ಬೆಂಗಳೂರು: ಸಚಿವಾಕಾಂಕ್ಷಿಗಳ ಮೇರೆ ಮೀರುತ್ತಿರುವ ಒತ್ತಡದ ನಡುವೆಯೇ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar) ದೆಹಲಿಗೆ ಹೊರಟಿದ್ದಾರೆ. ಮೊದಲ ಸಂಪುಟ ವಿಸ್ತರಣೆ (Cabinet Expansion) ಕುರಿತು ಹೈಕಮಾಂಡ್ನೊಂದಿಗೆ (High Command) ಚರ್ಚಿಸಲು ಇಂದು ಸಂಜೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದೆಹಲಿಗೆ (Delhi) ಪ್ರಯಾಣ ಬೆಳೆಸಲಿದ್ದಾರೆ. ಸಂಪುಟ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ಹಗ್ಗಜಗ್ಗಾಟ ಆಗಿತ್ತು. ಮೊದಲ ಹಂತದಲ್ಲಿ ಕೇವಲ 8 ಮಂದಿ ಮಾತ್ರ ಸಂಪುಟ ಸೇರುವಂತಾಗಿತ್ತು. ಸಂಪುಟ ಸೇರಿರುವ ಎಂಟು ಜನರಿಗೂ ಇನ್ನೂ ಖಾತೆ ಹಂಚಿಕೆ ಆಗಿಲ್ಲ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪಟ್ಟಿಯಲ್ಲಿ ತಮ್ಮ ಆಪ್ತರಿಗೆ ಮೊದಲ ಆದ್ಯತೆ ನೀಡಿದ್ದಾರಂತೆ. ಆದ್ರೆ ಮುಂದಿನ ವರ್ಷವೇ ಲೋಕಸಭಾ ಚುನಾವಣೆ ಹಿನ್ನೆಲೆ ಎರಡರಿಂದ ನಾಲ್ಕು ಸ್ಥಾನಗಳನ್ನ ಖಾಲಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ನಾಲ್ಕು ಕೋಟಾದಡಿಯಲ್ಲಿ ಸಚಿವ ಸ್ಥಾನ ಹಂಚಿಕೆ ಸಾಧ್ಯತೆ!
ಸಚಿವ ಸ್ಥಾನವನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತು ಹೈಕಮಾಂಡ್ ಎಂಬ ನಾಲ್ಕು ಕೋಟಾದಡಿಯಲ್ಲಿ ಹಂಚಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: DK Shivakumar: ಮತ ಹಾಕಿ ಅಮ್ಮನ ಆಶೀರ್ವಾದ ಪಡೆದ ಡಿಕೆಶಿ 14 ದಿನದಲ್ಲಿ ಡಿಸಿಎಂ, ಹೀಗಿತ್ತು 'ಬಂಡೆ'ಯ ಜರ್ನಿ
ಸಿಎಂ ಸಿದ್ದರಾಮಯ್ಯ ಅವರ ಕೋಟಾದಡಿಯಲ್ಲಿ 11 ಜನಕ್ಕೆ ಇನ್ನುಳಿದಂತೆ ಮೂವರ ಕೋಟಾದಡಿಯಲ್ಲಿ ತಲಾ ಆರು ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ