ರಾಜ್ಯದಲ್ಲಿ ಬರ ನಿರ್ವಹಣೆ ಮಾಡುವಲ್ಲಿ ವಿಫಲರಾದರೆ ಜಿಲ್ಲಾಧಿಕಾರಿಗಳೆ ಹೊಣೆ; ಸಿಎಂ ಕುಮಾರಸ್ವಾಮಿ ಖಡಕ್​ ಎಚ್ಚರಿಕೆ

ಕಲಬುರಗಿ, ಧಾರವಾಡ ಜಿಲ್ಲೆ ಡಿಸಿ ಹೊರತು ಪಡಿಸಿ ರಾಜ್ಯದ ಉಳಿದ ಜಿಲ್ಲೆಗಳ  ಜಿಲ್ಲಾಧಿಕಾರಿ, ಸಿಇಒಗಳೊಂದಿಗೆ ಇಂದು ವಿಡಿಯೋ ಕಾನ್ಫೆರನ್ಸ್​ ನಡೆಸಿದ ಸಿಎಂ ಬರ ನಿರ್ವಹಣೆಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗುವಂತೆ ಆದೇಶ ನೀಡಿದ್ದಾರೆ.

ಕುಮಾರಸ್ವಾಮಿ ವಿಡಿಯೋ ಕಾನ್ಫೆರನ್ಸ್​

ಕುಮಾರಸ್ವಾಮಿ ವಿಡಿಯೋ ಕಾನ್ಫೆರನ್ಸ್​

  • News18
  • Last Updated :
  • Share this:
ಬೆಂಗಳೂರು (ಮೇ.15): ರಾಜ್ಯದಲ್ಲಿ ಬರ ಪರಿಸ್ಥಿತಿ ಏರ್ಪಟ್ಟಿದ್ದು, ಕುಡಿಯುವ ನೀರಿಗೂ ಜನರು ಕಷ್ಟಪಡುವಂತೆ ಆಗಿದೆ. ಬರ ನಿರ್ವಣೆ ಮಾಡುವಲ್ಲಿ ಯಾವುದೇ ಅಧಿಕಾರಿಗಳು ವಿಫಲರಾಗಬಾರದು ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ  ಸಿಎಂ ಕುಮಾರಸ್ವಾಮಿ ಖಡಕ್​ ಸೂಚನೆ ನೀಡಿದ್ದಾರೆ.

ಕಳೆದು ಒಂದು ತಿಂಗಳಿನಿಂದ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಯಾವುದೇ ಕ್ರಮಕ್ಕೆ ಸಿಎಂ ಮುಂದಾಗಿರಲಿಲ್ಲ. ಇದಾದ ಬಳಿಕ ರೆಸಾರ್ಟ್​ ಮೊರೆ ಹೋಗಿದ್ದ ಸಿಎಂ ಕುಮಾರಸ್ವಾಮಿ ಬರ ನಿರ್ವಹಣೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಭೆ ನಡೆಸಿದರು.

ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರು ಸಂರಕ್ಷಣೆಗಾಗಿ ಮೇವು ಲಭ್ಯತೆ, ಗೋಶಾಲೆ ಹಾಗೂ ಮೇವು ಬ್ಯಾಂಕ್, ಉದ್ಯೋಗ ಸೃಜನೆ ಕಾಮಗಾರಿಗಳ ಪ್ರಗತಿ ಕುರಿತು ಕಲಬುರಗಿ, ಧಾರವಾಡ ಜಿಲ್ಲೆ ಡಿಸಿ ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾಹಿತಿ ಪಡೆದರು.

ಬರ ಪರಿಸ್ಥಿತಿ ಎದುರಿಸಲು ದುಡ್ಡಿನ ಯಾವುದೇ ಕೊರತೆ ಇಲ್ಲ. ಈಗಾಗಲೇ ಡಿಸಿ ಖಾತೆಗಳಿಗೆ 10 ಕೋ. ಹಣ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾಗಿರುವ ಹಣ ಸಂಪೂರ್ಣ ಖರ್ಚು ಮಾಡಿ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಬೇಕು. ಬರ ನಿರ್ವಹಣೆಯಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಿಗಳು ವಿಫಲರಾಗಬಾರದು. ಜಿಲ್ಲೆಗಳಿಂದ ಯಾವುದೇ ದೂರು ಬಂದರೂ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ನೀರಿನ ವ್ಯವಸ್ಥೆ ಇಲ್ಲದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ‌ ನೀರು ಪೂರೈಕೆ ಮಾಡಲು ಸೂಚನೆ ನೀಡಿದ್ದಾರೆ. ಅಗತ್ಯ ಬಿದಲ್ಲಿ ಖಾಸಗಿ ಬೋರ್ ವೆಲ್ ಬಾಡಿಗೆ ಪಡೆದು ನೀರಿನ ಪೂರೈಕೆ ಮಾಡಬೇಕು. ಕುಡಿಯುವ ನೀರಿಗೆ ಎಷ್ಟೇ ಹಣ ಖರ್ಚಾದರೂ ಸರ್ಕಾರ ಇದನ್ನು ಭರಿಸಲು ಸಿದ್ಧವಾಗಿದೆ. ಮತ್ತೆ ಹಣದ ಅಗತ್ಯ ಇದ್ದರೆ ಕೂಡಲೇ ಮನವಿ ಸಲ್ಲಿಸಿ ಎಂದರು.

ಜಾನುವಾರುಗಳಿಗೆ ಮೇವು ಬ್ಯಾಂಕ್ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಗೋ ಶಾಲೆ ಇಲ್ಲದ ಕಡೆ ಪರ್ಯಾಯ ವ್ಯವಸ್ಥೆ ಮಾಡಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಿ. ನರೇಗಾದಲ್ಲಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ದರು ರಾಜ್ಯ ಸರ್ಕಾರವೇ ಹಣ ಬಿಡುಗಡೆ ಮಾಡಿದೆ. ಈ ಹಣದ ಬಳಕೆಗೆ ಮುಂದಾಬೇಕು ಎಂದರು.

ಬರ, ಉದ್ಯೋಗ ಸಮಸ್ಯೆಯಿಂದ ಜನರು ವಲಸೆ ಹೋಗುತ್ತಿರುವ ಬಗ್ಗೆ ಕ್ರಮಕ್ಕೆ ಮುಂದಾಗಬೇಕು. ಜನರ ಕೈಗೆ ಸರಿಯಾಗಿ ಕೂಲಿ ಹಣ ಸೇರಬೇಕು. ಅಗತ್ಯ ಬೇಡಿಕೆ ಇರುವ ಕಡೆ ಜಿಲ್ಲಾಧಿಕಾರಿಗಳು ಅಲ್ಲಿನ ಸ್ಥಳೀಯರು, ಅಧಿಕಾರಿಗಳೊಂದಿಗೆ ಸಭೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಬರದ ಕುರಿತು ಈಗಾಗಲೇ ಪತ್ರಿಕೆಗಳು ವರದಿ ಮಾಡುತ್ತಿವೆ. ಇನ್ನು ಮುಂದೆ ಈ ರೀತಿಯ ವರದಿಗಳು ಆಗದಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು. ಬರ ಪರಿಸ್ಥಿತಿಯನ್ನಿಟ್ಟುಕೊಂಡು ವಿರೋಧ ಪಕ್ಷದವರು ಇದನ್ನೆ ದೊಡ್ಡದು ಮಾಡುತ್ತಿದೆ. ಮತ್ತೆ  ಈ ರೀತಿಯ ದೂರುಗಳು ಬಂದರೆ ಅದಕ್ಕೆ ಡಿಸಿ,‌ ಸಿಇಓಗಳೆ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಮುತುವರ್ಜಿಯಿಂದ ಕಾರ್ಯನಿರ್ವಹಿಸುವಂತೆ ಖಡಕ್​ ಸಂದೇಶ ರವಾನಿಸಿದರು.

ಈ ವೇಳೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ ಹಾಜರಿದ್ದರು.
First published: