ಯತ್ನಾಳ್​​ಗೆ ಹುಚ್ಚು ಹಿಡಿದಿದೆ, ಸಿದ್ದರಾಮಯ್ಯ ಜೆಡಿಎಸ್​​ನಿಂದ ಬರುವಾಗ ಸೇಲ್ ಆಗಿದ್ರಾ?; ರೇಣುಕಾಚಾರ್ಯ ವಾಗ್ದಾಳಿ

ರಾಯಚೂರಿನಲ್ಲಿ ರಾಯರೆಡ್ಡಿ ಹಾಗೂ ಸಿದ್ದರಾಮಯ್ಯನವರ ಬಿಜೆಪಿ ಲೂಟಿ ಹಣದಲ್ಲಿ ಚುನಾವಣೆ ಮಾಡುತ್ತಿದೆ ಎನ್ನುವ ಹೇಳಿಕೆಗೆ, ಲೂಟಿ ಮಾಡಿದ್ದು ಕಾಂಗ್ರೆಸ್, ದೇಶದಲ್ಲಿ ಬಹುಕೋಟಿ ಹಗರಣ ಮಾಡಿದ್ದು ಕಾಂಗ್ರೆಸ್, ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಲೂಟಿ ಮಾಡಿ ಏನಾದ್ರು ಅಂತ ಗೊತ್ತಿಲ್ವಾ?  ಕಾಂಗ್ರೆಸ್‌ಗೆ ಮತ್ತೊಂದು ಹೆಸರು ಲೂಟಿ ಕಾಂಗ್ರೆಸ್ ಎಂದು ಜರಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

  • Share this:
ರಾಯಚೂರು(ಏ.06): ಏಪ್ರಿಲ್ 17ರಂದು ನಡೆಯುವ ಮಸ್ಕಿ ಬೈ ಎಲೆಕ್ಷನ್ ಹಿನ್ನಲೆ, ಬಿಜೆಪಿ , ಕಾಂಗ್ರೆಸ್ ಪಕ್ಷದಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಸಿದ್ದರಾಮಯ್ಯ ಹಾಗೂ ಯತ್ನಾಳ ವಿರುದ್ದ ಆರೋಪ ಮಾಡಿದ್ದಾರೆ. ರಾಯಚೂರಿನ ಮಸ್ಕಿ ಉಪಚುನಾವಣೆ ಪ್ರಚಾರ ಜೋರಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ  ಹುಲ್ಲೂರಿನಲ್ಲಿ ಮಾತನಾಡಿ, ಈಶ್ವರಪ್ಪನವರ ಅಸಮಾಧಾನ ಎಲ್ಲಾ ಸರಿ ಹೋಗುತ್ತೆ, ತಲೆಕೆಡಿಸಿಕೊಳ್ಳುವುದು ಏನೂ ಇಲ್ಲ. ಯತ್ನಾಳ ಮನಸ್ಥಿತಿ ಸರಿಯಿಲ್ಲ, ಅವರಿಗೆ ಹುಚ್ಚು ಹಿಡಿದರೆ ನಾನ್ ಏನ್ ಮಾಡಲಿ, ಯತ್ನಾಳ ಅವರಿಗೆ ಹುಚ್ಚು ಹಿಡಿದಿದೆ. ಅದಕ್ಕೆ ಹುಚ್ಚುಚ್ಚು ಹೇಳಿಕೆಗಳನ್ನ ಕೊಡುತ್ತಾರೆ. ಈಗ ನಾನು ಮಸ್ಕಿಯಲ್ಲಿ ಚುನಾವಣಾ ಪ್ರಚಾರ ಮಾಡಲು ಬಂದಿದ್ದೀನಿ. ಯತ್ನಾಳ ಬಗ್ಗೆ ಮಾತನಾಡಲು ಬಂದಿಲ್ಲ ಎಂದರು.

ಡಿಕೆಶಿ, ಸಿದ್ದರಾಮಯ್ಯ ಹತಾಶೆ ಮನೋಭಾವನೆಯಿಂದ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ.  ಪ್ರತಾಪ್ ಗೌಡ ಸೇಲ್ ಆಗಿಲ್ಲ, ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಪಕ್ಷ ಬಿಟ್ಟು ಬಂದಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್​​​ನಿಂದ ಕಾಂಗ್ರೆಸ್‌ಗೆ ಬಂದವರು ನೀವು ಸೇಲಾಗಿದ್ರಾ? ಕಾಂಗ್ರೆಸ್‌ನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರತಾಪ್ ಗೌಡ ಪಾಟೀಲ್ ಸೌಮ್ಯ ಸ್ವಭಾವದ ವ್ಯಕ್ತಿ, ಕ್ಷುಲ್ಲಕ ಹೇಳಿಕೆಗಳನ್ನು ಕೊಡುತ್ತಿರುವ ನಿಮ್ಮ ಆಟ ನಡೆಯಲ್ಲ. ಹಿಂದಿನ ಉಪಚುನಾವಣೆಯಲ್ಲೂ ನಿಮ್ಮ ಆಟ ನಡೆದಿಲ್ಲ, ಜನ ಧೂಳಿಪಟ ಮಾಡಿದ್ದಾರೆ ಎಂದು ಹೇಳಿದರು.

ರಾಯಚೂರಿನಲ್ಲಿ ರಾಯರೆಡ್ಡಿ ಹಾಗೂ ಸಿದ್ದರಾಮಯ್ಯನವರ ಬಿಜೆಪಿ ಲೂಟಿ ಹಣದಲ್ಲಿ ಚುನಾವಣೆ ಮಾಡುತ್ತಿದೆ ಎನ್ನುವ ಹೇಳಿಕೆಗೆ, ಲೂಟಿ ಮಾಡಿದ್ದು ಕಾಂಗ್ರೆಸ್, ದೇಶದಲ್ಲಿ ಬಹುಕೋಟಿ ಹಗರಣ ಮಾಡಿದ್ದು ಕಾಂಗ್ರೆಸ್, ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಲೂಟಿ ಮಾಡಿ ಏನಾದ್ರು ಅಂತ ಗೊತ್ತಿಲ್ವಾ?  ಕಾಂಗ್ರೆಸ್‌ಗೆ ಮತ್ತೊಂದು ಹೆಸರು ಲೂಟಿ ಕಾಂಗ್ರೆಸ್ ಎಂದು ಜರಿದರು.

ಯಡಿಯೂರಪ್ಪ ಪಕ್ಷದ ನಾಯಕರೇ ಹೊರತು ಮಾಲೀಕರಲ್ಲ; ಇಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ; ಸಿ.ಟಿ.ರವಿ

ಪ್ರತಾಪ್ ಗೌಡ ಪಾಟೀಲ್ ಸೇಲ್ ಆಗುವ ವ್ಯಕ್ತಿಯಲ್ಲ, ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಪಕ್ಷ ಬಿಟ್ಟು ಬಂದಿದ್ದಾರೆ ಎಂದರು. ಕಾಂಗ್ರೆಸ್ ನವರು ಮತದಾರರಿಗೆ ಅಪಮಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್ ನಿಂದ ಕಾಂಗ್ರೆಸ್​​​​ಗೆ ಯಾಕೆ ಬಂದ್ರು ಅದನ್ನ ಹೇಳಬೇಕು. ಅಭಿವೃದ್ಧಿ ಆಧಾರದ ಮೇಲೆ ನಾವು ಮತ ಕೇಳುತ್ತಿದ್ದೇವೆ, ಕ್ಷೇತ್ರದಲ್ಲಿ 35% ಮಾತ್ರ ಕಾಂಗ್ರೆಸ್ ಬಗ್ಗೆ ಮತದಾರರಿಗೆ ಒಲವಿದೆ. 65% ಮತದಾರರ ಒಲವು ಬಿಜೆಪಿ ಕಡೆಯಿದೆ. ಎಲ್ಲೆಡೆ ವಿಜಯೇಂದ್ರ ಬರಬೇಕು ಅಂತ ಕೇಳ್ತಾರೆ, ವಿಜಯೇಂದ್ರ ಯೂತ್ ಐಕಾನ್, ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ ಎಂದರು.

ಈ ಸಂದರ್ಭದಲ್ಲಿ ಮಕ್ಕಳು ಪ್ರಚಾರ ಸಂದರ್ಭದಲ್ಲಿ ಭಾಗಿಯಾಗಿರುವುದು. ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಮಾಡಿರುವುದು ಕಂಡು ಬಂತು. ಇಂದು ಸಹ ಘಟಾನುಘಟಿ ನಾಯಕರು ಪ್ರಚಾರ ಮಾಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಒಂದು ಕಡೆಯಾದರೆ, ವಿಜಯೇಂದ್ರ, ಶ್ರೀರಾಮುಲು ಸೇರಿ ಹಲವರು ಪ್ರಚಾರ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಇನ್ನಷ್ಟು ಆರೋಪ ಪ್ರತ್ಯಾರೋಪ ಕೇಳಿ ಬರಲಿವೆ.
Published by:Latha CG
First published: