C.M Ibrahim Resignation: ಕೊನೆಗೂ ರಾಜೀನಾಮೆ ನೀಡಿದ ಸಿ.ಎಂ ಇಬ್ರಾಹಿಂ ಮಂತ್ರಾಲಯ ದರ್ಶನ ಪಡೆಯಲಿದ್ದಾರೆ!

2024 ರ ಜೂನ್ ತಿಂಗಳವರೆಗೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂ ಅವರ ಸದಸ್ಯತ್ವ ಅವಧಿ ಇತ್ತು. 

ರಾಜೀನಾಮೆ ಸಲ್ಲಿಸಿದ ಸಿ ಎಂ ಇಬ್ರಾಹಿಂ

ರಾಜೀನಾಮೆ ಸಲ್ಲಿಸಿದ ಸಿ ಎಂ ಇಬ್ರಾಹಿಂ

 • Share this:
  ವಿಧಾನ ಪರಿಷತ್ ಸದಸ್ಯ (MLC) ಸ್ಥಾನಕ್ಕೆ ಅಂತೂ ಇಂತೂ ಸಿ.ಎಂ.ಇಬ್ರಾಹಿಂ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ವಿಧಾನ ಪರಿಷತ್ ಸದಸ್ಯರಾಗಿ ನೇಮಗೊಂಡಿದ್ದ ಸಿ.ಎಂ.ಇಬ್ರಾಹಿಂ ಬಹಳ ದಿನಗಳಿಂದಲೂ ರಾಜೀನಾಮೆ ಕೊಡುವ (C.M Ibrahim Resignation) ವಿಷಯ ಪ್ರಸ್ತಾಪಿಸುತ್ತಲೆ ಇದ್ದರು. ಕಾಂಗ್ರೆಸ್ ಜೊತೆ ಮುನಿಸಿಕೊಂಡು ಅಸಮಾಧಾನಗೊಂಡಿದ್ದ ಅವರು ತಮ್ಮ ಅಸಮಾಧಾನದ ವಿಷಯವನ್ನು ಆಗಾಗ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರಿಗೆ (Congress Leaders)  ಬಿಸಿ ತಟ್ಟಿಸುತ್ತಲೇ ಇದ್ದರು. 2024 ರ ಜೂನ್ ತಿಂಗಳವರೆಗೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂ ಅವರ ಸದಸ್ಯತ್ವ ಅವಧಿ ಇತ್ತು. ಇಂದು ಅವರು ರಾಜೀನಾಮೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಕಾಂಗ್ರೆಸ್ ನಿಂದ ಎಲ್ಲಾ ಸಂಬಂಧ ಕಳಚಿಕೊಂಡ ಹೊರಬಂದಂತಾಗಿದೆ.

  ರಾಹುಲ್ ಗಾಂಧಿ ರಾಜ್ಯಕ್ಕೆ ಬರುವ ದಿನದಂದೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಸಿ.ಎಂ ಇಬ್ರಾಹಿಂ. ಈಮೂಲಕ ಕಾಂಗ್ರೆಸ್ ವಕ್ತಾರರಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಅವರ ರಾಜೀನಾಮೆಯನ್ನು ವಿಧಾನ ಪರಿಷತ್ ಸಭಾಪರಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದಾರೆ.

  ಯುಗಾದಿ ನಂತರ ರಾಜಕೀಯ ಬದಲಾವಣೆಯ ಗಾಳಿ!
  ಎಲ್ಲಾ ಧರ್ಮದವರಿಗೆ ಗುರುವಾರ ಶುಭ ದಿನವಾದ ಕಾರಣ ಇಂದು ರಾಜೀನಾಮೆ ‌ನೀಡಿದ್ದೇನೆ ಮುಂದಿನ ನಮ್ಮ ನಡೆ ದೇವೇಗೌಡರ ಜೊತೆ.‌ ಇದು ಸರ್ವ ಸಮ್ಮತವಾದ ನಿರ್ಧಾರ. ನನ್ನ ಜೊತೆ ಅನೇಕ‌ ಜನ‌ ಬರುವವರಿದ್ದಾರೆ. ಆದರೆ ಅವರಿಗೆ ಬಲವಂತ‌ ಮಾಡಲು ಹೋಗಲ್ಲ. ಯುಗಾದಿ ಬಳಿಕ ದೊಡ್ಡ ಪ್ರವಾಹ ಬರುತ್ತದೆ.

  ಜೆಡಿಎಸ್​ ಸ್ವತಂತ್ರ ಸರ್ಕಾರ
  ಸ್ವತಂತ್ರವಾಗಿ ಸರ್ಕಾರ ನಡೆಸುವ ಶಕ್ತಿ‌ ಜೆಡಿಎಸ್ ಬರಬೇಕು ಎಂಬ ಇಚ್ಛೆ ಇದೆ. ಉತ್ತರ ಪ್ರದೇಶ ಚುನಾವಣೆ ಫಲಿತಾಂಶವನ್ನು ರಾಜ್ಯದಲ್ಲೂ ಕಾಣಲಿದ್ದೇವೆ. ನಮ್ಮ ತೊಡಕು ಸರಿಪಡಿಸಿ ಜನರ‌ ಆಶೀರ್ವಾದ ಪಡೆಯಬೇಕು ಎಂದು ಅವರು ತಮ್ಮ ಮುಂದಿನ ನಡೆಯ ಬಗ್ಗೆ ಅಧಿಕೃತವಾಗ ಘೋಷಿಸಿದ್ದಾರೆ.

  ಮಂತ್ರಾಲಯ ಸ್ವಾಮಿಗಳ ದರ್ಶನ
  ವಿಧಿಯಿಲ್ಲದೆ ಕಾಂಗ್ರೆಸ್ ಬಿಡಬೇಕಾಯಿತು. ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೇನೆ. ಜನ ನನ್ನ ಕೈ ಹಿಡಿಯುತ್ತಾರೆ. ಆದಷ್ಟು ಬೇಗ ಮಂತ್ರಾಲಯಕ್ಕೆ ಹೋಗಿ ಸ್ವಾಮಿಗಳ ದರ್ಶನ‌ ಮಾಡುತ್ತೇನೆ. ಮತೀಯ ಭಾವನೆಯಿಂದ ಹೊರ ಬರುವಂತೆ ಬಿಜೆಪಿಗೆ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಕಟ್ಟು, ಆ ಕಟ್ಟು ಈ ಕಟ್ಟು, ಜಟ್ಕಾ‌ ಕಟ್ಟು ತಲೆಕಟ್ಟು ಅಂತ ಏಕೆ ಹಿಡಿದು ಕೊಂಡಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ.

  ಯಾವುದೇ ಷರತ್ತು ಹಾಕಿಲ್ಲ!
  ಷರತ್ತು ಹಾಕಿ ಜೆಡಿಎಸ್ ಗೆ ಬಂದಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಗೆ ಯಾವುದೇ ಷರತ್ತು ಹಾಕಿಲ್ಲ. ನಮ್ಮ‌ಮನೆಗೆ ಷರತ್ತು ಹಾಕುತ್ತೇನಾ?. ನಮ್ಮ‌‌ ಮನೆಯ ಅಡುಗೆ ಮನೆ, ಬಾಗಿಲು, ಕಿಟಕಿ, ಎಲ್ಲಿದೆ ಅಂತ ನನಗೆ ಗೊತ್ತು. ಯಾವ ಷರತ್ತನ್ನೂ ಹಾಕಿ ಬಂದಿಲ್ಲ. ಕಾಂಗ್ರೆಸ್ ‌ನಲ್ಲಿ ಪ್ರಜಾಪ್ರಭುತ್ವದ ಆಧಾರದಲ್ಲಿ ನಾಯಕ ಆರಿಸಿಲ್ಲ. ಎಂದಿದ್ದಾರೆ.

  ಇದನ್ನೂ ಓದಿ: Hindu-Muslim: ಅಲ್ಲಮ ಪ್ರಭು ಜಾತ್ರೆಯಲ್ಲಿ ಹಿಂದೂ-ಮುಸ್ಲಿಂ ಸಮಾಗಮ! ರಾಜ್ಯಕ್ಕೆ ಮಾದರಿಯಾಯ್ತು ಈ ಗ್ರಾಮ

  ರಾಜ್ಯದಲ್ಲಿ ಹಿಂದು ಮುಸ್ಲಿಂ ಇಲ್ಲ. ಇಲ್ಲಿ ಜಾತಿ ರಾಜಕಾರಣ ಇರುವುದು. ಒಕ್ಕಲಿಗ, ಲಿಂಗಾಯತ, ಅಲ್ಪಸಂಖ್ಯಾತ, ಹಿಂದುಳಿದವರು ಮತ್ತು ದಲಿತರು ಈ ಪಂಚಭೂತಗಳು ಎಲ್ಲಿ ಹೋಗುತ್ತಾರೆ ಹಾಗೆ ಚುನಾವಣೆ ನಡೆಯುತ್ತದೆ. ಜೆಡಿಎಸ್ ನಲ್ಲಿ ದರ್ಶನಕ್ಕೆ ದಿಲ್ಲಿಗೆ ಹೋಗುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಕಾಂಗ್ರೆಸ್ ಮುಳುಗಿದ ಹಡಗು
  ಕಾಂಗ್ರೆಸ್ ಪಕ್ಷದಲ್ಲಿ ಸ್ವಾಭಿಮಾನ ಉಳಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ ಹೀಗಾಗಿ ನಾನು ರಾಜೀನಾಮೆ ನೀಡೋ ತೀರ್ಮಾನ ತಗೊಂಡಿದ್ದೇನೆ. ಅನೇಕ ಜನರು ನನ್ನ ಜೊತೆ ಕಾಂಗ್ರೆಸ್​ ಬಿಟ್ಟು ಬರ್ತಾ ಇದ್ದಾರೆ. 20 ರಿಂದ ಎಲ್ಲಾ ಕಡೇ ರಾಜೀನಾಮೆ ಪರ್ವ ಶುರುವಾಗಲಿದೆ. ನಾನು ಮುಂಚೆಯೇ ಹೇಳಿದ್ದೆ ಎಂದು ಅವರು ಈಮುನ್ನವೇ ಸುದ್ದಿಗೋಷ್ಠಿ ನನಡೆಸಿ ಹೇಳಿಕೆ ನೀಡಿದ್ದರು.

  ಇದನ್ನೂ ಓದಿ: ಕೊನೆಯಾಗುತ್ತಾ ಕೋವಿ ಇಟ್ಟುಕೊಳ್ಳುವ ಕೊಡವರ ಹಕ್ಕು? Supreme Courtನಲ್ಲಿ ಮೇಲ್ಮನವಿ ಸಲ್ಲಿಕೆ

  ಕಾಂಗ್ರೆಸ್ ಮುಳುಗಿದ ಹಡಗು ಅಂತಾ ಪಂಜಾಬ್ ತರ ಕರ್ನಾಟಕದಲ್ಲೂ ಆಗುತ್ತದೆ. ಸಿದ್ದರಾಮಯ್ಯ ಸಾಫ್ಟ್ ಕಾರ್ನರ್ ಇದ್ದಿದ್ದಕ್ಕೆ ಯಡಿಯೂರಪ್ಪ ಸರ್ಕಾರ ಬಂದಿರೋದು. ಪಂಜಾಬ್ ಕಾಂಗ್ರೆಸ್ ಒಳ ಜಗಳದಿಂದ ಕಾಂಗ್ರೆಸ್​ ಪಕ್ಷ ಸೋತಿದೆ, ರಾಜ್ಯ ಕಾಂಗ್ರೆಸ್ ನಾಯಕರ ಒಳ‌ಜಗಳದಿಂದ ಕಾಂಗ್ರೆಸ್ ಸೋಲಿನ ಬಗ್ಗೆ ನಾನು ಮಾತಾಡಲ್ಲ ಅವ್ರು ದೊಡ್ಡವರು ಅವರಿಗೆ ಒಳ್ಳೆದಾಗಲಿ ಅಂದಷ್ಟೆ ಹಾರೈಸುತ್ತೇನೆ ಅಂತ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
  Published by:guruganesh bhat
  First published: