'ಭತ್ತ ನಾಟಿ' ಆಯ್ತು 'ಸುಗ್ಗಿ ಹಬ್ಬ'ಕ್ಕೆ ತಯಾರಿ ನಡೆಸುತ್ತಿದ್ದಾರೆ ಸಿಎಂ ಕುಮಾರಸ್ವಾಮಿ

news18
Updated:September 4, 2018, 4:40 PM IST
'ಭತ್ತ ನಾಟಿ' ಆಯ್ತು 'ಸುಗ್ಗಿ ಹಬ್ಬ'ಕ್ಕೆ ತಯಾರಿ ನಡೆಸುತ್ತಿದ್ದಾರೆ ಸಿಎಂ ಕುಮಾರಸ್ವಾಮಿ
ಮಂಡ್ಯದ ಸೀತಾಪುರದಲ್ಲಿ ಭತ್ತದ ನಾಟಿ ಮಾಡುತ್ತಿರುವ ಕುಮಾರಸ್ವಾಮಿ
news18
Updated: September 4, 2018, 4:40 PM IST
ಜನಾರ್ದನ ಹೆಬ್ಬಾರ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.4): ರೈತರಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದಾಗಿ ಭತ್ತನಾಟಿ ಮಾಡಿ ರೈತ ಸ್ನೇಹಿ ಸಿಎಂ ಆಗಿದ್ದ ಎಚ್​.ಡಿ. ಕುಮಾರಸ್ವಾಮಿ, ಇದೀಗ ಸುಗ್ಗಿ ಹಬ್ಬದ ತಯಾರಿಯಲ್ಲಿದ್ದು, ಮತ್ತೊಮ್ಮೆ ರೈತರೊಂದಿಗೆ ಸಂಭ್ರಮ ಪಡಲು ಸಜ್ಜಾಗಿದ್ದಾರೆ.

ಕಳೆದ ಆಗಸ್ಟ್​ನಲ್ಲಿ ಮಂಡ್ಯದ ಸೀತಾಪುರ ಗ್ರಾಮದಲ್ಲಿ ರೈತರೊಂದಿಗೆ ಸೇರಿ ನಾಟಿ ಮಾಡಿದ್ದ ಸಿಎಂ ಈ ಕಾರ್ಯಕ್ರಮ ಭಾರೀ ಜನಪ್ರಿಯವಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಈಗ ಉತ್ತರ ಕರ್ನಾಟಕದಲ್ಲಿಯೂ ರೈತ ಚೈತನ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಸುಗ್ಗಿ ಹಬ್ಬದಲ್ಲಿ ಭಾಗಿಯಾಗಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ಈಗಾಗಲೇ ಉತ್ತರ ಕರ್ನಾಟಕ ರೈತರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿ ಅಲ್ಲಿನ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಸಿಎಂ ಈಗ ಈ ಮೂಲಕ ರೈತರ ಓಲೈಕೆಗಾಗಿ ಮುಂದಾಗಿದ್ದಾರೆ. ಈ ಉದ್ದೇಶದಿಂದ ಅಲ್ಲಿನ ಜನರ ಮನಗೆಲ್ಲಲು ಮುಂದಾಗಿದ್ದಾರೆ.

ಮುಂಗಾರು ಬೆಳೆ ರಾಶಿ ಕಣದಲ್ಲಿ ರೈತರ ಜತೆ ಸುಗ್ಗಿ ಹಬ್ಬದಲ್ಲಿ ಪಾಲ್ಗೊಳುವ ಮೂಲಕ ಮತ್ತೊಂದು ರೈತ ಚೈತನ್ಯ ಹಬ್ಬದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಬೀದರ್ ಅಥವಾ ರಾಯಚೂರಿನಲ್ಲಿ ಸುಗ್ಗಿಹಬ್ಬದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಇನ್ನು ಸಿಎಂ ಅವರಿಗೆ ಡಸ್ಟ್​ ಅಲರ್ಜಿ ಇರುವುದರಿಂದ ಇದಕ್ಕೆ ಹಿಂದೇಟು ಹಾಕುತ್ತಿದ್ದು, ವೈದ್ಯರ ಅನುಮತಿ ಪಡೆದು ಸುಗ್ಗಿಹಬ್ಬದಲ್ಲಿ ಭಾಗಿಯಾಗಲಿದ್ದು, ಇದರ   ದಿನಾಂಕದ ನಿಗದಿ ಬಗ್ಗೆ ಬಳಿಕ ಈಗಲೇ ಏನು ನಿರ್ಧಾರ ನಡೆಸಿಲ್ಲ.

ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲಮನ್ನಾಮಾಡಿದ ಸಿಎಂ ನಾವು ರೈತ ಪರ ಎಂಬುದಾಗಿ ತಿಳಿಸಿದ್ದರು. ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಕೊಂಡರೆ ತಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತೆ ಆಗುತ್ತದೆ. ಯಾವುದೇ ಕಾರಣಕ್ಕೂ ಈ ನಿರ್ಧಾರಕ್ಕೆ ಮುಂದಾಗಬೇಡಿ ಎಂದು ಕುಮಾರಸ್ವಾಮಿ ಸ್ವಾತಂತ್ರ್ಯದಿನದಂದು ಮನವಿ ಮಾಡಿದ್ದರು.
Loading...

ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯದ ಮೂಲಕ ಜನಪ್ರಿಯಗೊಂಡಿದ್ದ ಕುಮಾರಸ್ವಾಮಿ ಈಗ ರೈತ ಚೈತನ್ಯದ ಹಬ್ಬಗಳನ್ನು ಆಯೋಜನೆ ಮಾಡುವ ಮೂಲಕ ತಾವು ಮಣ್ಣಿನ ಮಗ ಎಂಬುದನ್ನು ಬಿಂಬಿಸಿಕೊಳ್ಳಲು ಮುಂದಾಗಿದ್ದಾರೆ.

 
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ