ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ರಾಜಕೀಯ ಬದುಕಿಗೆ ಕ್ಷೇತ್ರದ ಸಮಸ್ಯೆ ಎದುರಾಗಿದೆ. ಅವರ ಮುಂದಿನ ರಾಜಕೀಯ ಜೀವನ ಯಾವ ಕ್ಷೇತ್ರದಿಂದ ಆರಂಭವಾಗಲಿದೆ ಎಂಬ ಗೊಂದಲ ಮೊದಲಿನಿಂದಲೂ ಇದೆ. ಇದೀಗ ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರದ ಮೇಲೆ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಕಣ್ಣು ಹಾಕಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.
ಪಕ್ಕಾ ಲಿಂಗಾಯತ ಕ್ಷೇತ್ರವಾಗಿರುವ ಹಾನಗಲ್ ಮೇಲೆ ಬಿ ವೈ ವಿಜಯೇಂದ್ರ ಒಲವು ತೋರುತ್ತಿರುವುದರಿಂದ ಸಿಎಂ ಉದಾಸಿ ಕುಟುಂಬ ಸದಸ್ಯ ಹಾಲಿ ಎಂಪಿ ಶಿವಕುಮಾರ್ ಉದಾಸಿಗೆ ಟೆನ್ಶನ್ ಶುರುವಾಗಿದೆ. ಶಿವಕುಮಾರ್ ಉದಾಸಿ ಎಂಪಿ ಆಗಿರುವುದರಿಂದ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೇಳುವಂತಿಲ್ಲ. ಟಿಕೆಟ್ ಕೇಳಿದರೂ ಹೈಕಮಾಂಡ್ ಅಷ್ಟು ಸುಲಭಕ್ಕೆ ಒಪ್ಪಲ್ಲ. ಹಾನಗಲ್ ಕ್ಷೇತ್ರ ಬೇರೆಯವರಿಗೆ, ಹೊರಗಿನವರಿಗೆ ಬಿಟ್ಟು ಕೊಡುವಂತಿಲ್ಲ. ಬಿಟ್ಟುಕೊಟ್ಟರೆ ಕ್ಷೇತ್ರ ಕೈ ತಪ್ಪಿದ ಹಾಗೆ ಆಗುತ್ತದೆ. ಇದೇ ಕಾರಣಕ್ಕೆ ಶತಾಯಗತಾಯ ಕುಟುಂಬದವರಿಗೆ ಟಿಕೆಟ್ ಕೊಡಿಸಬೇಕು. ಹಾನಗಲ್ ಕ್ಷೇತ್ರ ಉಳಿಸಿಕೊಳ್ಳಬೇಕು. ಇದು ಸದ್ಯ ಸಂಸದ , ಸಿಎಂ ಉದಾಸಿ ಪುತ್ರ
ಶಿವಕುಮಾರ್ ಉದಾಸಿ ಲೆಕ್ಕಾಚಾರವಾಗಿದೆ.
ಶಿವಕುಮಾರ್ ಉದಾಸಿ ಸಂಕಷ್ಟ ಗೊತ್ತಾಗಿ ವಿಜಯೇಂದ್ರ ಚೆಕ್ ಮೇಟ್ ಇಡಲು ಮುಂದಾಗಿದ್ದಾರೆ. ಹಾನಗಲ್ ಕ್ಷೇತ್ರದ ಮೇಲೆ ಬಿ ವೈ ವಿಜಯೇಂದ್ರ ಕಣ್ಣು ಹಾಕಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹಾನಗಲ್ ಕ್ಷೇತ್ರಕ್ಕೆ ವಿಜಯೇಂದ್ರ ಸ್ಪರ್ಧೆ ನಿಮ್ಮ ಅಭಿಪ್ರಾಯ ಏನು? ಎಂಬ ಫೇಸ್ ಬುಕ್ ಮೂಲಕ ಅಭಿಪ್ರಾಯ ಸಂಗ್ರಹಕ್ಕೆ ಪರೋಕ್ಷವಾಗಿ ವಿಜಯೇಂದ್ರ ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ಅರಕಲಗೂಡು ಎ ಮಂಜು; ಡಿಕೆಶಿ ಸಾಹಸಕ್ಕೆ ಸಿದ್ದರಾಮಯ್ಯ ಬ್ರೇಕ್!
ವೀರಶೈವ- ಲಿಂಗಾಯತ ಪೊಲಿಟಿಕಲ್ ಬ್ರಿಗೇಡ್, ವಿಎಲ್ಪಿ ಬ್ರಿಗೇಡ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಒಂದು ವೇಳೆ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದು ನಾಯಕತ್ವ ಬದಲಾವಣೆಯಾದರೆ ಮಂತ್ರಿ ಸ್ಥಾನ ದಕ್ಕುವ ಅವಕಾಶ ಸಿಕ್ಕರೆ ಖಾಲಿ ಇರುವ ಹಾನಗಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಶಾಸಕನಾಗಬಹುದೆಂಬ ಲೆಕ್ಕಚಾರ ಹಾಕಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ