ಉದ್ಯೋಗಕ್ಕಾಗಿ ಆಗ್ರಹಿಸಿ ಕನ್ನಡಿಗರ ಹೋರಾಟ; ಸಿಎಂ ಕುಮಾರಸ್ವಾಮಿ ಬೆಂಬಲ

ಉದ್ಯೋಗಕ್ಕಾಗಿ ಆಗ್ರಹಿಸಿ ಕನ್ನಡಿಗರು ಶುರು ಮಾಡಿರುವ ಟ್ವಿಟ್ಟರ್ ಅಭಿಯಾನಕ್ಕೆ ಸಿಎಂ ಎಚ್​​.ಡಿ ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  • News18
  • Last Updated :
  • Share this:
ಬೆಂಗಳೂರು(ಮೇ.04): "ಕರ್ನಾಟಕ ಜಾಬ್ಸ್​​​ ಫಾರ್​​ ಕನ್ನಡಿಗಾಸ್" ಎಂದು ಆಗ್ರಹಿಸಿ ಟ್ವೀಟರ್‌ ಅಭಿಯಾನ ಶುರು ಮಾಡಲಾಗಿದೆ. ರಾಜ್ಯದಲ್ಲಿ ಯಾರೇ ಆಗಲಿ ಉದ್ಯೋಗ ನೀಡಬೇಕಾದರೇ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಟ್ವಿಟ್ಟರ್​​ನಲ್ಲಿ ಅಭಿಯಾನ ಆರಂಭಿಸಲಾಗಿದೆ. #KarnatakaJobsForKannadigas ಎನ್ನುವ ಹ್ಯಾಶ್​​​​ ಟ್ಯಾಗ್​​ ಬಳಸುವ ಮೂಲಕ ಕನ್ನಡಿಗರು ಭಾರೀ ಪ್ರಮಾಣದಲ್ಲಿ ಟ್ವೀಟ್​​ ಮಾಡುತ್ತಿದ್ದಾರೆ. ಸದ್ಯ ಇದೇ ಹ್ಯಾಶ್​​ ಟ್ಯಾಗ್​​ ಟ್ರೆಂಡಿಂಗ್​​ ಆಗಿದೆ. ಅಲ್ಲದೇ ಈ ಹೋರಾಟಕ್ಕೆ ಸಿಎಂ ಎಚ್​​​.ಡಿ ಕುಮಾರಸ್ವಾಮಿಯವರು ಕೂಡ ಬೆಂಬಲ ನೀಡಿದ್ಧಾರೆ.ರಾಜ್ಯದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿಗೆ ಒತ್ತಾಯಿಸಿ ಹಿಂದಿನಿಂದಲೂ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿವೆ. ಅದೇ ಮಾದರಿಯಲ್ಲಿ ಇಂದು ಕೂಡ ಕನ್ನಡಿಗರು ಶುರು ಮಾಡಿರುವ ಟ್ವಿಟ್ಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿನ ಉದ್ಯೋಗಕ್ಕಾಗಿ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ರಾಜ್ಯದಲ್ಲಿನ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಲ್ಲಾ ಕಚೇರಿಗಳಲ್ಲಿ; ರಾಜ್ಯ ಸರ್ಕಾರಿ ಸಾಮ್ಯದ ಎಲ್ಲ ಉದ್ದಿಮೆಗಳಲ್ಲಿ; ಖಾಸಗಿ ಕ್ಷೇತ್ರಗಳಲ್ಲಿಯೂ ಉದ್ಯೋಗಳಿಗೆ ಕನ್ನಡಿಗರನ್ನೇ ನೇಮಿಸಬೇಕೆಂದು ಆಗ್ರಹಿಸಲಾಗುತ್ತಿದೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರ ಮಾದೇಶ ಗೌಡ ಅವರು.

ಇದನ್ನೂ ಓದಿ: ‘ಬಿಬಿಎಂಪಿ ನಿಯಮದಂತೆ ಕನ್ನಡ ಕಡ್ಡಾಯಗೊಳಿಸಿ’: ಮೇಯರ್​ಗೆ ಕರುನಾಡ ಸೇವಕರ ತಂಡ ಆಗ್ರಹ

ಇನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕು. ಸಂದರ್ಶನಕ್ಕೆ ಉತ್ತರಿಸಲು ಕನ್ನಡದಲ್ಲಿಯೇ ಅವಕಾಶ ಇರಬೇಕು. ಅಲ್ಲದೇ ಕನಿಷ್ಠ 10ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು ಎನ್ನುವ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಟ್ವಿಟ್ಟರ್ ಅಭಿಯಾನ ಮಾಡಲಾಗುತ್ತಿದೆ.

ಕರುನಾಡ ಸೇವಕರು ಮತ್ತು ಇತರ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ಈ ಅಭಿಯಾನ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗಕ್ಕೆ ಆಗ್ರಹಿಸಿ ಕನ್ನಡಿಗರು ಬೃಹತ್ ಹೋರಾಟಗಳನ್ನು ಹಮ್ಮಿಕೊಳ್ಳಲು ನಿಶ್ಚಯಿಸಿದ್ದೇವೆ. ಹಾಗಾಗಿಯೇ ಇಂದು ಕರ್ನಾಟಕ ಜಾಬ್ಸ್​​ ಫಾರ್​​​ ಕನ್ನಡಿಗಾಸ್​​ ಹ್ಯಾಶ್‌ ಟ್ಯಾಗ್‌ ಬಳಸಿ ಅಭಿಯಾನ ಮಾಡುತ್ತಿದ್ದೇವೆ ಎನ್ನುತ್ತಾರೆ ರೂಪೇಶ್​​ ರಾಜಣ್ಣನವರು.

ಇದನ್ನೂ ಓದಿ: ಉತ್ತರ ಕರ್ನಾಟಕ ಕಿಚ್ಚು: ಬಂದ್​ ವಿರುದ್ಧವೇ ಕರುನಾಡ ಸೇವಕರಿಂದ ಪ್ರತಿಭಟನೆ

ಇನ್ನು ಐಬಿಪಿಎಸ್‌ ನಿಯಮಗಳ ಬದಲಾವಣೆಯಿಂದ ಕನ್ನಡಿಗರಿಗೆ 5 ವರ್ಷಗಳಲ್ಲಿ ಹಲವು ಸಾವಿರ ಉದ್ಯೋಗಗಳು ಕೈತಪ್ಪಿವೆ. ಇನ್ನು ಬೇರೆಡೆಗಳಲ್ಲಿ ಬರಿ ಹಿಂದಿ ಭಾಷಿಕರೇ ತುಂಬಿ ಹೋಗಿದ್ದಾರೆ. ಇನ್ನೂ ಓಲಾ, ಉಬೇರ್‌ಗಳಲ್ಲಿ, ಗಾರ್ಮೇಂಟ್ಸ್‌ಗಳಲ್ಲಿಯೂ ಕನ್ನಡಿಗರನ್ನು ಹೊಡೆದೋಡಿಸುವುದಷ್ಟೇ ಬಾಕಿ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ಕೆಲವು ಟ್ವೀಟ್​​ಗಳು ಇಲ್ಲಿವೆ.. 

First published: