ಇವಿಎಂ ಮೆಷಿನ್ ಯಾಕೆ ಹಿಂಪಡೆಯೋದಿಲ್ಲ?: ಬಿಜೆಪಿಗೆ ರಾಮನ ಪಾಠ ಮಾಡಿದ ಸಿ.ಎಂ. ಇಬ್ರಾಹಿಂ

ಬ್ಯಾಲಟ್ ಪೇಪರ್ ತೆಗೆದುಕೊಂಡು ಬನ್ನಿ ಎಂದರೂ ಕೇಳುತ್ತಿಲ್ಲ ಎಂದು ಇಬ್ರಾಹಿಂ ಹೇಳಿದಾಗ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯರು, ಇವಿಎಂ ಮೆಷಿನ್ ತಂದಿದ್ದೇ ಕಾಂಗ್ರೆಸ್ ಎಂದು ಕಿಚಾಯಿಸಿದರು.

ಇಬ್ರಾಹಿಂ

ಇಬ್ರಾಹಿಂ

 • Share this:
  ಬೆಂಗಳೂರು(ಮಾ. 19): ಸ್ವಾರಸ್ಯಕರ ಮಾತಿನ ಜೊತೆಗೆ ವಿವಾದಾತ್ಮಕ ಮಾತುಗಳಿಗೂ ಹೆಸರಾದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಇವತ್ತು ವಿಧಾನಪರಿಷತ್ ಕಲಾಪದಲ್ಲಿ ಎರಡೂ ರೀತಿಯ ಮಾತುಗಳನ್ನಾಡಿ ಗಮನ ಸೆಳೆದರು. ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಸದಸ್ಯ ಇಬ್ರಾಹಿಂ ಇವಿಎಂ ಮೆಷೀನ್ ವಿಚಾರ ಪ್ರಸ್ತಾಪ ಮಾಡಿದರು. ಚುನಾವಣೆಯಲ್ಲಿ ಬ್ಯಾಲಟ್ ಪೇಪರ್ ಬಳಸಿ ಎಂದರೂ ಬಿಜೆಪಿಯವರು ಯಾಕೆ ಕೇಳುತ್ತಿಲ್ಲ ಎಂದವರು ಪ್ರಶ್ನೆ ಮಾಡಿದರು.

  ಇವಿಎಂ ಮೆಷಿನ್ ಬಗ್ಗೆ ನಮಗೆ ಅನುಮಾನ ಇದೆ. ಅದರಲ್ಲಿ ಏನೋ ಸಮಸ್ಯೆ ಇದೆ. ಚುನಾವಣೆಯಲ್ಲಿ ಮತಯಂತ್ರದ ಬದಲು ಬ್ಯಾಲಟ್ ಪೇಪರ್ ತೆಗೆದುಕೊಂಡು ಬನ್ನಿ ಎಂದರೂ ಕೇಳುತ್ತಿಲ್ಲ ಎಂದು ಇಬ್ರಾಹಿಂ ಹೇಳಿದಾಗ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯರು, ಇವಿಎಂ ಮೆಷಿನ್ ತಂದಿದ್ದೇ ಕಾಂಗ್ರೆಸ್ ಎಂದು ಕಿಚಾಯಿಸಿದರು.

  ಇದನ್ನೂ ಓದಿ: ಇನ್ನೂ ಮೂರು ವರ್ಷ ನೀವು ಸಿಎಂ ಆಗಿ ಇರ್ತೀರೋ ಇಲ್ವೋ ಗೊತ್ತಿಲ್ಲ; ಬಿಎಸ್‌ವೈ ಕಾಲೆಳೆದ ಸಿದ್ದರಾಮಯ್ಯ

  ಇದಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ ಇಬ್ರಾಹಿಂ ಶ್ರೀರಾಮನ ಉದಾಹರಣೆ ನೀಡಿದರು. “ರಾಮ ತನ್ನ ಪತ್ನಿ ಮೇಲೆ ಅಪವಾದ ಬಂದಾಗ ಆಕೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸುತ್ತಾನೆ. ಕಾಡಿಗೆ ಕಳುಹಿಸುತ್ತಾನೆ. ನಮಗೆ ಈಗ ಇವಿಎಂ ಮೆಷಿನ್ ಬಗ್ಗೆ ಅನುಮಾನ ಬಂದಿದೆ. ರಾಮನ ಹೆಸರು ಹೇಳುವ ನೀವು ಇವಿಎಂ ಮೆಷಿನ್ ಯಾಕೆ ಬದಲಿಸುವುದಿಲ್ಲ?” ಎಂದು ಕೇಳಿದರು.

  ಇದು ಒಂದಷ್ಟು ವಾಗ್ಸಮರಕ್ಕೆ ಕಾರಣವಾಯಿತು. ಬಳಿಕ ಇಬ್ರಾಹಿಂ ಅವರು 18 ವರ್ಷದವರಿಗೆ ಮತದಾನ ಹಕ್ಕು ನೀಡಿದ ವಿಚಾರದ ಬಗ್ಗೆ ಮಾತನಾಡುತ್ತಾ ವಿವಾದ ಮೈಮೇಲೆ ಎಳೆದುಕೊಂಡರು.

  ಇದನ್ನೂ ಓದಿ: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ: ಎಸ್.ಆರ್. ಪಾಟೀಲ್ ಪ್ರತಿಪಾದನೆ

  18 ವರ್ಷಕ್ಕೆ ಮತದ ಹಕ್ಕು ನೀಡಿದ್ದು ಸರಿ ಇಲ್ಲವೇನೋ. ಮತ ಹಾಕಲು ಅನುಭವ ಇರಬೇಕಿತ್ತೇನೋ ಅಂತ ಅನಿಸುತ್ತೆ. ಈಗ ಕೆಲಸ ಕೇಳಿಕೊಂಡು ಹೋದರೆ ಅನುಭವ ಬೇಕು ಅಂತಾರೆ ಎಂದು ಹೇಳಿದ ಇಬ್ರಾಹಿಂ, ಮದುವೆಯಾಗುವ ಹುಡುಗಿಯ ಅನುಭವ ಕೇಳಿದ ಪ್ರಸಂಗವನ್ನ ಪ್ರಸ್ತಾಪ ಮಾಡಿದರು.

  ಇಬ್ರಾಹಿಂ ಅವರ ಈ ಮಾತು ಬಿಜೆಪಿ ಸದಸ್ಯೆ ತೇಜಸ್ವಿನಿ ಅವರನ್ನು ಕೆರಳಿಸಿತು. ಮದುವೆಗೆ ಮುನ್ನ ಅನುಭವ ಕೇಳುತ್ತೀರಲ್ಲ. ಇದು ಮಹಿಳೆಯರಿಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇಬ್ರಾಹಿಂ ಮಾತಿನಿಂದ ನಮಗೆ ನೋವಾಗಿದೆ. ಬೇಕಾದಂತೆ ಮಾತನಾಡಲು ಇದು ಸಂತೆಯಲ್ಲ. ನಿಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದಾಗ ಅನುಭವ ಕೇಳಿದ್ರಾ? ಮಹಿಳೆಯರಿಗೆ ಧಕ್ಕೆ ತರುವ ಮಾತುಗಳನ್ನಾಡುತ್ತಿದ್ದೀರ. ನಾನು ಹೊರಗೆ ಹೋಗುತ್ತೇನೆ. ನೀವೇ ಮಾತಾಡಿಕೊಳ್ಳಿ ಎಂದು ಬಿಜೆಪಿ ಸದಸ್ಯೆ ತೇಜಸ್ವಿನಿ ಸದನದಿಂದ ಹೊರನಡೆದರು.

  First published: