ದಸರಾ ಕೊಡುಗೆ: ಸಾರಿಗೆ ಬಸ್ ಟಿಕೆಟ್​ ದರ ಏರಿಕೆ ಸದ್ಯಕ್ಕಿಲ್ಲ; ಸಿಎಂ ಕುಮಾರಸ್ವಾಮಿ

Seema.R | news18
Updated:October 12, 2018, 4:39 PM IST
ದಸರಾ ಕೊಡುಗೆ: ಸಾರಿಗೆ ಬಸ್ ಟಿಕೆಟ್​ ದರ ಏರಿಕೆ ಸದ್ಯಕ್ಕಿಲ್ಲ; ಸಿಎಂ ಕುಮಾರಸ್ವಾಮಿ
Seema.R | news18
Updated: October 12, 2018, 4:39 PM IST
- ಕೃಷ್ಣಾ ಜಿ.ವಿ, ನ್ಯೂಸ್​ 18 ಕನ್ನಡ

ಬೆಂಗಳೂರು (ಅ.12) : ಸಾರಿಗೆ ಇಲಾಖೆ ನಷ್ಟದಲ್ಲಿದೆ. ಈ ನಷ್ಟ ಪರಿಹಾರಕ್ಕೆ ಬಸ್​ ದರ ಏರಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ತಿರಸ್ಕರಿಸಿದ್ದು, ಸದ್ಯಕ್ಕೆ ಬಸ್​ ದರ ಏರಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಬಸ್​ ಪ್ರಯಾಣ ದರ ಏರಿಕೆ ಸಂಬಂಧ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬಸ್​ ಪ್ರಯಾಣದರ ಏರಿಕೆ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.



ಸಾರಿಗೆ ಇಲಾಖೆಯ ನಷ್ಟವನ್ನು ಸರಿದೂಗಿಸಲು ಪರ್ಯಾಯ ಮಾರ್ಗ ಅನುಸರಿಸಿ,  ಸೋರಿಕೆಯನ್ನು ತಡೆಗಟ್ಟಬೇಕು ಎಂದು ಸಲಹೆ ನೀಡಿದರು.

ಇಂಧನ ದರ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳಿಂದ ಸಾರಿಗೆ ನಿಗಮಗಳು ನಷ್ಟ ಅನುಭವಿಸುತ್ತಿದ್ದು, ಈ ನಷ್ಟ ಸರಿದೂಗಿಸಲು ಇರುವ ಮಾರ್ಗ ಟಿಕೆಟ್​ ದರ ಹೆಚ್ಚಳ ಎಂದು ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದರು.

ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಸ್​ ದರ ಇಳಿಕೆ ಮಾಡಿದ್ದು, ಈ ವೇಳೆ ಬಸ್​ ದರ ಹೆಚ್ಚಳ ಮಾಡಿದರೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತದೆ ಎಂದರು.
Loading...

ಹಬ್ಬದ ಸಾಲಿನಲ್ಲಿ ಏಕಾಏಕಿ ಬಸ್​ ದರ ಹೆಚ್ಚಳ ಮಾಡಿದರೆ ಜನರ ಮೇಲೆ  ಹೊರೆ ಹೆಚ್ಚಳವಾಗುತ್ತದೆ. ಅಲ್ಲದೇ ಉಪಚುನಾವಣೆಗಳು ಎದುರಾಗುತ್ತಿರುವ ಹೊತ್ತಿನಲ್ಲಿ ಬಸ್​ ದರ ಹೆಚ್ಚಳ ಮಾಡಿದರೆ ಅದು ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕೂಡ ಹೆಚ್ಚಿದೆ.

ಈ ಹಿಂದೆ ಕೂಡ ಬಸ್​ ದರ ಹೆಚ್ಚಳ ಕುರಿತ ಸರ್ಕಾರದ ಅನುಮೋದನೆ ಮುಖ್ಯಮಂತ್ರಿ ತಡೆ ನೀಡಿದ್ದರು.  ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಪ್ರತಿ ಲೀಟರ್‌ಗೆ 2.50 ರೂಪಾಯಿಯಷ್ಟು ಇಳಿಕೆ ಮಾಡಿ ಇದರ ಹೊರೆಯನ್ನು ಸರಿದೂಗಿಸಲು ರಾಜ್ಯ ಸರಕಾರ ಬಸ್​ ದರ ಏರಿಕೆಗೆ ಆದೇಶ ಹೊರಡಿಸಿತು. ಆದರೆ ಈ ಆದೇಶಕ್ಕೆ ಕುಮಾರಸ್ವಾಮಿ ಬ್ರೇಕ್​ ಹಾಕಿದರು.

First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ