯಮಗಳಿಗೂ ಮಾತನಾಡಲ್ಲ ಎಂದು ಹೇಳಿ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತನನ್ನು ದೂರ ತಳ್ಳಿದರು.
  Published by:HR Ramesh
  First published: