• Home
 • »
 • News
 • »
 • state
 • »
 • ಸಿಎಂ ಇಬ್ರಾಹಿಂ ಸ್ವಂತ ಮನೆಗೆ ಬರುವ ಬಗ್ಗೆ ಚಿಂತನೆ ಮಾಡಿದ್ದಾರೆ; ಎಚ್.ಡಿ.ಕುಮಾರಸ್ವಾಮಿ

ಸಿಎಂ ಇಬ್ರಾಹಿಂ ಸ್ವಂತ ಮನೆಗೆ ಬರುವ ಬಗ್ಗೆ ಚಿಂತನೆ ಮಾಡಿದ್ದಾರೆ; ಎಚ್.ಡಿ.ಕುಮಾರಸ್ವಾಮಿ

ದೇವೇಗೌಡರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದ ಸಿಎಂ ಇಬ್ರಾಹಿಂ. ಎಚ್.ಡಿ.ಕುಮಾರಸ್ವಾಮಿ ಇದ್ದಾರೆ,.

ದೇವೇಗೌಡರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದ ಸಿಎಂ ಇಬ್ರಾಹಿಂ. ಎಚ್.ಡಿ.ಕುಮಾರಸ್ವಾಮಿ ಇದ್ದಾರೆ,.

ಮೈತ್ರಿ ಸರ್ಕಾರದ ವೇಳೆ‌ ಹೊರಟ್ಟಿಗೆ ಸಭಾಪತಿ ಸ್ಥಾನ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಸಹಕಾರ ಕೊಟ್ಟಿರಲಿಲ್ಲ. ದೇವೇಗೌಡರು ದೆಹಲಿಗೂ ಹೋಗಿ ಮಾತಾಡಿದ್ದರು. ಆದರೆ ಪ್ರಯೋಜನ ಆಗಿರಲಿಲ್ಲ. ಮೈತ್ರಿ ಧರ್ಮದ ಪಾಲನೆ ಆಗಿರಲಿಲ್ಲ.  ಆಗ ಇದ್ದ ಸ್ಥಿತಿ ಆಗಲೇ ಮುಕ್ತಾಯ ಆಗಿದೆ. ಈಗ ಹೊಸದೊಂದು ಶುರುವಾಗಿದೆ ಎಂದು ಹೇಳಿದರು.

ಮುಂದೆ ಓದಿ ...
 • Share this:

  ಬೆಂಗಳೂರು; ಸಿಎಂ ಇಬ್ರಾಹಿಂ ಅವರು ಸ್ವಂತ ಮನೆಗೆ ಬರುವ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಈ ಬಗ್ಗೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ನಾನು ಇಬ್ರಾಹಿಂ ಅವರನ್ನು ಭೇಟಿ ಮಾಡಿದ ಬಳಿಕ ಕೆಲವು ಕಾಂಗ್ರೆಸ್ ನಾಯಕರು ಇಬ್ರಾಹಿಂ ಮನೆಗೆ ಹೋಗಿದ್ದಾರೆ. ಈಗ ಇಬ್ರಾಹಿಂ ಮನೆ ಅಡ್ರೆಸ್ ಹುಡುಕಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.


  ಸಿಎಂ ಇಬ್ರಾಹಿಂ ಅವರು ಇಂದು ದೇವೇಗೌಡರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಇಬ್ರಾಹಿಂ ಪ್ರವಾಸ ಹೋಗಿ ಬಂದ ಬಳಿಕ ಒಂದು ನಿರ್ಣಯ ಮಾಡ್ತಾರೆ. ನಾಳೆ ಸದನದಲ್ಲಿ ಜೆಡಿಎಸ್ ಪಾತ್ರ ಸ್ಪಷ್ಟವಾಗಿ ಇದೆ. ಸದನ ಕರೆಯುವ ವಿಚಾರದಲ್ಲಿ ಎಲ್ಲರೂ ಒಂದು ರೀತಿಯಲ್ಲಿ ಆತುರ ತೋರಿಸಿದರು. ಅನಿರ್ದಿಷ್ಟ ಅವಧಿಯವರೆಗೆ ಸದನ ಮುಂದೂಡಿಕೆ ಮಾಡಿದ ಬಳಿಕ ಸಂಪುಟ ಸಭೆ ಕರೆಯಬೇಕಾಗಿತ್ತು.  ಸಂಪುಟ ಸಭೆಯ ನಿರ್ಣಯ ರಾಜ್ಯಪಾಲರಿಗೆ ತಿಳಿಸಬೇಕು. ಆದರೆ ಕೆಲವು ಬಿಜೆಪಿ ಪರಿಷತ್ ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿದರು. ಈಗ ಪರಿಷತ್ ಸೆಕ್ರೆಟರಿ ಮೂಲಕ ಸದನ ಕರೆಯಲಾಗಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತೊ ಗೊತ್ತಿಲ್ಲ. ಸಭಾಪತಿ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಚಾರದಲ್ಲಿ ಪಕ್ಷದ ತಿರ್ಮಾನ ನಾಳೆ ಪ್ರಕಟ ಆಗಲಿದೆ ಎಂದು ಹೇಳಿದರು.


  ಇದನ್ನು ಓದಿ: ಚನ್ನಪಟ್ಟಣದಲ್ಲಿ ತಲೆ ಎತ್ತಲಿದೆ ದೇಶದ ಅತಿದೊಡ್ಡ ಚಾಮುಂಡಿ ವಿಗ್ರಹ; ಮುಸ್ಲಿಂ ಶಿಲ್ಪಿಯಿಂದ ತಾಯಿ ವಿಗ್ರಹದ ಮಾದರಿ ರಚನೆ


  ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ನಾಳೆ ಶಾಸಕರ ಸಭೆ ಕರೆದು ಅಂತಿಮ ತಿರ್ಮಾನ ಮಾಡ್ತೇವೆ. ಹಿಂದೆ ಮೈತ್ರಿ ಸರ್ಕಾರದ ವೇಳೆ‌ ಹೊರಟ್ಟಿಗೆ ಸಭಾಪತಿ ಸ್ಥಾನ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಸಹಕಾರ ಕೊಟ್ಟಿರಲಿಲ್ಲ. ದೇವೇಗೌಡರು ದೆಹಲಿಗೂ ಹೋಗಿ ಮಾತಾಡಿದ್ದರು. ಆದರೆ ಪ್ರಯೋಜನ ಆಗಿರಲಿಲ್ಲ. ಮೈತ್ರಿ ಧರ್ಮದ ಪಾಲನೆ ಆಗಿರಲಿಲ್ಲ.  ಆಗ ಇದ್ದ ಸ್ಥಿತಿ ಆಗಲೇ ಮುಕ್ತಾಯ ಆಗಿದೆ. ಈಗ ಹೊಸದೊಂದು ಶುರುವಾಗಿದೆ. ಆದರೆ ಗೋಹತ್ಯೆ ವಿಧೇಯಕ ವಿಚಾರದಲ್ಲಿ ನಾವು ಸಂಪೂರ್ಣವಾಗಿ ವಿರೋಧ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ಸ್ಷಷ್ಟಪಡಿಸಿದರು.

  Published by:HR Ramesh
  First published: