ಬೆಂಗಳೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಕಾಂಗ್ರೆಸ್ (AICC) ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ನಿವಾಸ ಎದುರು ಅಪಮಾನ ಎದುರಾಗಿದೆ. ಸೋನಿಯಾ ಗಾಂಧಿ ಅವರ ಭೇಟಿಗಾಗಿ ಸಿಎಂ ಸಿದ್ದು, ದೆಹಲಿಯ (Delhi) ಜನ್ಪಥ್ 10 ರಸ್ತೆಗೆ ತೆರಳಿದ್ದ ಸಂದರ್ಭದಲ್ಲಿ ಸೆಕ್ಯೂರಿಟಿ ಸಿಬ್ಬಂದಿ ಅವರ ಕಾರನ್ನು ತಡೆದಿದ್ದಾರೆ. ಈ ವೇಳೆ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ಇದ್ದ ಅಧಿಕಾರಿಯೊಬ್ಬರು ಕಾರಿನಲ್ಲಿ ಕರ್ನಾಟಕ ಸಿಎಂ (Karnataka CM) ಇದ್ದಾರೆ ಎಂದು ಸೆಕ್ಯೂರಿಟಿಗೆ ತಿಳಿಸಿದ್ದರು. ಆದರೂ ಒಳಗಡೆ ಸಭೆ ನಡೆಯುತ್ತಿದ್ದೆ ಎಂದು ಪ್ರವೇಶ ನೀಡಲು ನಿರಾಕರಿಸಿದ್ದರು. ಆ ಬಳಿಕ ಸಿಎಂ ಕಾರಿಗೆ (CM Car) ಪ್ರವೇಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಬಾಸ್ ಯಾರೆಂದು ಹೇಳಲು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನ ಮಾಡುತ್ತಿದೆಯಾ? ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಸಿದ್ದು ನಿವಾಸಕ್ಕೆ ಪೊಲೀಸ್ ಭದ್ರತೆ
ಇನ್ನು, ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿದೆ. ನಗರದ ಶಿವಾನಂದ ಸರ್ಕಲ್ ಬಳಿಯ ಗಾಂಧಿ ಭವನ ಬಳಿ ಇರುವ ಸಿಎಂ ಸಿದ್ದರಾಮಯ್ಯ ಮನೆ ಮುಂದೆಯ ರಸ್ತೆಯ ಎರಡು ಕಡೆ ಸಂಚಾರವನ್ನ ಪೊಲೀಸರು ಬಂದ್ ಮಾಡಿದ್ದಾರೆ.
ಇದನ್ನೂ ಓದಿ: Cookers Gift: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ವಿಡಿಯೋ ರಿಲೀಸ್ ಮಾಡಿದ ಎಚ್‌ಡಿಕೆ!
ರಸ್ತೆಗೆ ಬ್ಯಾರಿಕೇಡ್ ಹಾಕಿ ಪೊಲೀಸರು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಆಕಾಂಕ್ಷಿಗಳ ಬೆಂಬಲಿಗರು ಸಿದ್ದು ನಿವಾಸದ ಮುಂದೆ ಜಮಾಯಿಸುವ ಸಾಧ್ಯತೆ ಹಿನ್ನೆಲೆ ಪೊಲೀಸರು ಭದ್ರತೆಯನ್ನ ಹೆಚ್ಚಿಸಿದ್ದಾರೆ.
Bezzati to @siddaramaiah
Had to explain he is CM to enter 10 janpath
Congress leadership trying to tell who is the boss? pic.twitter.com/NrQcqN7wfz
— 𝐒𝐚𝐠𝐚𝐫 𝐆𝐨𝐮𝐝 (@Sagar4BJP) May 26, 2023
ಸಿಎಂ ಸಿದ್ದರಾಮಯ್ಯ ಬಣಕ್ಕೆ 14 ಸಚಿವ ಸ್ಥಾನ ಸಿಗಲಿದ್ಯಂತೆ. ಸಿದ್ದು ಬಣದ ಬಸವರಾಜ ರಾಯರೆಡ್ಡಿ, ಹೆಬ್ಬಾಳ ಕ್ಷೇತ್ರದ ಬೈರತಿ ಸುರೇಶ್, ಪಿರಿಯಾಪಟ್ಟಣದ ಕೆ.ವೆಂಕಟೇಶ್, ಬ್ಯಾಟರಾಯನಪುರ ಕ್ಷೇತ್ರದ ಕೃಷ್ಣ ಭೈರೇಗೌಡ, ಹೆಚ್.ಸಿ ಮಹದೇವಪ್ಪ, ಶಿವರಾಜ ತಂಗಡಗಿ, ಬಿ.ನಾಗೇಂದ್ರ ಸೇರಿದಂತೆ 14 ಜನರಿಗೆ ಮಂತ್ರಿ ಭಾಗ್ಯ ಸಿಗೋ ಸಾಧ್ಯತೆ ಇದೆ.
ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಬಣಕ್ಕೆ 9 ಮಂತ್ರಿಸ್ಥಾನ ಸಿಕ್ಕಿದೆ. ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಚೆಲುವರಾಯಸ್ವಾಮಿ, ಡಾ.ಎಂ.ಸಿ.ಸುಧಾಕರ್, ಪಿ.ನರೇಂದ್ರಸ್ವಾಮಿ, ಮಧು ಬಂಗಾರಪ್ಪ, ಡಿ.ಸುಧಾಕರ್ ಮಂತ್ರಿ ಸ್ಥಾನ ಸಿಗೋದು ಪಕ್ಕಾ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ