ಹುಬ್ಬಳ್ಳಿ: ಭದ್ರಾ ಮೇಲ್ದಂಡೆ ಯೋಜನೆಗೆ (Upper Bhadra project ) ಹಣ ಕೊಟ್ಟಿರೋದು ಸಾಕಾ? ನಿಮ್ಮ ಬಾಯಾಗ ಮಣ್ಣು ಹಾಕಾ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವಿರುದ್ಧ ಸಿಎಂ ಇಬ್ರಾಹಿಂ (CM Ibrahim) ಕಿಡಿಕಾರಿದ್ದಾರೆ. ರಾಷ್ಟ್ರೀಯ ಯೋಜನೆ ಅಂತ ಮಾಡಿ ಕೇವಲ 5200 ಕೋಟಿ ರೂಪಾಯಿ ಸಾಕಾ? ದೇವೇಗೌಡರಿದ್ದಾಗ (HD Devegowda) 18 ಸಾವಿರ ಕೋಟಿ ರೂಪಾಯಿ ಕೊಡಿಸಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ (Upper Krishna Project) ಸೇರಿ ಯಾವ ನೀರಾವರಿ ಯೋಜನೆಗೂ ದುಡ್ಡಿಲ್ಲ. ಕಾಂಗ್ರೆಸ್, ಬಿಜೆಪಿಯ ಚಿಕ್ಕಪ್ಪನ ಮಕ್ಕಳು ಎಂದು ಇಬ್ರಾಹಿಂ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿರೋದು ಸಾಕಾ? ರಾಷ್ಟ್ರೀಯ ಯೋಜನೆ ಅಂತ ಮಾಡಿ ಕೇವಲ 5200 ಕೋಟಿ ರೂಪಾಯಿ ಕೊಟ್ಟಿದ್ದಾರೆ. ದೇವೇಗೌಡರಿದ್ದಾಗ 18 ಸಾವಿರ ಕೋಟಿ ರೂಪಾಯಿ ಕೊಡಿಸಿದ್ದರು. ನಿಮ್ಮ ಕೈಯಲ್ಲಿ ಜಿ.ಎಸ್.ಟಿ. ದುಡ್ಡು ಕೊಡಿಸೋಕೆ ಆಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿ ಯಾವ ನೀರಾವರಿ ಯೋಜನೆಗೂ ದುಡ್ಡಿಲ್ಲ. ಮಹಾದಾಯಿ, ಮೇಕೆ ದಾಟು ಯೋಜನೆಗೂ ದುಡ್ಡು ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: HD Kumaraswamy: ‘ಪ್ರಹ್ಲಾದ್ ಜೋಶಿಯವರನ್ನ ಸಿಎಂ ಮಾಡಲು RSS ಹುನ್ನಾರ, 8 ಜನ ಡಿಸಿಎಂ’- ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್!
ಬೈರತಿ ಬಸವರಾಜ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರ್ತಿದಾನೆ!
ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ ಬಿಜೆಪಿಯ ಚಿಕ್ಕಪ್ಪನ ಮಕ್ಕಳು. ನಮಗೆ ಬಿ ಟೀಂ ಅಂತಾರೆ. ನಮ್ಮ ಶಾಸಕರನ್ನು ಕರೆದುಕೊಂಡು ಹೋಗಿದ್ದರು. ಬೈರತಿ ಬಸವರಾಜ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರ್ತಿದಾನೆ. ಇದರ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಜೆಡಿಎಸ್ ನಲ್ಲಿ ನವಗ್ರಹ ಪೂಜೆ ಮಾಡಬೇಕು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ. ಜೆಡಿಎಸ್ ಅವರದ್ದು ಕುಟುಂಬ ರಾಜಕಾರಣ ಅಂತಾರೆ. 13 ಮಂದಿಗೆ ಮಂಚದ ಮೇಲೆ ಮಲಗಿಸಿ ಸರ್ಕಾರ ರಚಿಸಿದ್ದೀರಿ, ನಾಚಿಕೆಯಾಗಲ್ವಾ ನಿಮಗೆ. ಸದಾನಂದ ಗೌಡರೂ ಸ್ಟೇ ತಂದಿದ್ದಾರೆ. ರಮೇಶ್ ಜಾರಕಿಹೊಳಿ ಕೇಂದ್ರ ಗೃಹ ಸಚಿವರಿಗೆ ಸಿ.ಡಿ ಕೊಟ್ಟು ದೂರು ನೀಡಿದ್ದಾರೆ. ಇಂತಹ ದರಿದ್ರ ಜನರನ್ನು ಇಟ್ಟುಕೊಂಡಿದ್ದೀರಿ. ಹಿಂದೆ ಬಿಜೆಪಿಯಲ್ಲಿ ಎಂತಹ ಜನರಿದ್ರು. ನಿಮ್ಮ ಸಹೋದರನ ಬ್ಯಾಂಕ್ ಅಕ್ರಮ ಮುಚ್ಚಿಕೊಂಡಿದ್ದೀರಿ. ಆ ಮೂಲಕ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದೀರಿ. ಈಗ ನಮಗೆ ಪಾಠ ಹೇಳ್ತೀರಿ. ನಮ್ಮನ್ನ ಕಾಡಿಸಬೇಡಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ, ಮುಂದೂ ಲವ್ ಜಿಹಾದ್ ಅಂತೀರಿ. 12 ಜನರ ಕ್ಯಾಸೆಟ್ ಲವ್ ಜಿಹಾದ್ ನದ್ದಾ? ಆ ಕ್ಯಾಸೆಟ್ ಗಳನ್ನ ಮೊದಲು ತೋರಿಸಿ. ಸಿ.ಡಿ ಬಹಿರಂಗ ಮಾಡದಂತೆ ಸ್ಟೇ ತಂದುಕೊಂಡವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ. ಸ್ಯಾಂಟ್ರೋ ರವಿ ಕಥೆ ಏನಾಯ್ತೂ? ಪೊಲೀಸ್ ಅಧಿಕಾರಿಗಳ ಕದ್ದು, ಐಎಎಸ್ ಅಧಿಕಾರಿಗಳದ್ದು ಸಿ.ಡಿ ಮಾಡಿಸಲಾಗಿದೆ. ಮೋದಿ ಇದಕ್ಕೆ ಉತ್ತರ ಕೊಡ್ತಾರಾ? ಪ್ರಹ್ಲಾದ್ ಜೋಶಿ, ಕೇಂದ್ರದ ಮಂತ್ರಿ, ರಾಜ್ಯಾಧ್ಯಕ್ಷರು ಸಿ.ಡಿ ಕುರಿತು ಉತ್ತರ ಕೊಡಬೇಕೆಂದು ಹುಬ್ಬಳ್ಳಿಯಲ್ಲಿ ಸಿ.ಎಂ.ಇಬ್ರಾಹಿಂ ಆಗ್ರಹಿಸಿದರು.
ಇದನ್ನೂ ಓದಿ: Siddaramaiah: ಹೆದರಿಸೋಕೆ ಬಂದರೆ ತೊಡೆ ತಟ್ಟೋದು ನನಗೆ ಗೊತ್ತಿದೆ; ಎದುರಾಳಿಗಳಿಗೆ ಮಾಜಿ ಸಿಎಂ ಸಿದ್ದು ವಾರ್ನಿಂಗ್
ಸಿದ್ದರಾಮಯ್ಯ ಗೆಲ್ಲಬೇಕು ಎಂದರೆ ಯಡಿಯೂರಪ್ಪ ಸಹಕಾರ ಬೇಕು
ಇವತ್ತು ವರುಣಾದಲ್ಲಿ ಯಡಿಯೂರಪ್ಪ ಇಲ್ಲದೆ ಸಿದ್ದರಾಮಯ್ಯ ಗೆಲ್ಲೋಕೆ ಆಗಲ್ಲ ಎಂದು ಸಿ.ಎಂ.ಇಬ್ರಾಹಿಂ ಅಭಿಪ್ರಾಯಪಟ್ಟಿದ್ದಾರೆ. ಯಡಿಯೂರಪ್ಪ ಅವರೇ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ ಎಂದಿದ್ದಾರೆ. ನಾನೂ ಕೂಡಾ ಕೋಲಾರ ಬೇಡ ಎಂದಿದ್ದೇನೆ. ಸಿದ್ದರಾಮಯ್ಯ, ಯಡಿಯೂರಪ್ಪ ಒಂದೇ ಎಂದರು.
ಅಲ್ಲದೆ, ಇತ್ತೀಚೆಗೆ ಯಾಕೋ ಬಿಜೆಪಿ ದಾರಿ ತಪ್ಪಿದೆ. ತನ್ನ ಮಗ ಹುಮ್ನಾಬಾದ್ ನಿಂದ ಸ್ಪರ್ಧಿಸುತ್ತಿದ್ದಾನೆ. ಸಿದ್ಧರಾಮಯ್ಯಗೆ ನಾನೇ ಎರಡು ಬಾರಿ ರಾಜಕೀಯ ಭವಿಷ್ಯ ಕೊಟ್ಟಿದ್ದೆ. ಆದರೆ ನನ್ನ ಮಗನ ಬಗ್ಗೆ ಕಾಳಜಿ ತೋರಿಸಲಿಲ್ಲ. ಹುಮ್ನಾಬಾದ್ಗೆ ಜಮೀರ್ಗೆ ಕರೆದುಕೊಂಡು ಹೋಗಿ ವಿಷ ಹಾಕ್ತಿದ್ದಾರೆ. ಹುಮ್ನಾಬಾದ್ ನಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗಿದೆ. ನನ್ನ ಬಗ್ಗೆ ಅಭಿಮಾನ ಇತ್ತು ಎಂದರೆ ಹುಮ್‌ನಾಬಾದ್ ನಲ್ಲಿ ನಮಗೆ ಬೆಂಬಲ ನೀಡಲಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ