ಇಂದೂ ಸಹ ವಿಶ್ವಾಸಮತ ಅನುಮಾನ; ಸುಪ್ರೀಂ ತೀರ್ಪಿನ ಹಿನ್ನೆಲೆ ಮನಸ್ಸು ಬದಲಿಸಿದರಾ ಸಿಎಂ ಕುಮಾರಸ್ವಾಮಿ?

ಶುಕ್ರವಾರ ಸಂಜೆ ಅರ್ಜಿ ಸಲ್ಲಿಸಿದರೆ ಸುಪ್ರೀಂ ಸೋಮವಾರ ವಿಚಾರಣೆ ನಡೆಸುತ್ತದೆ. ಈ ಸಂದರ್ಭದಲ್ಲಿ ಕೋರ್ಟ್ ವಿಪ್ ಮೇಲಿನ ಶಾಸಕಾಂಗ ಪಕ್ಷದ ನಾಯಕನ ಪರಮಾಧಿಕಾರವನ್ನು ಎತ್ತಿಹಿಡಿದರೆ ಇದರಿಂದ ಮೈತ್ರಿ ಸರ್ಕಾರಕ್ಕೆ ಲಾಭವಾಗಲಿದೆ ಎಂಬ ಕಾರಣಕ್ಕೆ ಬಹುಮತ ಯಾಚನೆಗೆ ಸೋಮವಾರ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಮೈತ್ರಿ ನಾಯಕರ ಎಲ್ಲಾ ತಂತ್ರಗಳಿಗೂ ಸುಪ್ರೀಂ ಉಲ್ಟಾ ಹೊಡೆದಿದೆ.

MAshok Kumar | news18
Updated:July 22, 2019, 11:59 AM IST
ಇಂದೂ ಸಹ ವಿಶ್ವಾಸಮತ ಅನುಮಾನ; ಸುಪ್ರೀಂ ತೀರ್ಪಿನ ಹಿನ್ನೆಲೆ ಮನಸ್ಸು ಬದಲಿಸಿದರಾ ಸಿಎಂ ಕುಮಾರಸ್ವಾಮಿ?
ಸಿಎಂ ಕುಮಾರಸ್ವಾಮಿ, ಸುಪ್ರೀಂ ಕೋರ್ಟ್.
  • News18
  • Last Updated: July 22, 2019, 11:59 AM IST
  • Share this:
ಬೆಂಗಳೂರು (ಜುಲೈ.22); ವಿಪ್ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತು ಸೂಕ್ತ ವಿವರಣೆ ಕೇಳಿ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮೈತ್ರಿ ಪಕ್ಷದಿಂದ ಸುಪ್ರೀಂ ಕೋರ್ಟ್​ಗೆ ನಾಲ್ಕು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಮಂಗಳವಾರಕ್ಕೆ ಮುಂದೂಡಿದ್ದು, ಇಂದೂ ಸಹ ಆಡಳಿತ ಪಕ್ಷ ಬಹುಮತ ಸಾಬೀತುಪಡಿಸುವುದು ಅಸಾಧ್ಯ ಎನ್ನಲಾಗುತ್ತಿದೆ.

ಶುಕ್ರವಾರ ಸದನದಲ್ಲಿ ಸಂಜೆಯೊಳಗಾಗಿ ಆಡಳಿತ ಪಕ್ಷ ಬಹುಮತ ಯಾಚನೆ ಮಾಡಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಆದರೆ, ಈ ವೇಳೆ ಆಶ್ವಾಸನೆ ನೀಡಿದ್ದ ಕುಮಾರಸ್ವಾಮಿ ಸಿದ್ದರಾಮಯ್ಯ ಹಾಗೂ ಮೈತ್ರಿ ಪಕ್ಷದ ನಾಯಕರು ಸೋಮವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ಸಭಾಧ್ಯಕ್ಷರಿಗೆ ಮಾತು ನೀಡಿದ್ದರು. ಈ ಆಧಾರದ ಮೇಲೆ ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸಿದರೆ ಇಂದೂ ಸಹ ಆಡಳಿತ ಪಕ್ಷ ಬಹುಮತಯಾಚಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

ಇದನ್ನೂ ಓದಿ : ಇಂದು ವಿಶ್ವಾಸಮತ ಸಾಬೀತು ಪ್ರಕ್ರಿಯೆ ಖಚಿತ; ವಿಶ್ವಾಸ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್

ಕೈಕೊಟ್ಟ ರಣತಂತ್ರ; ಮನಸ್ಸು ಬದಲಿಸಿದ ಸಿಎಂ ಕುಮಾರಸ್ವಾಮಿ;

ಅತೃಪ್ತ ಶಾಸಕರನ್ನು ಸದನಕ್ಕೆ ಹಾಜರಾಗುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಕಳೆದ ಬುಧವಾರವೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಸಾಕಷ್ಟು ಸಮಯಾವಕಾಶ ಇದ್ದಗ್ಯೂ ವಿಳಂಬ ಮಾಡುವ ಉದ್ದೇಶದಿಂದ ಮೈತ್ರಿ ನಾಯಕರು ಶುಕ್ರವಾರ ಅರ್ಜಿ ಸಲ್ಲಿಸಿದ್ದರು. ಈ ತೀರ್ಮಾನದ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ರಣತಂತ್ರ ಇತ್ತು.

ಶುಕ್ರವಾರ ಸಂಜೆ ಅರ್ಜಿ ಸಲ್ಲಿಸಿದರೆ ಸುಪ್ರೀಂ ಸೋಮವಾರ ವಿಚಾರಣೆ ನಡೆಸುತ್ತದೆ. ಈ ಸಂದರ್ಭದಲ್ಲಿ ಕೋರ್ಟ್ ವಿಪ್ ಮೇಲಿನ ಶಾಸಕಾಂಗ ಪಕ್ಷದ ನಾಯಕನ ಪರಮಾಧಿಕಾರವನ್ನು ಎತ್ತಿಹಿಡಿದರೆ ಇದರಿಂದ ಮೈತ್ರಿ ಸರ್ಕಾರಕ್ಕೆ ಲಾಭವಾಗಲಿದೆ ಎಂಬ ಕಾರಣಕ್ಕೆ ಬಹುಮತ ಯಾಚನೆಗೆ ಸೋಮವಾರ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಮೈತ್ರಿ ನಾಯಕರ ಕೊನೆಯ ಪ್ರಯತ್ನಕ್ಕೂ ಕಲ್ಲಾಕಿರುವ ಸುಪ್ರೀಂ ಈ ಎಲ್ಲಾ ಅರ್ಜಿಯನ್ನು ಮಂಗಳವಾರಕ್ಕೆ ಮುಂದೂಡಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಇಂದು ಬಹುಮತ ಸಾಬೀತುಪಡಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಒಗ್ಗಟ್ಟು ಪ್ರದರ್ಶಿಸಿದರೂ ಅತೃಪ್ತ ಶಾಸಕರಿಗೆ ಕಾಡ್ತಿದೆ ಚಿಂತೆ; ಸರ್ಕಾರ ಬಿದ್ದರೆ ರೆಬೆಲ್​ಗಳ ರಾಜಕೀಯ ಭವಿಷ್ಯವೇ ಅಸ್ತಂಗತ?
First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading