News18 India World Cup 2019

Cabinet Expansion; ಇಂದು ಮಹತ್ವದ ಸಚಿವ ಸಂಪುಟ ವಿಸ್ತರಣೆ; ಪಕ್ಷೇತರ ಶಾಸಕ ಹೆಚ್​. ನಾಗೇಶ್ ಮಂತ್ರಿಗಿರಿ ಖಚಿತ!

Karnataka Cabinet: ಮೈತ್ರಿ ಸರ್ಕಾರದಲ್ಲಿ ಕಳೆದ ಕೆಲ ದಿನಗಳಿಂದ ಸಂಪುಟ ವಿಸ್ತರಣೆ ಎಂಬುದು ಕಗ್ಗಂಟಾಗಿಯೇ ಉಳಿದಿತ್ತು. ಉಭಯ ಪಕ್ಷಗಳಲ್ಲೂ ಅಸಮಾಧಾನಿತರ ಸಂಖ್ಯೆ ದೊಡ್ಡದಿದ್ದು ಯಾರಿಗೆ ಸಚಿವ ಸ್ಥಾನ ನೀಡುವುದು? ಎಂಬುದೇ ಸಿಎಂ ಕುಮಾರಸ್ವಾಮಿ ಹಾಗೂ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರಿಗೆ ತಲೆನೋವಾಗಿ ಪರಿಣಮಿಸಿತ್ತು.

MAshok Kumar | news18
Updated:June 14, 2019, 12:04 PM IST
Cabinet Expansion; ಇಂದು ಮಹತ್ವದ ಸಚಿವ ಸಂಪುಟ ವಿಸ್ತರಣೆ; ಪಕ್ಷೇತರ ಶಾಸಕ ಹೆಚ್​. ನಾಗೇಶ್ ಮಂತ್ರಿಗಿರಿ ಖಚಿತ!
ಎಚ್​ಡಿ ಕುಮಾರಸ್ವಾಮಿ
MAshok Kumar | news18
Updated: June 14, 2019, 12:04 PM IST
ಬೆಂಗಳೂರು (ಜೂನ್​.14); ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ಇಂದು ವಿಸ್ತರಣೆಯಾಗಲಿದ್ದು, ಕೋಲಾರದ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್​. ನಾಗರಾಜ್​ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್​ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ.

ಇಂದು ಬೆಳಗ್ಗೆಯೇ ಇಬ್ಬರಿಗೂ ಕರೆ ಮಾಡಿರುವ ಮುಖ್ಯಮಂತ್ರಿ ಸಚಿವ ಸ್ಥಾನ ನೀಡುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಬಿ.ಎಂ. ಫಾರೂಕ್ ಬೆಳಗ್ಗೆಯೇ ಜೆಪಿ ನಗರದಲ್ಲಿರುವ ಸಿಎಂ ಮನೆಗೆ ತೆರಳಿ ಈ ಕುರಿತು ಚರ್ಚೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯ; ಬಿಬಿಎಂಪಿ ಬಜೆಟ್, ‘ಫನಿ’ ಗೆ ಪರಿಹಾರ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆ

ಕೊನೆಗೂ ಸಂಪುಟ ವಿಸ್ತರಣೆ ಮುಂದಾದ ಸಿಎಂ:

ಮೈತ್ರಿ ಸರ್ಕಾರದಲ್ಲಿ ಕಳೆದ ಕೆಲ ದಿನಗಳಿಂದ ಸಂಪುಟ ವಿಸ್ತರಣೆ ಎಂಬುದು ಕಗ್ಗಂಟಾಗಿಯೇ ಉಳಿದಿತ್ತು. ಉಭಯ ಪಕ್ಷಗಳಲ್ಲೂ ಅಸಮಾಧಾನಿತರ ಸಂಖ್ಯೆ ದೊಡ್ಡದಿದ್ದು ಯಾರಿಗೆ ಸಚಿವ ಸ್ಥಾನ ನೀಡುವುದು? ಎಂಬುದೇ ಸಿಎಂ ಕುಮಾರಸ್ವಾಮಿ ಹಾಗೂ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರಿಗೆ ತಲೆನೋವಾಗಿ ಪರಿಣಮಿಸಿತ್ತು.

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ.

Loading...

ಇದೇ ಕಾರಣಕ್ಕೆ ಲೋಕಸಭಾ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದ ಮೈತ್ರಿ ಸರ್ಕಾರದ ನಾಯಕರು ಕೊನೆಗೂ ಅದಕ್ಕೆ ಇಂದು ಮುಹೂರ್ತ ನಿಗದಿಪಡಿಸಿದ್ದಾರೆ. ಮಂಡ್ಯ ಲೋಕಸಭೆ ಸೋಲಿನ ಕಾರಣಕ್ಕೆ ಸಚಿವ ಪುಟ್ಟರಾಜು ಸೇರಿದಂತೆ ಮೂವರು ಜೆಡಿಎಸ್ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಆ ಸ್ಥಾನವನ್ನು ಅಸಮಾಧಾನಿತರಿಗೆ ನೀಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಅನೌಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಮೌನ; ಸೋಲಿನ ಬಗ್ಗೆ ಸಚಿವರಿಂದ ವಿಶ್ಲೇಷಣೆ

ಇಂದು ಬೆಳಗ್ಗೆ 10.30ಕ್ಕೆ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಲಿದ್ದು, ಹೆಚ್. ನಾಗರಾಜ್ ಹಾಗೂ ಬಿ.ಎಂ. ಫಾರೂಕ್ ಜೊತೆಗೆ ಪ್ರಮಾಣ ವಚನ ಸ್ವೀಕರಿಸಲಿರುವ ಉಳಿದ ಸಚಿವರು ಯಾರು? ಎಂಬುದು ನಿರ್ಧಾರವಾಗಲಿದೆ. ಸಂಪುಟ ಸಭೆಯ ನಂತರ ನೂತನ ಸಚಿವರು ರಾಜಭನದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಇಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...