ಕತ್ತಲಲ್ಲಿ ಭತ್ತದ ಕೊಯ್ಲು ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಸಿಎಂ ಕುಮಾರಸ್ವಾಮಿ ಆಗಸ್ಟ್​ 11ರಂದು ಭತ್ತದ ಪೈರು ನಾಟಿ ಮಾಡಿದ್ದರು. ಅಮವಾಸ್ಯೆ ದಿನ ಪೈರು ನಾಟಿ ಮಾಡಿದ ಸಿಎಂ ಇವತ್ತು ಮತ್ತೆ ಅಮವಾಸ್ಯೆ ದಿನವೇ ಕಟಾವು ಮಾಡಲು ಆಗಮಿಸಿದ್ದರು.

G Hareeshkumar | news18india
Updated:December 7, 2018, 9:16 PM IST
ಕತ್ತಲಲ್ಲಿ ಭತ್ತದ ಕೊಯ್ಲು ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ
ಪೂಜೆ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ
G Hareeshkumar | news18india
Updated: December 7, 2018, 9:16 PM IST
- ರಾಘವೇಂದ್ರ ಗಂಜಾಮ್

ಮಂಡ್ಯ ( ಡಿ.07) : ಮುಖ್ಯಮಂತ್ರಿ ಹೆಚ್​ಡಿ  ಕುಮಾರಸ್ವಾಮಿ ಅವರು ಜಿಲ್ಲೆಯ ಸೀತಾಪುರಕ್ಕೆ  ಆಗಮಿಸಿ ಕತ್ತಲಲ್ಲಿ ಭತ್ತದ ಕೊಯ್ಲು ಮಾಡಿದ್ದಾರೆ. ಈ ವೇಳೆ ಮುಖ್ಯಮಂತ್ರಿಗೆ ಸಚಿವ ಸಿ.ಎಸ್.ಪುಟ್ಟರಾಜು, ಸಂಸದ ಎಲ್ ಆರ್ ಶಿವರಾಮೆಗೌಡ ಸೇರಿದಂತೆ ಜಿಲ್ಲೆಯ ಶಾಸಕರು ಸಾಥ್ ನೀಡಿದರು.

ಸಿಎಂ ಕುಮಾರಸ್ವಾಮಿ ಅವರು  ಸೂರ್ಯಾಸ್ತಕ್ಕೂ ಮುನ್ನ ಭತ್ತದ ಕೊಯ್ಲು ಮಾಡಬೇಕಿತ್ತು. ಆದರೆ ಅವರು ನಿಗದಿತ ಸಮಯಕ್ಕಿಂತ ತಡವಾಗಿ ಆಗಮಿಸಿದ ಕಾರಣ ಸಿಎಂ ಗಾಗಿ ಕಾದು, ಕುಳಿತು ಹೈರಾಣಾಗಿದ್ದ ರೈತರು ತಮ್ಮ ಊರುಗಳತ್ತ ಮುಖ ಮಾಡಿದ್ದರು

ಇದನ್ನು ಓದಿ :  ನಾಟಿ ಮಾಡಿದ ಬಳಿಕ ಭತ್ತದ ಕೊಯ್ಲಿಗೆ ಸಿಎಂ ಸಜ್ಜು; ಕುಮಾರಸ್ವಾಮಿ ಆಗಮನಕ್ಕೆ ಕಳೆಗಟ್ಟಿದ ಸೀತಾಪುರ

ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಸಿಎಂ ಕುಮಾರಸ್ವಾಮಿ ಆಗಸ್ಟ್​ 11ರಂದು ಭತ್ತದ ಪೈರು ನಾಟಿ ಮಾಡಿದ್ದರು. ಅಮವಾಸ್ಯೆ ದಿನ ಪೈರು ನಾಟಿ ಮಾಡಿದ ಸಿಎಂ ಇವತ್ತು ಮತ್ತೆ ಅಮವಾಸ್ಯೆ ದಿನವೇ ಕಟಾವು ಮಾಡಲು ಆಗಮಿಸಿದ್ದರು. ರೈತ ದೇವರಾಜ್​ ಅವರಿಗೆ ಸೇರಿದ ಗದ್ದೆಯಲ್ಲಿ ಸೊಗಸಾಗಿ ಬೆಳೆದು ನಿಂತಿದ್ದ ಭತ್ತದ ಕೊಯ್ಲಿಗೆ ಸಿಎಂ ಗೋಧೂಳಿ ಲಗ್ನದಲ್ಲಿ ಚಾಲನೆ ನೀಡಿದ ಬಳಿಕ ರಾಶಿ ಪೂಜೆ ಮಾಡಿದರು.

ಕೊಯ್ಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, 'ಹಲವು ವರ್ಷದಿಂದ ಕೆಆರ್​ಎಸ್​ ತುಂಬಿರಲಿಲ್ಲ, ಈ ಬಾರಿ ಕೆಆರ್​ಎಸ್​ ತುಂಬಿದ್ದು ಅನ್ನದಾತರು ಖುಷಿಯಾಗಿದ್ದಾರೆ.. ರೈತಪರವಾಗಿ ನಮ್ಮದು ಸುಭದ್ರ ಸರ್ಕಾರ. ಸಾಲಮನ್ನಾಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದರು.

ಸೀತಾಪುರಕ್ಕೆ ಆಗಮಿಸಿದ ಸಿಎಂ ‌ಜಮಿನು ಬಳಿಯ ಶೆಡ್ ಹೋಟೆಲ್‌ನಲ್ಲಿ ಟೀ ಕುಡಿದು, ವಡೆ ತಿಂದರು. ಅಲ್ಲಿಂದಲೇ ಎತ್ತಿನ ಗಾಡಿಯಲ್ಲಿ  ಮೆರವಣಿಗೆ ಮೂಲಕ ಭತ್ತದ ಗದ್ದೆ ತನಕ ಆಗಮಿಸಿದರು.
Loading...

ಒಟ್ಟಾರೆ, ಭತ್ತ ಕಟಾವು ಮಾಡಲು ಸಿಎಂ ಆಗಮಿಸುವ ಹಿನ್ನೆಲೆಯಲ್ಲಿ ಸುಗ್ಗಿ ಹಬ್ಬಕ್ಕೆ ಇಡೀ ಊರಿಗೇ ಊರೇ ಸಿಂಗಾರಗೊಂಡಿತ್ತು. ಸಿಎಂ ಭತ್ತದ ಕಟಾವಿಗೆ ಆಗಮಿಸುವ ಮೊದಲು ಆಧುನಿಕ ತಂತ್ರಜ್ಞಾನದ ಮೂಲಕ 3 ಎಕರೆ ಭತ್ತವನ್ನು ಕಟಾವು ಮಾಡಿ ರಾಶಿ ಮಾಡಲಾಗಿತ್ತು.

ಇದನ್ನು ಓದಿ :  ಬಯಲಾಯ್ತು ಸಿಎಂ ಕುಮಾರಸ್ವಾಮಿ ಭತ್ತದ ನಾಟಿ ಹಿಂದಿನ ಅಸಲಿ
ರಹಸ್ಯ!


First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...