'ಜಮೀರ್​​ ಚಿಲ್ಲರೆ ಗಿರಾಕಿ, ಗುಂಡೂರಾವ್​​ಗೆ ಮೆದುಳೇ ಇಲ್ಲ'; ಏಕವಚನದಲ್ಲಿ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ

ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಜಮೀರ್ ಮಾತನಾಡಿದರೆ, ನಾನೂ ಕೂಡ ಅದೇ ಭಾಷೆಯಲ್ಲಿ ಮಾತನಾಡುವುದು ನನಗೆ ಗೊತ್ತಿದೆ, ಎಂದು ಜಮೀರ್ ಅಹಮದ್​​​ಗೆ ಎಚ್ಚರಿಕೆ ಕೊಟ್ಟರು.

ಎಂಪಿ ರೇಣುಕಾಚಾರ್ಯ-ಜಮೀರ್​ ಅಹಮದ್​-ದಿನೇಶ್​ ಗುಂಡೂರಾವ್​​

ಎಂಪಿ ರೇಣುಕಾಚಾರ್ಯ-ಜಮೀರ್​ ಅಹಮದ್​-ದಿನೇಶ್​ ಗುಂಡೂರಾವ್​​

  • Share this:
ಬೆಂಗಳೂರು(ಜ.24): "ಕರ್ನಾಟಕದಲ್ಲಿ ಬೆಂಕಿ ಹೊತ್ತಿ ಉರಿಯುವ ಹೇಳಿಕೆ ಕೊಡುವ ಯು.ಟಿ. ಖಾದರನ್ನು ಮೊದಲು ಉಚ್ಛಾಟನೆ ಮಾಡಿ. ಜಮೀರ್ ಅಹಮದ್​​​ ಕೋಟಾ ನೋಟಿನ  ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪ ಇದೆ. ಹೀಗಾಗಿ ಅವರನ್ನು ಮೊದಲು ಉಚ್ಚಾಟನೆ ಮಾಡಿ. ಮೊದಲು ನಿನ್ನ ಪಕ್ಷ ಸರಿಪಡಿಸಿಕೋ. ನಿನಗೆ ರಾಜಕಾರಣದ ಮೆದುಳೇ ಇಲ್ಲ. ಅದನ್ನು ಬಿಟ್ಟು ನನ್ನ ಬಗ್ಗೆ ಮಾತನಾಡಬೇಡ", ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ  ದಿನೇಶ್​ ಗುಂಡೂರಾವ್​ ವಿರುದ್ಧ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರ ವಿರುದ್ಧ ತೀವ್ರ ಕಿಡಿಕಾರಿದರು. "ಜಮೀರ್ ಅಹಮದ್ ಒಬ್ಬ ಚಿಲ್ಲರೆ ಗಿರಾಕಿ. ಫುಟ್​​ಪಾತ್​​​ನಲ್ಲಿ ಇದ್ದವನು.  ಚಾಮರಾಜಪೇಟೆಯಲ್ಲಿ ದಂಧೆ ಮಾಡಿಕೊಂಡಿದ್ದವನನ್ನು ಕರೆತಂದು ದೇವೇಗೌಡರು ಮಂತ್ರಿ ಮಾಡಿದರು. ಅವರಿಗೆ ಜಮೀರ್ ಏನು ಮಾಡಿದ್ರು ಅಂತಾ ಗೊತ್ತಿದೆ. ಅಣ್ಣ ಕುಮಾರಣ್ಣ ಅಂತಾ ಹೇಳಿಕೊಂಡು ತಿರುಗುತ್ತಿದ್ದವನು ಕುಮಾರಸ್ವಾಮಿಗೆ ಏನು ಮಾಡಿದ್ರು ಎಂದು ಗೊತ್ತಿದೆ. ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಜಮೀರ್ ಮಾತನಾಡಿದರೆ, ನಾನೂ ಕೂಡ ಅದೇ ಭಾಷೆಯಲ್ಲಿ ಮಾತನಾಡುವುದು ನನಗೆ ಗೊತ್ತಿದೆ," ಎಂದು ಜಮೀರ್ ಅಹಮದ್​​​ಗೆ ಎಚ್ಚರಿಕೆ ಕೊಟ್ಟರು.

ಟಿಕೆಟ್​ ರಹಿತ ಪ್ರಯಾಣಿಕರಿಂದ ಈ ರೈಲ್ವೆ ಅಧಿಕಾರಿ ಸಂಗ್ರಹಿಸಿದ ದಂಡದ ಮೊತ್ತ ಕೇಳಿದರೆ ಶಾಕ್​ ಆಗ್ತೀರಾ..!

 ದಿನೇಶ್ ಗುಂಡೂರಾವ್ ಗೆ ಸವಾಲು:

ಇದೇ ವೇಳೆ ಕಾಂಗ್ರೆಸ್​ ನಾಯಕ ದಿನೇಶ್​ ಗುಂಡೂರಾವ್​ಗೆ ರೇಣುಕಾಚಾರ್ಯ ಸವಾಲು ಹಾಕಿದರು. "ನೀವು ಲೋಕಸಭೆಯಲ್ಲಿ  ಎಷ್ಟು ಸ್ಥಾನ ಗೆದ್ದಿದ್ದೀರಾ...? ಉಪ ಚುನಾವಣೆಯಲ್ಲಿ ಎಷ್ಟು ಶಾಸಕರನ್ನು ಗೆಲ್ಲಿಸಿದ್ರಿ. ಈ ರಾಜ್ಯದಲ್ಲಿ ನಿಮಗೆ ಯಾವ ವರ್ಚಸ್ಸು ಇದೆ. ಕರ್ನಾಟಕದ ನಡೆದ ಉಪ ಚುನಾವಣೆಯಲ್ಲಿ ಹೀನಾಯ ಸೋಲಾಗಿದೆ. ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರಿ. ಈಗ ಪ್ರತಿಪಕ್ಷ ಸ್ಥಾನ ಖಾಲಿ ಇದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೂಡ ಖಾಲಿ ಇದೆ. ಕಾಂಗ್ರೆಸ್ ನಲ್ಲಿ 10 ಬಣಗಳಿವೆ. ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ನಿಮಗಿಲ್ಲ," ಎಂದು ತೀವ್ರ ವಾಗ್ದಾಳಿ ನಡೆಸಿದರು

"ನನ್ನ ಕ್ಷೇತ್ರದಲ್ಲಿ ಮುಸ್ಲಿಮರಿಗೆ ದ್ರೋಹ ಮಾಡಿಲ್ಲ. ಸಮುದಾಯದ ಅಭಿವೃದ್ಧಿಗೆ ನಾನು ಶ್ರಮಿಸಿದ್ದೇನೆ.  ಆ ಊರಿನಲ್ಲಿ ನನಗೆ ಸ್ವಲ್ಪ ಮತ ಹಿನ್ನಡೆ ಆಗಿತ್ತು. ಆ ಕಾರಣಕ್ಕಾಗಿ ಮುಸ್ಲಿಮರನ್ನು ಪ್ರಶ್ನಿಸಿದ್ದೇನೆ. ಬಿಜೆಪಿ ನಿಮಗೆ ಏನು ಅನ್ಯಾಯ ಮಾಡಿದೆ? ಕಾಂಗ್ರೆಸ್, ಜೆಡಿಎಸ್ ಮಾತನ್ನು ನಂಬಬೇಡಿ. ನಿಮ್ಮ ಮನಸ್ಸು ಬದಲಾಯಿಸಿಕೊಳ್ಳಿ ಎಂದಿದ್ದೆ ಅಷ್ಟೇ," ಎಂದು ಹೇಳಿದರು.

ನಳಿನಿ ಪರ ಬ್ಯಾಟಿಂಗ್ ಮಾಡೋ ಬದಲು ವಾದ ಮಂಡಿಸಿ; ಸಿದ್ದರಾಮಯ್ಯಗೆ ಮೈಸೂರು ವಕೀಲರ ಬಹಿರಂಗ ಸವಾಲು

"ಸಿಎಂ ವಿದೇಶ ಪ್ರವಾಸದಿಂದ ವಾಪಸ್ ಬಂದ ತಕ್ಷಣ ಈ ತಿಂಗಳೊಳಗಾಗಿ ಸಚಿವ ಸಂಪುಟ ವಿಸ್ತರಣೆ ಆಗುವುದು ಖಚಿತ. ಈಗಾಗಲೇ ಸಿಎಂ ಪಕ್ಷದ ವರಿಷ್ಟರೊಂದಿಗೆ ಚರ್ಚಿಸಿದ್ದಾರೆ.  ಸಚಿವ ಸಂಪುಟ ವಿಸ್ತರಣೆಗೆ ಯಾವುದೇ ತೊಂದರೆಯಿಲ್ಲ. ಉಪಮುಖ್ಯಮಂತ್ರಿ ಹುದ್ದೆ ಕುರಿತು ನನ್ನ ಅಭಿಪ್ರಾಯ ಹೇಳಿದ್ದೇನೆ. ಪಕ್ಷದ ವೇದಿಕೆಯಲ್ಲಿ ಯಾರಿಗೆ ಏನು ಹೇಳಬೇಕೋ ಹೇಳಿದ್ದೇನೆ‌. ಈಗ ಮತ್ತೆ ಅದರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ," ಎಂದರು.

 
First published: