ದಾವಣಗೆರೆ: ರಾಜ್ಯದಲ್ಲಿ ಈ ಬಾರಿಯೂ ಗೋಹತ್ಯೆ (cow slaughter) ವಿಚಾರವಾಗಿ ಮತ್ತೆ ಭಾರೀ ಚರ್ಚೆ ನಡೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ (Cow Slaughter Prohibition Act) ಜಾರಿಯಲ್ಲಿದೆ. ಆದರೆ ಕಾಂಗ್ರೆಸ್ ಸರ್ಕಾರ (Congress government) ಅದನ್ನು ಬದಲಾಯಿಸಲು ಅಥವಾ ನಿಷೇಧ ಮಾಡಲು ಯತ್ನಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಪಶುಸಂಗೋಪನ ಸಚಿವ ಕೆ. ವೆಂಕಟೇಶ್ (Animal husbandry minister K. Venkatesh) ಹೇಳಿಕೆಯೊಂದನ್ನು ನೀಡಿದ್ದರು. ಎಮ್ಮೆ, ಕೋಣ ಕಡಿಯಬಹುದಾದರೆ ಹಸುಗಳನ್ನು ಏಕೆ ಕಡಿಯಬಾರದು ಎಂದಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ (BJP) ಹಾಗೂ ಹಿಂದೂ ಪರ ಸಂಘಟನೆಗಳು (Hindu organizations) ಆಕ್ರೋಶ ಹೊರಹಾಕಿದ್ದವು. ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ನೀಡಿದ್ದಾರೆ.
12 ವರ್ಷ ತುಂಬಿದ ಹಸುಗಳ ಹತ್ಯೆಗೆ ಅವಕಾಶವಿದೆ
ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 12 ವರ್ಷ ಮೇಲ್ಪಟ್ಟ ಹಸುಗಳ ಹತ್ಯೆಗೆ ಅವಕಾಶ ಇದೆ ಎಂದಿದ್ದಾರೆ. 1964ರ ಕಾಯಿದೆಯಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಈ ಕಾಯ್ದೆಯಲ್ಲಿ 12 ವರ್ಷ ತುಂಬಿದ ಹಸುಗಳು, ಬರಡು ಹಸುಗಳು, ವ್ಯವಸಾಯಕ್ಕೆ ಬಾರದ ಹಸುಗಳ ವಧೆಗೆ ಅವಕಾಶವಿದೆ ಅಂತ ಹೇಳಿದ್ದಾರೆ.
ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ನಿರ್ಧಾರ ಮಾಡುತ್ತೇವೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಚಿವ ವೆಂಕಟೇಶ್ ಅವರು ಹೇಳುವಾಗ ಸ್ಪಷ್ಟವಾಗಿ ಹೇಳಿಲ್ಲ ಅಷ್ಟೇ. ಇದರಿಂದ ಗೊಂದಲವಾಗಿದೆ ಅಂತ ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: Beef: ಎಮ್ಮೆ, ಕೋಣ ಕಡಿಯಬಹುದಾದರೆ ಹಸುವನ್ನೇಕೆ ಕಡಿಯಬಾರದು? ಪಶುಸಂಗೋಪನ ಸಚಿವರ ಪ್ರಶ್ನೆ!
ಸಚಿವ ವೆಂಕಟೇಶ್ ಹೇಳಿದ್ದೇನು?
ಎಮ್ಮೆ, ಕೋಣಗಳನ್ನು ಕಡಿಯಬಹುದು ಅಂತಾದರೆ ಹಸುಗಳನ್ನೂ ಏಕೆ ಕಡಿಯಬಾರದು ಅಂತ ಪಶು ಸಂಗೋಪನ ಸಚಿವ ಕೆ. ವೆಂಕಟೇಶ್ ಪ್ರಶ್ನಿಸಿದ್ದರು. ಕೆಲದಿನಗಳ ಹಿಂದಷ್ಟೇ ಮೈಸೂರಿನಲ್ಲಿ ಮಾತನಾಡಿದ್ದ ಅವರು, ಗೋಹತ್ಯೆ ನಿಷೇಧ ಕಾಯ್ದೆ ರದ್ಧತಿ ಬಗ್ಗೆ ಸುಳಿವು ನೀಡಿದ್ದರು.
ನಮ್ಮ ಮನೆಯಲ್ಲೂ ಹಸು ಸತ್ತಾಗ ಸಮಸ್ಯೆ ಆಗಿತ್ತು
ನಮ್ಮ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ ಎಂದಿದ್ದ ಸಚಿವರು, ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು ಅಂತ ಹೇಳಿದ್ರು. ಸತ್ತ ಹಸುವಿನ ಮೃತದೇಹ ಎತ್ತಲು ನಮಗ್ಯಾರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಮೃತ ಹಸುವಿನ ದೇಹವನ್ನು ಎತ್ತಿಸಿ, ಗುಂಡಿತೋಡಿಸಿ ಹೂಳಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು ಅಂತ ತಮ್ಮ ಮನೆಯ ಕಥೆ ಹೇಳಿದ್ದರು.
ಇದನ್ನೂ ಓದಿ: Prabhu Chauhan: ಪಶು ಸಂಗೋಪನಾ ಸಚಿವ ವೆಂಕಟೇಶ್ ಮೆಂಟಲ್ ಆಗಿದ್ದಾರೆ: ಪ್ರಭು ಚೌಹಾಣ್ ಕಿಡಿ
ಗೋಹತ್ಯೆ ಕಾಯ್ದೆ ನಿಷೇಧ ಕಾಯ್ದೆ ರದ್ಧುಗೊಳಿಸೋ ಬಗ್ಗೆ ಚರ್ಚೆ
ಕರ್ನಾಟಕದಲ್ಲಿಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಈ ಕಾಯ್ದೆಗೆ ಕೊಕ್ ಕೊಡುವ ಸುಳಿವು ನೀಡಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಪಶುಸಂಗೋಪನ ಸಚಿವರು ಹೇಳಿಕೆ ನೀಡಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ ಅಂತ ಸಚಿವ ವೆಂಕಟೇಶ್ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ