ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೆ ಸಿಎಂ ಮೀನಾಮೇಷ !

G Hareeshkumar | news18
Updated:January 10, 2019, 9:44 AM IST
ಸಿದ್ದರಾಮಯ್ಯ ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೆ ಸಿಎಂ ಮೀನಾಮೇಷ !
G Hareeshkumar | news18
Updated: January 10, 2019, 9:44 AM IST
ರಾಚಪ್ಪ ಬನ್ನಿದಿನ್ನಿ

ಬಾಗಲಕೋಟೆ ( ಜ.10) :  ಮೈತ್ರಿ ಸರ್ಕಾರ ದಲ್ಲಿ ಅನುದಾನ ವಿಚಾರವಾಗಿ ಹಾಲಿ-ಮಾಜಿ ಸಿಎಂ ಮಧ್ಯೆ ಫೈಟ್ ಶುರುವಾಗಿದೆ. ಮೈತ್ರಿ ಸರ್ಕಾರದಲ್ಲಿ ಮತ್ತೆ ಸಿದ್ದರಾಮಯ್ಯ ಮುನಿಸಿಕೊಳ್ಳುವ ಸಾಧ್ಯತೆಯಿದೆ. ಸಿದ್ದರಾಮಯ್ಯ ತಮ್ಮ ಕ್ಷೇತ್ರದ ವಿವಿಧ ಕಾಮಗಾರಿಗಳಿಗಾಗಿ 115 ಕೋಟಿ ರೂ ಅನುದಾನ ನೀಡುವಂತೆ  ಪತ್ರಕ್ಕೆ ಸಿಎಂ ಕೇವಲ 15 ಕೋಟಿ ರೂ ಅನುದಾನಕ್ಕೆ ಅಸ್ತು ಎಂದಿದ್ದಾರೆ.

ಸಿದ್ದರಾಮಯ್ಯ ಮತಕ್ಷೇತ್ರದ ಗ್ರಾಮೀಣ ರಸ್ತೆ ದುರಸ್ತಿಗೆ ಹಾಗೂ ಬಾದಾಮಿ, ಗುಳೇದಗುಡ್ಡ ಪುರಸಭೆ ಹಾಗೂ ಕೆರೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಕಾಮಗಾರಿಗೆ ಒಟ್ಟು 115 ಕೋಟಿ ರೂಪಾಯಿ ಪ್ರಸ್ತಾವಣೆಯನ್ನು ಸಿದ್ದರಾಮಯ್ಯ ಸಲ್ಲಿ‌ಸಿದ್ದರು. ಆದರೆ ಕೇವಲ 15 ಕೋಟಿ ರೂ ನೀಡಲು ಸಿಎಂ ಕುಮಾರಸ್ವಾಮಿ ಸೂಚನೆ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಬಿಡುಗಡೆಗೆ ಅನುಮೋದನೆ ನೀಡಿದೆ ಎನ್ನಲಾಗಿದೆ.

 ಇದನ್ನೂ ಓದಿ : ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾದ ಸಿದ್ದರಾಮಯ್ಯ; ಮೂವರು ಸಚಿವರೊಂದಿಗೆ ಇಂದು ಬದಾಮಿಯಲ್ಲಿ ಸಭೆ

ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರದ ಗ್ರಾಮೀಣ ರಸ್ತೆ ದುರಸ್ತಿಗೆ 50  ಕೋಟಿ ಕೋರಿದ್ದ ಮೊತ್ತದಲ್ಲಿ ಬದಲಿಗೆ 10 ಕೋಟಿ, ಬಾದಾಮಿ, ಗುಳೇದಗುಡ್ಡ ಪುರಸಭೆ ಹಾಗೂ ಕೆರೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ 65 ಕೋಟಿ ಕೋರಿದ ಬದಲಿಗೆ 15 ಕೋಟಿ ಬಿಡುಗಡೆಗೆ ಸಿಎಂ ಅಸ್ತು ಎಂದಿದ್ದಾರೆ.ಇನ್ನು ಸಿಎಂ ಕುಮಾರಸ್ವಾಮಿ ಸೂಚನೆ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ 15 ಕೋಟಿ ಬಿಡುಗಡೆಗೆ ಅನುಮೋದನೆ ನೀಡಿದೆ. ಆದರೆ ಸ್ವಕ್ಷೇತ್ರ ಅಭಿವೃದ್ಧಿಯಲ್ಲಿ ಸಿದ್ದರಾಮಯ್ಯ ಕೇಳಿರುವ ಮೊತ್ತದಲ್ಲಿ ಕಡಿಮೆ ಮೊತ್ತ ಬಿಡುಗಡೆಯಾದರೆ ಕಾಮಗಾರಿ ಮಾಡೋದು ಕಷ್ಟ ಸಾಧ್ಯ‌. ಕ್ಷೇತ್ರ ಅಭಿವೃದ್ಧಿಗೆ ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದರೆ, ಸಿದ್ದರಾಮಯ್ಯ ಗೆ ಸಿಎಂ ಅನುದಾನ ಬಿಡುಗಡೆ ಗೆ ಸಾಥ್ ನೀಡಿದರೆ . ಸ್ವಕ್ಷೇತ್ರ ಅಭಿವೃದ್ಧಿ ಸಾಧ್ಯ. ಆದರೆ. ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ಕ್ಷೇತ್ರ ಕ್ಕೆ ಅನುದಾನ ಬಿಡುಗಡೆ ಗೆ ಮೀನಾಮೇಷ ಎಣಿಸುತ್ತಿದ್ದಾರೆ.
Loading...

ಇನ್ನು ಸಿದ್ದರಾಮಯ್ಯ ಸ್ವಕ್ಷೇತ್ರ ಅಭಿವೃದ್ಧಿಗೆ ಹಲವು ಸಚಿವರನ್ನು ಕರೆತರುತ್ತಿದ್ದಾರೆ. ಮೊನ್ನೆ ಬಾದಾಮಿಗೆ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್, ನಗರಾಭಿವೃದ್ಧಿ ಸಚಿವ ಯು ಟಿ ಖಾದರ್​ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಕರೆತಂದು ಕ್ಷೇತ್ರ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಐತಿಹಾಸಿಕ ತಾಣ ಬಾದಾಮಿ, ಐಹೊಳೆ, ಪಟ್ಟದಕಲ್ಲು ಅಭಿವೃದ್ಧಿ ಸಂಬಂಧ ಪ್ರವಾಸೋದ್ಯಮ ಸಚಿವ ಸಾ,ರಾ ಮಹೇಶ್ ಪ್ರವಾಸಿ ತಾಣ ಭೇಟಿ ಬಳಿಕ ರಾಜ್ಯ ಸರ್ಕಾರ ಕ್ಕೆ 500 ಕೋಟಿ ರೂ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ಸೂಚನೆ ಮೇರೆಗೆ ಸಲ್ಲಿಸಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಈ ಪ್ರವಾಸಿ ತಾಣ ಅಭಿವೃದ್ಧಿ ಪ್ರಸ್ತಾವನೆಗೆ ಎಷ್ಟು ಅನುದಾನ ಬಿಡುಗಡೆ ಮಾಡುತ್ತಾರೆ ಅನ್ನೋದು ಕುತೂಹಲವಿದೆ.

ಇದನ್ನೂ ಓದಿ :  ಸಿದ್ದರಾಮಯ್ಯ ಪತ್ರ ಪೊಲಿಟಿಕ್ಸ್ ಫೇಲಾಯ್ತಾ..? ಬಜೆಟ್​​ನಲ್ಲಿ ಐತಿಹಾಸಿಕ ಬಾದಾಮಿ ಕ್ಷೇತ್ರ ಕ್ಕೆ ಶೂನ್ಯ!!

ಇನ್ನು ಸಿಎಂ ಕುಮಾರಸ್ವಾಮಿ ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಾದಾಮಿ ಮತಕ್ಷೇತ್ರ ಸೇರಿ 18 ಗ್ರಾಮಗಳಿಗೆ ಆಲಮಟ್ಟಿ ಜಲಾಶಯ ದಿಂದ ಶಾಶ್ವತ ಕುಡಿಯುವ ನೀರು ಯೋಜನೆಗೆ 220 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಿದ್ದಾರೆ.  ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ಪ್ರಸ್ತಾವನೆಗೆ ಕಡಿಮೆ ಅನುದಾನ ಬಿಡುಗಡೆ ಮಾಡಿರುವು ದಕ್ಕೆ ಸಿದ್ದರಾಮಯ್ಯಅವರಿಗೂ ಅತೃಪ್ತಿಯಿದೆ ಎನ್ನುವುದು ಆಪ್ತವಲಯದಲ್ಲಿ ಕೇಳಿಬರುತ್ತಿದ್ದು, ಹಾಲಿ ಮಾಜಿ ಸಿಎಂ ಮಧ್ಯೆ ಅನುದಾನದ ಫೈಟ್ ಮೈತ್ರಿಸರ್ಕಾರದಲ್ಲಿ ಸಿದ್ದರಾಮಯ್ಯ ಮುನಿಸಿಗೆ ಕಾರಣವಾಗುತ್ತಾ ಅಂತ ಕಾದು ನೋಡಬೇಕಿದೆ.

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ