ಕಾಂಗ್ರೆಸ್​ ನಾಯಕರಿಗೆ ಮಾತಿನಲ್ಲೇ ಕಾಲೆಳೆದ ಸಿಎಂ ಕುಮಾರಸ್ವಾಮಿ

news18
Updated:August 8, 2018, 4:17 PM IST
ಕಾಂಗ್ರೆಸ್​ ನಾಯಕರಿಗೆ ಮಾತಿನಲ್ಲೇ ಕಾಲೆಳೆದ ಸಿಎಂ ಕುಮಾರಸ್ವಾಮಿ
news18
Updated: August 8, 2018, 4:17 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಆ. 8): ಎರಡು ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪನವರು ಪ್ರಯಾಣಿಸಿದ್ದ ವಿಮಾನದಲ್ಲೇ ಐವರು ಕಾಂಗ್ರೆಸ್​ ನಾಯಕರು ಪ್ರಯಾಣ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಆಮೇಲೆ ಅದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದೂ ಆಗಿತ್ತು.

ಆದರೆ, ಇಂದು ವಿಧಾನಸೌಧದ ಆವರಣದಲ್ಲಿ ನಿಜಲಿಂಗಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ವೇಳೆ ಸಿಎಂ ಕುಮಾರಸ್ವಾಮಿಯವರು ಆಡಿರುವ ಮಾತುಗಳು ಮತ್ತೆ ಅನುಮಾನ ಹುಟ್ಟಲು ಕಾರಣವಾಗಿವೆ.

ಸಿಎಂ ಎಚ್ಡಿಕೆ ಹೇಳಿದ್ದೇನು?:

'ದೆಹಲಿಯಿಂದ ಯಾವಾಗ ಬಂದ್ರಿ? ಯಡಿಯೂರಪ್ಪನವರಿಗೆಲ್ಲ ವಿಷ್​ ಮಾಡಿ ಬಂದ್ರ?' ಎಂದು ಸಚಿವ ರಮೇಶ್​ ಜಾರಕಿಹೊಳಿ ಅವರ ಕಾಲೆಳೆದ ಕುಮಾರಸ್ವಾಮಿ ಅವರ ಮಾತಿಗೆ ರಮೇಶ್​ ಜಾರಕಿಹೊಳಿ ನಕ್ಕು ಸುಮ್ಮನಾಗಿದ್ದಾರೆ. ಈ ಮಾತಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಕೂಡ ಮುಗುಳ್ನಕ್ಕು ಸುಮ್ಮನಾಗಿದ್ದಾರೆ. ತಮ್ಮ ಮಾತಿನ ಮೂಲಕ ಎಚ್ಡಿಕೆ ಕಾಂಗ್ರೆಸ್​ ನಾಯಕರ ಕಾಲೆಳೆದಿದ್ದಾರಾ ಅಥವಾ ಟಾಂಗ್​ ಕೊಟ್ಟಿದ್ದಾರಾ? ಎಂದು ಎಲ್ಲೆಡೆ ಈಗ ಚರ್ಚೆಯಾಗುತ್ತಿದೆ.

ದೆಹಲಿಯಲ್ಲಿ ಈ ಕುರಿತು ನಿನ್ನೆ ಸ್ಪಷ್ಟೀಕರಣ ನೀಡಿದ್ದ ಸಚಿವ ರಮೇಶ್​ ಜಾರಕಿಹೊಳಿ, ನಾನು ಹುಟ್ಟು ಕಾಂಗ್ರೆಸ್ಸಿಗ. ಎಂದಿಗೂ ಕಾಂಗ್ರೆಸ್​ ಪಕ್ಷ ತೊರೆಯುವ ಮಾತೇ ಇಲ್ಲ. ಅಗತ್ಯಬಿದ್ದರೆ ಬಿಜೆಪಿಯಿಂದಲೇ 10 ಶಾಸಕರನ್ನು ಕರೆತರುತ್ತೇನೆ ಎಂದು ಹೇಳಿಕೆ ನೀಡಿದ್ದರು.

 
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...