ಸಿಎಂ ರೆಸಾರ್ಟ್ ವಾಸ್ತವ್ಯಕ್ಕೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ; ಸಮರ್ಥಿಸಿಕೊಂಡ ಸಚಿವ ಸಾ ರಾ ಮಹೇಶ್

ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ರಾಂತಿಗಾಗಿ ಏ. 28 ರಿಂದ ಮೇ.3 ರ ವರೆಗೆ ಉಡುಪಿಯ ಕಾಪು ಮುಳೂರು ಸಮೀಪದ ಸಾಯಿರಾಧ ಹೆಲ್ತ್​ ರೆಸಾರ್ಟ್​ಗೆ ತೆರಳಿದ್ದರೆ, ಇದೀಗ ಮೇ.11 ರಿಂದ 13ರ ವರೆಗೆ ಎರಡು ದಿನಗಳ ವಿಶ್ರಾಂತಿಗಾಗಿ ಮಡಿಕೇರಿಯ ಇಬ್ಬನಿ ರೆಸಾರ್ಟ್​ಗೆ ತೆರಳಿದ್ದಾರೆ. ಮುಖ್ಯಮಂತ್ರಿಯ ಈ ನಡೆ ಸಾಮಾನ್ಯವಾಗಿ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

MAshok Kumar | news18
Updated:May 11, 2019, 2:39 PM IST
ಸಿಎಂ ರೆಸಾರ್ಟ್ ವಾಸ್ತವ್ಯಕ್ಕೆ ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ; ಸಮರ್ಥಿಸಿಕೊಂಡ ಸಚಿವ ಸಾ ರಾ ಮಹೇಶ್
ಹೆಚ್​ಡಿಕೆ ವಿರುದ್ಧ ಪ್ರತಿಭಟನಾ ನಿರತ ಕನ್ನಡ ಸಂಘಟನೆ ಕಾರ್ಯಕರ್ತರು.
  • News18
  • Last Updated: May 11, 2019, 2:39 PM IST
  • Share this:
ಬೆಂಗಳೂರು (ಮೇ.11) : ಇಡೀ ರಾಜ್ಯ ಬರಕ್ಕೆ ಸಿಕ್ಕು ನಲುಗಿರುವಾಗ ಯುದ್ಧೋಪಾದಿಯಲ್ಲಿ ಸಮಸ್ಯೆಗೆ ಪರಿಹಾರ ನೀಡಬೇಕಾದ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಕೆಲ ದಿನಗಳಿಂದ ರೆಸಾರ್ಟ್ ವಾಸ್ತವ್ಯಕ್ಕೆ ಮೊರೆ ಹೋಗಿರುವ ನಡೆಯ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಜನಸಾಮಾನ್ಯರ ಆಕ್ರೋಶ ಭುಗಿಲೆದ್ದಿದೆ.

ಪ್ರಸ್ತುತ ರಾಜ್ಯ ಹಿಂದೆಂದೂ ಕಾಣದಂತಹ ಬರಕ್ಕೆ ತುತ್ತಾಗಿದೆ. ರಾಜ್ಯದ ಸುಮಾರು 149 ತಾಲೂಕುಗಳಲ್ಲಿ ಕುಡಿಯುವುದಕ್ಕೂ ನೀರಿಲ್ಲದ ಪರಿಸ್ಥಿತಿ ಇದೆ. ನೀರು-ಮೇವಿಲ್ಲದೆ ಜಾನುವಾರುಗಳು ಸಾಯುತ್ತಿರುವ ಕುರಿತು ಪ್ರತಿದಿನ ವರದಿಯಾಗುತ್ತಿದೆ. ಆದರೆ, ಈ ಕುರಿತು ತಲೆ ಕೆಡಿಸಿಕೊಳ್ಳದ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ರಾಂತಿಗಾಗಿ ಏ. 28 ರಿಂದ ಮೇ.3 ರ ವರೆಗೆ ಉಡುಪಿಯ ಕಾಪು ಮುಳೂರು ಸಮೀಪದ ಸಾಯಿರಾಧ ಹೆಲ್ತ್​ ರೆಸಾರ್ಟ್​ಗೆ ತೆರಳಿದ್ದರೆ, ಇದೀಗ ಮೇ.11 ರಿಂದ 13ರ ವರೆಗೆ ಎರಡು ದಿನಗಳ ವಿಶ್ರಾಂತಿಗಾಗಿ ಮಡಿಕೇರಿಯ ಇಬ್ಬನಿ ರೆಸಾರ್ಟ್​ಗೆ ತೆರಳಿದ್ದಾರೆ. ಮುಖ್ಯಮಂತ್ರಿಯ ಈ ನಡೆ ಸಾಮಾನ್ಯವಾಗಿ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಬರಕ್ಕೆ ಸಿಕ್ಕು ಬೇಯುತ್ತಿದೆ ರಾಜ್ಯ; ಮೋಜು ಮಸ್ತಿಯಲ್ಲಿ ಮುಳುಗಿರುವ ಮುಖ್ಯಮಂತ್ರಿ ಹಾಗೂ ಸರ್ಕಾರ !

ರೆಸಾರ್ಟ್ ವಾಸ್ತವ್ಯ ಖಂಡಿಸಿ ಪ್ರತಿಭಟನೆ : ಸಿಎಂ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯವನ್ನು ಖಂಡಿಸಿ ಕರ್ನಾಟಕ ಸಂಘಟನೆಯ ಒಕ್ಕೂಟ ಇಂದು ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿ ವಿಧಾನಸೌಧಕ್ಕೆ ಬೀಗ ಜಡಿಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ/

ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಕರ್ನಾಟಕ ಸಂಘಟನೆ ಕಾರ್ಯಕರ್ತರು ವಿಧಾನಸೌಧಕ್ಕೆ ಬೀಗ ಜಡಿಯಲು ಚಾಲುಕ್ಯ ವೃತ್ತದಿಂದ ವಿಧಾಸಸೌಧದ ವರೆಗೆ ಕಾಲ್ನಡಿಗೆ ಹೊರಟಿದ್ದಾರೆ. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ಅಡ್ಡಗಟ್ಟಿ ತಡೆದಿದ್ದಾರೆ.

ಈ ವೇಳೆ ಮಾತನಾಡಿರುವ ಕರ್ನಾಟಕ ಸಂಘಟನೆ ಅಧ್ಯಕ್ಷ ನಾಗೇಶ್, “ಮುಖ್ಯಮಂತ್ರಿ ಕುಮಾರಸ್ವಾಮಿ ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಉತ್ತರ ಕರ್ನಾಟಕದ ಜನ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮಳೆ ಬಂತೆಂದರೆ ಜನಜೀವನ ಅಸ್ತವ್ಯಸ್ಥವಾಗುತ್ತದೆ. ಆದರೆ ಈ ಕುರಿತು ಗಮನವಹಿಸಬೇಕಾದ ಮುಖ್ಯಮಂತ್ರಿಗಳು ಉಡುಪಿ ಕೊಡಗು ಎಂದು ಒಂದರಹಿಂದೊಂದರಂತೆ ರೆಸಾರ್ಟ್ ವಾಸ್ತವ್ಯದಲ್ಲಿ ತೊಡಗಿದ್ದಾರೆ. ನಮ್ಮನ್ನು ಆಳುವ ನಾಯಕರು ರೆಸಾರ್ಟ್​ನಲ್ಲಿ ಕುಳಿತು ರಾಜಕಾರಣ ಮಾಡುತ್ತಾರೆ ಎಂದಾದರೆ ನಮಗೆ ವಿಧಾನಸೌಧ ಯಾಕೆ ಬೇಕು? ಅದಕ್ಕೆ ನಾವು ವಿಧಾನಸೌಧಕ್ಕೆ ಬೀಗ ಜಡಿಯಲು ಬಂದಿದ್ದೇವೆ” ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ : ಸಿಎಂ ಕುಮಾರಸ್ವಾಮಿಗೆ ಕನ್ನಡಿಗರ ಮೇಲಿಲ್ಲವೆ ವಿಶ್ವಾಸ..?; ಕೊಡಗಿನ ರೆಸಾರ್ಟ್​ಗೆ ಉತ್ತರ ಭಾರತದ ನೌಕರರುಸಮರ್ಥಿಸಿಕೊಂಡ ಸಚಿವ ಸಾ ರಾ ಮಹೇಶ್ : ಸಿಎಂ ರೆಸಾರ್ಟ್ ವಾಸ್ತವ್ಯ ಇಡೀ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಮುಖ್ಯಮಂತ್ರಿಯ ಈ ನಡೆಯನ್ನು ಸಚಿವ ಸಾ ರಾ ಮಹೇಶ್ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಶನಿವಾರ ಇಬ್ಬನಿ ರೆಸಾರ್ಟ್ ಬಳಿ ಆಗಮಿಸಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, “ಯಂತ್ರ ಕೂಡ ಕೆಟ್ಟು ಹೋಗುತ್ತೆ ಹಾಗಿರುವಾಗ ನಾವು ಮನುಷ್ಯರು ನಮಗೂ ಒಂದು ವೈಯಕ್ತಿಕ ಬದುಕು ಅಂತ ಇದೆ. ಹೀಗಾಗಿ ಸಿಎಂ ವಿಶ್ರಾಂತಿಗಾಗಿ ಇಲ್ಲಿಗೆ ಬಂದಿದ್ದಾರೆ ಅಷ್ಟೇ. ಪ್ರವಾಸಕ್ಕೆ ಕೊಡಗು ಸುರಕ್ಷಿತ ತಾಣ ಎಂಬ ಕಾರಣಕ್ಕೆ ಅವರು ಇಲ್ಲಿಗೆ ಆಗಮಿಸಿದ್ದಾರೆ” ಎಂದು ಪ್ರಕರಣಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

First published: May 11, 2019, 1:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading