ಬೆಂಗಳೂರು(ಸೆ.05): ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಕೆಲವು ಯೋಜನೆಗಳನ್ನು ಘೋಷಿಸಿದ್ದರು. ಅವುಗಳಲ್ಲಿ ರೈತ ವಿದ್ಯಾ ನಿಧಿ ಯೋಜನೆ ಕೂಡ ಒಂದು. ಇಂದು ಈ ಯೋಜನೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿಸಿ ಪಾಟೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ರೈತರ ಮಕ್ಕಳಿಗೆ ಸರ್ಕಾರವು ಕೋರ್ಸ್ಗಳಿಗನುಸಾರವಾಗಿ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗ ಬೊಮ್ಮಾಯಿ ಘೋಷಿಸಿದ್ದ ಮೊದಲ ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆ ಇದಾಗಿದೆ.
- ಪದವಿಯ ಮುನ್ನ ಪಿಯುಸಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2500, ವಿದ್ಯಾರ್ಥಿನಿಯರಿಗೆ 3000 ರೂ.
- ಬಿ.ಎ. ಬಿಎಸ್ಸ್ಸಿ, ಬಿ.ಇ, ಇತರೆ ಪದವಿ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ 5000, ವಿದ್ಯಾರ್ಥಿನಿಯರಿಗೆ 5,500 ರೂ
- LL.B, ಪ್ಯಾರಾಮೆಡಿಕರ್ ಸೇರಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ 7,500 ವಿದ್ಯಾರ್ಥಿನಿಯರು-8000 ರೂ.
- MBBS, BE, B.TEC ಸೇರಿ ಎಲ್ಲಾ ಸ್ನಾತಕೋತ್ತರ ಕೋರ್ಸ್ ವಿದ್ಯಾರ್ಥಿಗಳಿಗೆ 10 ಸಾವಿರ, ವಿದ್ಯಾರ್ಥಿನಿಯರಿಗೆ 11 ಸಾವಿರ ರೂ ನೀಡಲಿದೆ.
ಇದನ್ನೂ ಓದಿ:Tokyo Paralympics- ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ 5ನೇ ಚಿನ್ನ; ಕೃಷ್ಣಾ ನಾಗರ್ ಅಮೋಘ ಪ್ರದರ್ಶನ
ಯೋಜನೆ ಲೋಕಾರ್ಪಣೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಒಬ್ಬ ಜನಪ್ರತಿನಿಧಿ ತನ್ನ ವಿಚಾರವನ್ನು ಯೋಜನಾ ರೂಪದಲ್ಲಿ ಅತಿ ಶೀಘ್ರದಲ್ಲೇ ಜಾರಿಗೆ ತಂದರೆ ಅದಕ್ಕಿಂತ ಸಂತೋಷ ಮತ್ತೊಂದಿರಲ್ಲ. ಇವತ್ತು ಅಂತಹ ಸಂತೋಷ ನನಗೆ ಆಗಿದೆ. ಪ್ರಧಾನಿ ಮೋದಿಯವರು ಯಾವುದಾದರೂ ಒಂದು ಯೋಜನೆ ಘೋಷಿಸಿದರೆ, ನಿಗದಿತ ಸಮಯದಲ್ಲಿ ಜನರಿಗೆ ತಲುಪುವಂತೆ ಮಾಡಿದ್ದಾರೆ. ಈ ಹಿಂದಿನ ಸರ್ಕಾರಗಳು, ಪ್ರಧಾನ ಮಂತ್ರಿಗಳು, ಜನ ನಾಯಕರು ಯೋಚನೆ ಮಾಡದಂತಹ ಯೋಜನೆಯನ್ನ ಮೋದಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ರೈತರ ಆದಾಯವನ್ನ ದ್ವಿಗುಣ ಮಾಡ್ತೀನಿ ಅಂತಾ ಘೋಷಣೆ ಮಾಡಿದ್ದರು. ಈ ಯೋಜನೆ ರೂಪಿಸೋಕೆ ಧೈರ್ಯಬೇಕು, ಇದೊಂದು ಸವಾಲಿನ ಕೆಲಸ. ಹಲವರು ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟು ಯೋಜನೆ ಮಾಡ್ತಾರೆ. ಆದ್ರೆ ನಮ್ಮ ನಾಯಕ ಮೋದಿ ಮುಂದಿನ ಜನಾಂಗವನ್ನ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸ್ತಾರೆ ಎಂದು ಹೇಳಿದರು.
ಇದನ್ನೂ ಓದಿ:Tokyo Paralympics: ಬೆಳ್ಳಿ ಗೆದ್ದಿದ್ದಕ್ಕೆ ಖುಷಿ ಇದೆ, ಚಿನ್ನ ಗೆಲ್ಲಬೇಕಾಗಿತ್ತು; ಕನ್ನಡಿಗ ಸುಹಾಸ್ ಮೊದಲ ಪ್ರತಿಕ್ರಿಯೆ
ಆದೇಶ ಉಲ್ಲಂಘಿಸಿದ ಸಿಎಂ
ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ ನಿಷೇಧ ಮಾಡಿ ಆದೇಶಿಸಿದ್ದ ಸಿಎಂ ಬೊಮ್ಮಾಯಿ ಅವರೇ ಇಂದು ಆದೇಶವನ್ನು ಉಲ್ಲಂಘಿಸಿದರು. ಸಚಿವ ಬಿ ಸಿ ಪಾಟೀಲ್ ರಿಂದ ಖುದ್ದು ರೇಷ್ಮೆ ಹಾರ ಹಾಕಿಸಿಕೊಂಡರು. ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಕಾರ್ಯಕ್ರಮದಲ್ಲಿ ಸಿಎಂಗೆ ರೇಷ್ಮೆ ಹಾರದ ಸನ್ಮಾನ ಮಾಡಲಾಯಿತು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ಗೂ ರೇಷ್ಮೆ ಹಾರ ಹಾಕಿ ಸನ್ಮಾನ ಮಾಡಲಾಯಿತು. ಇತ್ತೀಚೆಗೆ ಸಿಎಂ ಬೊಮ್ಮಾಯಿ ಅಮಿತ್ ಶಾಗೆ ಏರ್ ಪೋರ್ಟಿನಲ್ಲಿ ಗಂಧದ ಹಾರ ಹಾಕಿ ಸ್ವಾಗತ ಕೋರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ