ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸುರಿದ ಕೆಲವೇ ಗಂಟೆಗಳ ಮಳೆಗೆ (Rain) ಹಲವು ಅವಾಂತರಗಳು ಎದುರಾಗಿದ್ದು, ಮಳೆಯಿಂದ ಅಂಡರ್ಪಾಸ್ನಲ್ಲಿ (Underpass) ಶೇಖರಣೆಯಾಗಿದ್ದ ಮಳೆ ನೀರಿನಲ್ಲಿ ಮುಳುಗಿ ಯುವತಿಯೊಬ್ಬರು (Woman) ಸಾವನ್ನಪ್ಪಿದ್ದಾರೆ. ನಗರದ ಕೆಆರ್ ಸರ್ಕಲ್ (KR Circle) ಅಂಡರ್ಪಾಸ್ನಲ್ಲಿ ದುರ್ಘಟನೆ ನಡೆದಿದೆ. ಇನ್ನು, ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಲಭ್ಯವಾಗದೆ ಯುವತಿ ಸಾವನ್ನಪ್ಪಿದ ಆರೋಪ ಕೇಳಿ ಬಂದಿದೆ. ಇನ್ನು ಮಳೆಯ ಕುರಿತಂತೆ ಮಾಧ್ಯಮಗಳ ವರದಿ ಬೆನ್ನಲ್ಲೇ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಭೇಟಿ ನೀಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದು, ಮೃತ ಯುವತಿಯ ಕುಟುಂಸ್ಥರಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಜನತೆ ತತ್ತರಗೊಂಡಿದ್ದು, ಜೂನ್‌ನಲ್ಲಿ ಆರಂಭವಾಗುವ ಮಳೆಗಾಲಕ್ಕೆ ನಿಮ್ಮ ತಯಾರಿ ಏನು ಎಂದು ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದ್ದರು. ಆದರೆ ಸಿಎಂಗೆ ಸಮರ್ಪಕ ಮಾಹಿತಿಯನ್ನು ಬಿಬಿಎಂಪಿ ಅಧಿಕಾರಿಗಳು ನೀಡಲು ವಿಫಲರಾಗಿದ್ದರು. ಸಿದ್ಧರಾಮಯ್ಯರ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದ್ದರು. ಕೇವಲ ಅರ್ಧ ಗಂಟೆ ಮಳೆಗೆ ಈ ರೀತಿ ಆದರೆ ಹೇಗೆ? ನೀವು ಕುಳಿತು ಬೇಸಿಗೆ ಕಾಲದಲ್ಲಿ ಮಾಡಿದ್ದೇನು? ಈಗ ನಾನೇ ಅಲ್ಲಿಗೆ ಬರಬೇಕಾ? ಎಂದು ಸಿಎಂ ಗರಂ ಆಗಿದ್ದರು.
ಇದನ್ನೂ ಓದಿ: Bengaluru: ಕೆಆರ್ ಸರ್ಕಲ್ನಲ್ಲಿ ಮಳೆ ನೀರಿನಲ್ಲಿ ಮುಳುಗಿದ ಕಾರು; ನಾಲ್ವರ ರಕ್ಷಣೆ, ಯುವತಿ ಸಾವು
ಅಲ್ಲದೇ, ಕೆ.ಆರ್.ಸರ್ಕಲ್ ಬಳಿಯ ದುರಂತದ ಬಗ್ಗೆ ಮೊದಲು ಒಬ್ಬ ಅಧಿಕಾರಿಯನ್ನು ಆಸ್ಪತ್ರೆಗೆ ಕಳುಹಿಸಿ ಎಂದು ಸಿಎಂ ಸಿದ್ಧರಾಮಯ್ಯ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಿಎಂ ಸ್ವತಃ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮಳೆ ಬಂದರೆ ಮೊದಲಿನಿಂದಲೂ ಅಂಡರ್ ಪಾಸ್ನಲ್ಲಿ ನೀರು ನಿಲ್ಲುತ್ತದೆ. ಮಳೆ ನೀರು ನಿಲ್ಲುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್ ಆಗಿದ್ದರು. ಆದರೆ ಮಳೆಯಿಂದ ಬ್ಯಾರಿಗೇಡ್ ಕೊಚ್ಚಿ ಹೋಗಿದೆ. ಇದನ್ನು ಗಮನಿಸದೆ ಚಾಲಕ ಅಂಡರ್ ಪಾಸ್ಗೆ ಬಂದಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ