HOME » NEWS » State » CM POLITICAL SECRETARY MP RENUKACHARYA HITS OUT AT BJP MLA YATNAL AT BANGALORE LG

ಹಾದಿ-ಬೀದಿಯಲ್ಲಿ ಮಾತಾಡೋನಲ್ಲ; ನಾನು ಹೊನ್ನಾಳಿಯ ಗಂಡು; ಯತ್ನಾಳ್​ಗೆ ರೇಣುಕಾಚಾರ್ಯ ತಿರುಗೇಟು

ನನಗೆ ಮಂತ್ರಿ ಆಗಬೇಕೆಂಬ ಆಸೆ ಇಲ್ಲ. ನಾನು ನಾಲ್ಕು ಗೋಡೆ ಮಧ್ಯೆ ಮಾತಾಡ್ತೇನೆ. ಶಾಸಕರ ಸಭೆಯಲ್ಲಿ ಮಾತಾಡಿದ್ದೇನೆ. ಬಹಿರಂಗವಾಗಿ ಹೇಳಿಕೆ ನೀಡಲ್ಲ. ನನ್ನ ವೈಯಕ್ತಿಕ ವರ್ಚಸ್ಸು ಕಡಿಮೆ ಮಾಡಿಕೊಳ್ಳಲ್ಲ ಎಂದು ಹೇಳುವ ಮೂಲಕ ಯತ್ನಾಳ್​ಗೆ ತಿರುಗೇಟು ನೀಡಿದರು.

news18-kannada
Updated:January 6, 2021, 3:19 PM IST
ಹಾದಿ-ಬೀದಿಯಲ್ಲಿ ಮಾತಾಡೋನಲ್ಲ; ನಾನು ಹೊನ್ನಾಳಿಯ ಗಂಡು; ಯತ್ನಾಳ್​ಗೆ ರೇಣುಕಾಚಾರ್ಯ ತಿರುಗೇಟು
ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ
  • Share this:
ಬೆಂಗಳೂರು(ಜ.06): ಮಾಜಿ ಸಚಿವ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಶಾಸಕ ಯತ್ನಾಳ್​​ಗೆ ತಿರುಗೇಟು ನೀಡಿದ್ದಾರೆ. ನಾನು ಮಧ್ಯ ಕರ್ನಾಟಕ ಭಾಗದ ಶಾಸಕ. ಅಂತೆಯೇ ಉತ್ತರ ಕರ್ನಾಟಕ ಭಾಗದ ಶಾಸಕರನ್ನೂ ಗೌರವಿಸುತ್ತೇನೆ. ನಾನು ಹಾದಿ-ಬೀದಿಯಲ್ಲಿ ಮಾತಾಡೋನಲ್ಲ. ನಾನು ಕೂಡ ಹೊನ್ನಾಳಿಯ ಗಂಡು. ನನಗೆ ಯಾರ ಮೇಲೂ ಕೋಪ‌ ಇಲ್ಲ.  ಯತ್ನಾಳ್ ಮಂತ್ರಿ ಆಗಲಿಲ್ಲ ಎನ್ನುವ ಕಾರಣಕ್ಕೆ ಭ್ರಮನಿರಸನಗೊಂಡು ಹೀಗೆಲ್ಲಾ ಮಾತನಾಡುತ್ತಿರಬಹುದು ಎಂದು ರೇಣುಕಾಚಾರ್ಯ ಶಾಸಕ ಯತ್ನಾಳ್​ಗೆ ವ್ಯಂಗ್ಯ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್​ ವಿರುದ್ಧ ವಾಗ್ದಾಳಿ ನಡೆಸಿದರು. ಸಂಘಟನೆ ನಮಗೆ ‌ತಾಯಿ ಸಮಾನ. ಪಕ್ಷದ ಬಗ್ಗೆ , ನಾಯಕರ ಬಗ್ಗೆ ಮಾತಾಡಬಾರದು. ಯಡಿಯೂರಪ್ಪ ನಮ್ಮ‌ ಶಾಸಕಾಂಗ ಪಕ್ಷದ ನಾಯಕ. ಶಾಸಕಾಂಗ ಪಕ್ಷದ ನಾಯಕರ ಬಗ್ಗೆ ಮಾತಾಡಬಾರದು. ನಾನು ಯಡಿಯೂರಪ್ಪರ ಪರ ಮಾತಾಡಲ್ಲ. ನಾನು ಪಕ್ಷದ ಪರ ಮಾತಾಡ್ತೇನೆ. ಪಕ್ಷದ ವಿರುದ್ಧ ಮಾತಾಡಿದ್ರೆ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.

30 ವರ್ಷ ರಾಜಕೀಯ ಮಾಡಿದ್ದೀನಿ, ಯಾರಿಗೂ ಹೆದರೋ ಮಗ ನಾನಲ್ಲ; ಗುಡುಗಿದ ಶಾಸಕ ಯತ್ನಾಳ್​

ನನಗೆ ಮಂತ್ರಿ ಆಗಬೇಕೆಂಬ ಆಸೆ ಇಲ್ಲ. ನಾನು ನಾಲ್ಕು ಗೋಡೆ ಮಧ್ಯೆ ಮಾತಾಡ್ತೇನೆ. ಶಾಸಕರ ಸಭೆಯಲ್ಲಿ ಮಾತಾಡಿದ್ದೇನೆ. ಬಹಿರಂಗವಾಗಿ ಹೇಳಿಕೆ ನೀಡಲ್ಲ. ನನ್ನ ವೈಯಕ್ತಿಕ ವರ್ಚಸ್ಸು ಕಡಿಮೆ ಮಾಡಿಕೊಳ್ಳಲ್ಲ ಎಂದು ಹೇಳುವ ಮೂಲಕ ಯತ್ನಾಳ್​ಗೆ ತಿರುಗೇಟು ನೀಡಿದರು.

ಮುಂದುವರೆದ ಅವರು, ಹೊನ್ನಾಳಿ ಹೊಡೆತ ರಾಜ್ಯಕ್ಕೆ ಫೇಮಸ್ ಹೊನ್ನಾಳಿ, ನ್ಯಾಮತಿಯಲ್ಲಿ ಕುಸ್ತಿಪಂದ್ಯ ನಡೆಯುತ್ತದೆ. ರಾಷ್ಟ್ರಮಟ್ಟದ ಕುಸ್ತಿಪಟುಗಳು ಭಾಗವಹಿಸುತ್ತಾರೆ. ನಮ್ಮ ಪಕ್ಷದ ವಿರುದ್ಧ ಹೊನ್ನಾಳಿ ಹೊಡೆತ ತೋರಿಸಲ್ಲ. ಪ್ರತಿಪಕ್ಷಗಳ ವಿರುದ್ಧ ಹೊನ್ನಾಳಿ ಹೊಡೆತ ತೋರಿಸುತ್ತೇವೆ ಎಂದರು.
Published by: Latha CG
First published: January 6, 2021, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories