HOME » NEWS » State » CM POLITICAL SECRETARY MP RENUKACHARYA ARRANGE OXYGEN CYLINDERS AT HONNALI TALUK HOSPITAL LG

ರಾತ್ರೋರಾತ್ರಿ ಆಕ್ಸಿಜನ್ ತುಂಬಿಸಿಕೊಂಡು ಬಂದು ಆತಂಕ ದೂರ ಮಾಡಿದ ಶಾಸಕ ರೇಣುಕಾಚಾರ್ಯ

ಕೇವಲ ಮೂರು ಘಂಟೆ ಮಾತ್ರ ಆಕ್ಸಿಜನ್ ಇದೇ ಎಂದು ತಿಳಿಯುತ್ತಿದ್ದಂತೆ ಕೂಡಲೇ ಅಧಿಕಾರಿಗಳೊಂದಿಗೆ ಹರಿಹರದ ದಿ ಸದರನ್ ಗ್ಯಾಸ್ ಲಿಮಿಟೆಡ್ ನ ಆಕ್ಸಿಜನ್ ಘಟಕಕ್ಕೆ ಆಗಮಿಸಿದ ಶಾಸಕರು, 16 ಆಕ್ಸಿಜನ್ ಸಿಲಿಂಡರ್ ತುಂಬಿಸಿಕೊಂಡು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದಾರೆ.

news18-kannada
Updated:May 13, 2021, 8:16 AM IST
ರಾತ್ರೋರಾತ್ರಿ ಆಕ್ಸಿಜನ್ ತುಂಬಿಸಿಕೊಂಡು ಬಂದು ಆತಂಕ ದೂರ ಮಾಡಿದ ಶಾಸಕ ರೇಣುಕಾಚಾರ್ಯ
ಎಂಪಿ ರೇಣುಕಾಚಾರ್ಯ
  • Share this:
ದಾವಣಗೆರೆ(ಮೇ 13): ಮೊನ್ನೆ ತಾನೆ ನಡೆದ ಚಾಮರಾಜನಗರದ ಘಟನೆ ಇನ್ನೂ ಕಣ್ಮುಂದೆ ಹಾಗೆ ಇದೆ. ಇದೇ ಸಂದರ್ಭದಲ್ಲಿ ಹೊನ್ನಾಳಿ ತಾಲೂಕಿನ ಆಸ್ಪತ್ರೆಯಲ್ಲಿ 20 ಜನರು ಆಕ್ಸಿಜನ್ ಕೊರತೆಯಿಂದ ಜೀವನ್ಮರಣ ಹೊರಟ ನಡೆಸುತ್ತಿದ್ದಾರೆ.  ಆಸ್ಪತ್ರೆ ಸಿಬ್ಬಂದಿಗಳಿಗೆ ಇನ್ನೂ ಕೆಲವು ಗಂಟೆಗಳಲ್ಲಿ ಆಕ್ಸಿಜನ್ ಖಾಲಿ ಆಗುತ್ತದೆ ಅಂತ ಗೊತ್ತಾದ ತಕ್ಷಣ,  ಆಸ್ಪತ್ರೆ ಅಧಿಕಾರಿಗಳು ಶಾಸಕರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ಶಾಸಕರು ಸ್ಥಳಕ್ಕೆ ಬಂದಾಗ, ದಾವಣಗೆರೆಯ ಹೊನ್ನಾಳಿ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಲು ಕೇವಲ ಮೂರು ಘಂಟೆ ಮಾತ್ರ ಬಾಕಿ ಇತ್ತು. 20 ಜನ ಕೊರೊನಾ ಸೋಂಕಿತರು ಆಕ್ಸಿಜನ್ ಬೆಡ್ ನಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಶಾಸಕರು ಹಾಗೂ ಅಧಿಕಾರಿಗಳ ತಂಡ ಖುದ್ದು ಆಕ್ಸಿಜನ್ ಘಟಕಕ್ಕೆ ತೆರಳಿ ಆಕ್ಸಿಜನ್ ಸಿಲಿಂಡರ್ ತಂದು ಸೋಂಕಿತರ ಪಾಲಿಗೆ ಸಂಜೀವಿನಿಯಾಗಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಪಿ.ರೇಣುಕಾಚಾರ್ಯ ಪಿಪಿಇ ಕಿಟ್ ಧರಿಸಿ ಆಕ್ಸಿಜನ್ ವಾರ್ಡ್ ನಲ್ಲಿರುವ ಆಕ್ಸಿಜನ್ ಪರಿಶೀಲನೆ ನಡೆಸಿದರು. ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ 20 ಜನ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೇವಲ ಮೂರು ಘಂಟೆ ಮಾತ್ರ ಆಕ್ಸಿಜನ್ ಬಾಕಿ‌ ಇದೆ ಎಂಬ ವಿಚಾರ ಶಾಸಕರಿಗೆ ತಿಳಿಯುತ್ತಿದ್ದಂತೆ, ಕೂಡಲೇ ಕಾರ್ಯಪ್ರವೃತ್ತರಾದ ಶಾಸಕರು ತಾಲೂಕು ಆಡಳಿತದೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್​​ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಎಬಿಎಆರ್​ಕೆ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆ ಪಡೆಯಿರಿ; ಸಂಸದ ಜಿ.ಎಂ. ಸಿದ್ದೇಶ್ವರ ಮನವಿ

ಕೇವಲ ಮೂರು ಘಂಟೆ ಮಾತ್ರ ಆಕ್ಸಿಜನ್ ಇದೇ ಎಂದು ತಿಳಿಯುತ್ತಿದ್ದಂತೆ ಕೂಡಲೇ ಅಧಿಕಾರಿಗಳೊಂದಿಗೆ ಹರಿಹರದ ದಿ ಸದರನ್ ಗ್ಯಾಸ್ ಲಿಮಿಟೆಡ್ ನ ಆಕ್ಸಿಜನ್ ಘಟಕಕ್ಕೆ ಆಗಮಿಸಿದ ಶಾಸಕರು, 16 ಆಕ್ಸಿಜನ್ ಸಿಲಿಂಡರ್ ತುಂಬಿಸಿಕೊಂಡು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದಾರೆ.ಶಾಸಕರ ಹಾಗೂ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.  ರೇಣುಕಾಚಾರ್ಯ  ಹರಿಹರದ ತಹಶೀಲ್ದಾರರಿಗೆ ಕರೆ ಮಾಡಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಶಾಸಕರೊಂದಿಗೆ ಅಧಿಕಾರಗಳ ತಂಡವೂ ಕೈ ಜೋಡಿಸಿ ಆಗಬಹುದಾದ ಅನಾಹುತ ತಪ್ಪಿಸಿದ್ದು ಆತಂಕದಲ್ಲಿದ್ದ 20 ಸೋಂಕಿತರು ನಿಟ್ಟುಸಿರುವ ಬಿಡುವಂತಾಗಿದೆ.

ರಾತ್ರಿ 11.30 ಘಂಟೆಗೆ ವಿಚಾರ ಗೊತ್ತಾಗಿದೆ. ಕೂಡಲೇ ಆಸ್ಪತ್ರೆಗೆ ತೆರಳಿ ಮಧ್ಯರಾತ್ರಿ 1 ಗಂಟೆಗೆ ಹರಿಹರಕ್ಕೆ ಬಂದು, 2 ಗಂಟೆಗೆ ಆಕ್ಸಿಜನ್ ತುಂಬಿದ ಸಿಲಿಂಡರ್ ತಂದು‌ ಆತಂಕ ದೂರ ಮಾಡಿದರು.
Youtube Video

ಶಾಸಕರ ಸಮಯ ಪ್ರಜ್ಞೆ ಅಧಿಕಾರಿಗಳ ಕಾರ್ಯವೈಖರಿಯಿಂದ ಭಾರೀ ಅನಾಹುತ ತಪ್ಪಿದ್ದು, ಶಾಸಕರ ಹಾಗೂ ಅಧಿಕಾರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ವರದಿ : ಸಂಜಯ್ ಕುಂದುವಾಡ)
Published by: Latha CG
First published: May 13, 2021, 7:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories