• Home
  • »
  • News
  • »
  • state
  • »
  • CM Ibrahim: ಶಿವಮೊಗ್ಗದಲ್ಲಿ ನಡೆಯೋ ಕೊಲೆ, ಗಲಭೆಗಳಿಗೆ ಈಶ್ವರಪ್ಪ ಕಾರಣ; ಸಿ ಎಂ ಇಬ್ರಾಹಿಂ ಆರೋಪ

CM Ibrahim: ಶಿವಮೊಗ್ಗದಲ್ಲಿ ನಡೆಯೋ ಕೊಲೆ, ಗಲಭೆಗಳಿಗೆ ಈಶ್ವರಪ್ಪ ಕಾರಣ; ಸಿ ಎಂ ಇಬ್ರಾಹಿಂ ಆರೋಪ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

ಶಿವಮೊಗ್ಗದಲ್ಲಿ ನಡೆಯುತ್ತಿರೋ ಕೊಲೆ, ಗಲಭೆಗಳಿಗೆ ಈಶ್ವರಪ್ಪ ಅವರೇ ಕಾರಣ. ಅವರ ಬಾಯಿ ಹದ್ದುಬಸ್ತಿನಲ್ಲಿದ್ದರೆ ಎಲ್ಲದಕ್ಕೂ ಕಡಿವಾಣ ಬೀಳುತ್ತೆ ಎಂದು ಹೇಳಿರೋ ಇಬ್ರಾಹಿಂ, ಕಾಂಗ್ರೆಸ್ ನಾಯಕರ ವಿರುದ್ಧವೂ ಹರಿಹಾಯ್ದಿದ್ದಾರೆ.

  • Share this:

ಹುಬ್ಬಳ್ಳಿ (ಅ.26): ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಾಯಿ ಹದ್ದುಬಸ್ತಿನಲ್ಲಿಟ್ಟರೆ ಗಲಭೆ, ಕೊಲೆಗಳಿಗೆ ಕಡಿವಾಣ ಬೀಳುತ್ತೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (JDS State President CM Ibrahim) ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮತ್ತೊಂದು ಕೊಲೆ ಪ್ರಕರಣಕ್ಕೆ ಕೆ.ಎಸ್​ ಈಶ್ವರಪ್ಪ (Eshwarappa) ಪರೋಕ್ಷ ಕಾರಣ. ಈಶ್ವರಪ್ಪ ಸೋಲಿನ ಭೀತಿಯಲ್ಲಿ ಇರೋದ್ರಿಂದ ಇವೆಲ್ಲಾ ಅವಾಂತರ ಆಗುತ್ತಿದೆ. ಈಶ್ವರಪ್ಪರನ್ನು ಹದ್ದು ಬಸ್ತಿನಲ್ಲಿ ಇಟ್ರೆ ಎಲ್ಲವೂ ಸರಿಹೋಗುತ್ತೆ. ಈಶ್ವರಪ್ಪ ಬಾಯಿ ಯಂತ್ರದಂತೆ. ಏನು ಮಾತನಾಡುತ್ತಾರೋ ಅವರಿಗೆ ಗೊತ್ತಿರಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಇಬ್ರಾಹಿಂ ಹೇಳಿದ್ದಾರೆ. 


ಶಿವಮೊಗ್ಗ ಘಟನೆಗಳಿಗೆ ಈಶ್ವರಪ್ಪ ಕಾರಣ


ಶಿವಮೊಗ್ಗ ಘಟನೆಗಳಿಗೆ ಪರೋಕ್ಷವಾಗಿ ಅವರೇ ಕಾರಣ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನೂ ಆಗಲಿಲ್ಲ. ಯಡಿಯೂರಪ್ಪ ಅಥವಾ ರಾಘವೇಂದ್ರ ಮಾತಾಡಿದರೆ ಏನು ಗಲಭೆಗಳ ಆಗೊಲ್ಲ. ಆದ್ರೆ ಈಶ್ವರಪ್ಪ ಮಾತಾಡಿದರೆ ಅಲ್ಲಿ ಗಲಭೆಗಳು ಆಗ್ತಿವೆ. ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಇವೆಲ್ಲವೂ ನಡೆಯುತ್ತಿವೆ. ಈಶ್ವರಪ್ಪ ಸೋಲೋ ಹತಾಶೆಯಲ್ಲಿದ್ದಾರೆ.


ಗೃಹಸಚಿವ ಅರಗ ಜ್ಞಾನೇಂದ್ರ ಅದೇ ಜಿಲ್ಲೆಯವರು. ಆದರೆ ಅವರು ಬರೀ ಹೋಮ್ ಗೆ ಸೀಮಿತ, ಮಿನಿಸ್ಟರ್ ಅಲ್ಲ. ಅವರ ಮನೆಯಲ್ಲೇ ಯಾರೋ ಮಾತು ಕೇಳ್ತಾ ಇಲ್ಲ, ಇನ್ನ ಹೊರಗಿನವರು ಏನ್ ಕೇಳ್ತಾರೆ. ಚುನಾವಣಾ ಸಂದರ್ಭದಲ್ಲಿ ಇಂಥದ್ದನ್ನು ನಡೆಸೋದೆ ಪಕ್ಷದ ಪಾಲಿಸಿಯಾಗಿದ್ರೆ ಏನೂ ಮಾಡಲಾಗಲ್ಲ. ಶಿವಮೊಗ್ಗ, ಮಂಗಳೂರು ಸೇರಿ ಕರಾವಳಿಯಲ್ಲಿ ಇಂಥದ್ದನ್ನು ಮಾಡಲಾಗ್ತಿದೆ ಎಂದರು.


HD Kumaraswamy will be next cm said CM Ibrahim mrq
ಸಿ ಎಂ ಇಬ್ರಾಹಿಂ


ಯತ್ನಾಳ್ ಮತ್ತು ಬೆಲ್ಲದ್ ನಮ್ಮ ನಾಯಕರಲ್ಲ ಎಂಬ ಅರುಣ್ ಸಿಂಗ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತಾಳಿ ಕಟ್ಟಿ ಮದುವೆ ಆದ್ಮೇಲೆ ನನ್ ಹೆಂಡ್ತಿ ಅಲ್ಲ ಅಂದ್ರೆ ಹೇಗೆ. ಕಟ್ಟಿದ ತಾಳಿ ಕೊರಳಲ್ಲಿ ಇರಬೇಕಾದರೆ ನಾವು ಕಟ್ಟಿಯೇ ಇಲ್ಲ ಅನ್ನೋದು ಸರಿಯಲ್ಲ. ಕರ್ನಾಟಕದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಏನಾದ್ರೂ ಅಧಿಕಾರಕ್ಕೆ ಬರಬೇಕೆಂದರೆ ಕಾಂಗ್ರೆಸ್ ತಪ್ಪಿನಿಂದ ಮಾತ್ರ ಸಾಧ್ಯ ಎಂದರು.


ರಾಹುಲ್ ಯಾತ್ರೆಗೆ ಗೊತ್ತು ಗುರಿಯಿಲ್ಲ


ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿರೋ ಭಾರತ್ ಜೋಡೋ ಗೊತ್ತು ಗುರಿಯಿಲ್ಲದ ಯಾತ್ರೆ ಎಂದು ಸಿ.ಎಂ.ಇಬ್ರಾಹಿಂದ ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿ ಯಾಕೆ ಯಾತ್ರೆ ಮಾಡುತ್ತಿದ್ದರು ಅವರಿಗೆ ಗೊತ್ತಿಲ್ಲ. ಅದೊಂದು ಗೊತ್ತು ಗುರಿಯಿಲ್ಲದ ಯಾತ್ರೆ. ಅವರು ಜನರ ಸಂಕಷ್ಟವನ್ನು ಅರಿಯುವ ಜನತೆಗೆ ಸ್ಪಂದಿಸಲು ಯಾತ್ರೆ ಮಾಡ್ತಿಲ್ಲ. ಯಾತ್ರೆ ಹೆಸರಲ್ಲಿ ಸಾವಿರಾರು ಜನರನ್ನು ಜಮಾಯಿಸಲಾಗ್ತಿದೆ.


ಇದ್ರಿಂದ ಕಾಂಗ್ರೆಸ್ ಗೆ ಯಾವುದೇ ಪ್ರಯೋಜನವಾಗಲ್ಲ. ರಾಹುಲ್ ಯಾತ್ರೆ ನಾ ನೋಡಿ ಬಿಜೆಪಿ ಜನ ಸಂಕಲ್ಪ ಸಮಾವೇಶ ಮಾಡ್ತಿದೆ. ಜನ ಸಂಕಲ್ಪ ಸಮಾವೇಶದಲ್ಲಿ ಜನರಿಗಾಗಿ ಮಾಡಿದ ಕಾರ್ಯಗಳ ಬಗ್ಗೆ ಹೇಳ್ತಾನೇ ಇಲ್ಲ. ಬಿಜೆಪಿಯವರದ್ದು ಏನಿದ್ದರೂ ಪರ್ಸಂಟೇಜ್ ವ್ಯವಹಾರ. ಇದಕ್ಕೆ ಭಿನ್ನವಾಗಿ ಜೆಡಿಎಸ್ ನಿಂದ ಪಂಚರತ್ನ ಕಾರ್ಯಕ್ರಮ. ಶಿಕ್ಷಣ, ಆರೋಗ್ಯ, ನೀರಾವರಿ ಸೇರಿ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಜನರಿಗೆ ಹೇಳ್ತಾ ಇದ್ದೇವೆ. ಖಂಡಿತಾ ಜನ ನಮ್ಮನ್ನು ಬೆಂಬಲಿಸುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ಇಬ್ರಾಹಿಂ ಅಭಿಪ್ರಾಯಪಟ್ಟರು.


ಇದನ್ನೂ ಓದಿ:  Hubballi: ಚಿನ್ನದ ಆಸೆಗೆ ದೊಡ್ಡಮ್ಮನ ಕಿವಿಯನ್ನೇ ಕತ್ತರಿಸಿದ ಭೂಪ; ಕೊಲೆ ಮಾಡಿ ಬೀಗ ಹಾಕ್ಕೊಂಡು ಎಸ್ಕೇಪ್!


ಖರ್ಗೆ ಎಐಸಿಸಿ ಅಧ್ಯಕ್ಷರಾದ್ರೂ ಕಾಂಗ್ರೆಸ್ ಗೆ ಬೂಸ್ಟ್ ಸಿಗಲ್ಲ


ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಅಧಿಕಾರ ಸ್ವೀಕರಿಸಿದ್ದು, ಇದರಿಂದ ಕಾಂಗ್ರೆಸ್​ಗೆ ಏನೂ ಪ್ರಯೋಜನವಿಲ್ಲ. ಕಾಂಗ್ರೆಸ್ ನಲ್ಲಿ ಎರಡಿದ್ದ ಬಣಗಳು ಮೂರಾಗಿವೆ ಅಷ್ಟೇ ಎಂದು ಸಿ.ಎಂ.ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಬಣದ ನಂತರ ಇದೀಗ ಖರ್ಗೆ ಬಣ್ಣ ಮುನ್ನೆಲೆಗೆ ಬಂದಿದೆ. ರಾಹುಲ್ ಗಾಂಧಿಗೆ ಈ ಮೂರೂ ಬಣ್ಣಗಳನ್ನು ಜೋಡಿಸುವುದೇ ಕೆಲಸವಾಗಿದೆ. ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಿತ್ತು. ಕೇವಲ 80 ಸೀಟು ಗಳಿಸಿತ್ತು.
ಈಗ ಎಐಸಿಸಿ ಅಧ್ಯಕ್ಷರಾದ ಮೇಲೆ ಮಹತ್ವದ ಬದಲಾವಣೆ ನಿರೀಕ್ಷಿಸುವಂತಿಲ್ಲ.


ಇದನ್ನೂ ಓದಿ: C T Ravi: ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ರಸ್ತೆ ಬದಿ ಕುಳಿತು ಗಿಳಿಶಾಸ್ತ್ರ ಕೇಳಿದ ಸಿ ಟಿ ರವಿ!


ಕಾಂಗ್ರೆಸ್ ಗೆ ಬೂಸ್ಟ್ ಸಿಗೋಕೆ ಸಾಧ್ಯವಿಲ್ಲ. ಮತ್ತೊಬ್ಬರ ಕೈಗೊಂಬೆಯ ರೀತಿಯಲ್ಲಿ ಅವರು ಕೆಲಸ ಮಾಡುತ್ತಾರೆ ಅಷ್ಟೇ ಎಂದರು. ಬಸವರಾಜ ಹೊರಟ್ಟಿಗೆ ಸ್ಪೀಕರ್ ಸ್ಥಾನ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಅನಾಥ ಮಗು ಆದ ಸ್ಥಿತಿ ಹೊರಟ್ಟಿ ಅವರದ್ದಾಗಿದೆ. ಈಗಲೂ ಕಾಲ ಮಿಂಚಿಲ್ಲ. ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಗೆ ಬರಲಿ. ಹಿಂದಿನಂತೆಯೇ ಗೌರವ ಸ್ಥಾನಮಾನಗಳು ಜೆಡಿಎಸ್ ನಿಂದ ಸಿಗುತ್ತೆ ಎಂದು ಹೊರಟ್ಟಿಗೆ ಆಹ್ವಾನ ನೀಡಿದರು.

Published by:ಪಾವನ ಎಚ್ ಎಸ್
First published: