Hijab Row: ನಾವು ಸುಪ್ರೀಂಕೋರ್ಟಿಗೆ ಹೋಗುತ್ತೇವೆ: CM Ibrahim ಹೇಳಿಕೆ

ಈ ತರಹದ ವಿವಾದಗಳು ಇಲ್ಲಿಗೆ ನಿಲ್ಲಲ್ಲ. ನಾಳೆ ಜೀನ್ಸ್, ಬೇರೆ ಉಡುಪಿನ ಬಗ್ಗೆ ಚರ್ಚೆಯಾಗಬಹುದು. ಹಿಂದೂಗಳು ಸೆರಗನ್ನ ಮೈಮೇಲೆ ಹಾಕಿಕೊಳ್ಳುತ್ತಾರೆ. ಮುಸ್ಲಿಂ ಹೆಣ್ಣುಮಕ್ಕಳು ತಲೆಮೇಲೆ ಹಾಕ್ತಾರೆ. ಹೈಕೋರ್ಟ್ ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಿದ್ದು,  ನಾವು ಸುಪ್ರೀಂಕೋರ್ಟ್ ಗೆ ಹೋಗೋದಾಗಿ ಹೇಳಿದರು.

ಸಿ.ಎಂ ಇಬ್ರಾಹಿಂ

ಸಿ.ಎಂ ಇಬ್ರಾಹಿಂ

  • Share this:
Hijab Row: ಕರ್ನಾಟಕ ಹೈಕೋರ್ಟ್ (Karnataka Highcourt) ಜಡ್ಜ್ ಮೆಂಟ್ ಬಂದಿದ್ದು, ಮೂಲಭೂತವಾಗಿ ಧರ್ಮಕ್ಕೆ ಅಡಚಣೆ ಇಲ್ಲ ಎಂದಿದೆ. ಸುಪ್ರೀಂಗೆ (Supreme Court) ಹೋಗುವುದರ ಬಗ್ಗೆ ಸಮಾಜದ ಮುಖಂಡರು ತೀರ್ಮಾನ ತೆಗೆದುಕೊಳ್ತಾರೆ. ನ್ಯಾಯಾಲಯದ ಆದೇಶವನ್ನು ಧರ್ಮದ ದೃಷ್ಟಿಯಿಂದ ನೋಡಬಾರದು. ಸಂವಿಧಾನದ ದೃಷ್ಠಿಯಿಂದ ನೋಡಬೇಕು. ಹೆಣ್ಣು ಮಗಳು ತಿಲಕ, ವಿಭೂತಿ‌ ಇಡುವುದು ಧರ್ಮದಲ್ಲಿಲ್ಲ. ಆದರೆ ಅದು ನನಗೆ ಇಡಬೇಕೆಂಬ ಇಷ್ಟವಿದೆ. ನೀವು ಬೇಡ ಅನ್ನೋಕೆ ಸಾಧ್ಯವೇ? ಇದರ ಬಗ್ಗೆ ಸುಪ್ರೀಂನಲ್ಲಿ ಚಾಲೆಂಜ್ ಆಗಬೇಕಿದೆ. ತಾಯಂದಿರು ತಲೆಯ ಮೇಲೆ ಸೆರಗು ಹಾಕುವುದು ತಪ್ಪೇ ಎಂದು ಎಂಎಲ್ ಸಿ ಎಂ ಇಬ್ರಾಹಿಂ (MLC CM Ibrahim) ಪ್ರಶ್ನೆ ಮಾಡಿದ್ದಾರೆ.

ತೀರ್ಪಿನಿಂದ ಬೀದಿಗಿಳಿಯಬೇಕಾದ ಅವಶ್ಯಕತೆಯಿಲ್ಲ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂಗೆ ಹೋಗುವುದಕ್ಕೆ ಅವಕಾಶವಿದೆ. ಲಾಯರ್ ಮಜೀದ್ ಮೆಮನ್ ಅವರ ಜೊತೆಯೂ ನಾನು ಚರ್ಚೆ ಮಾಡಿದ್ದೇನೆ. ಒಗ್ಗಟ್ಟಾಗಿ ಸುಪ್ರೀಂಗೆ ಹೋಗಲು ಪ್ರಯತ್ನ ಮಾಡ್ತಿದ್ದೇವೆ. ರಾಜ್ಯದಲ್ಲಿ ಶಾಂತಿ ಕಾಪಾಡುವುದಕ್ಕೆ ನೋಡ್ತಿದ್ದೇವೆ ಎಂದರು.

ಸುಪ್ರಿಂಕೋರ್ಟಿಗೆ ಹೋಗುತ್ತೇವೆ

ಈ ತರಹದ ವಿವಾದಗಳು ಇಲ್ಲಿಗೆ ನಿಲ್ಲಲ್ಲ. ನಾಳೆ ಜೀನ್ಸ್, ಬೇರೆ ಉಡುಪಿನ ಬಗ್ಗೆ ಚರ್ಚೆಯಾಗಬಹುದು. ಹಿಂದೂಗಳು ಸೆರಗನ್ನ ಮೈಮೇಲೆ ಹಾಕಿಕೊಳ್ಳುತ್ತಾರೆ. ಮುಸ್ಲಿಂ ಹೆಣ್ಣುಮಕ್ಕಳು ತಲೆಮೇಲೆ ಹಾಕ್ತಾರೆ. ಹೈಕೋರ್ಟ್ ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಿದ್ದು,  ನಾವು ಸುಪ್ರೀಂಕೋರ್ಟ್ ಗೆ ಹೋಗೋದಾಗಿ ಹೇಳಿದರು.

ಇದನ್ನೂ ಓದಿ:  Hijab Row: ಎಲ್ಲರೂ ಸಹಕಾರ ಕೊಟ್ಟು ಶಾಂತಿ ಸೌಹಾರ್ದತೆ ಕಾಪಾಡಬೇಕು: ಹೈಕೋರ್ಟ್ ಆದೇಶ ಪಾಲಿಸುವಂತೆ ಸಿಎಂ ಮನವಿ

ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಆದಿ ಹೇಳಿಕೆ

ಹಿಜಾಬ್ ವಿಚಾರದಲ್ಲಿ ಸಾಕಷ್ಟು ವಿವಾದಗಳು ಎದ್ದಿದ್ದವು. ಇಂದು ತೀರ್ಪಿನ ಕುರಿತಂತೆಯೂ ಧರ್ಮದ ಮುಖಂಡರ ಜತೆ ಚರ್ಚೆ ನಡೆಯಲಿದೆ. ಎಲ್ಲರೂ ಶಾಂತರೀತಿಯಲ್ಲಿ ಇರುವಂತೆ ಕೋರಿಕೊಳ್ಳಲಾಗಿದೆ. ಹೈ ಕೋರ್ಟ್ ತೀರ್ಪು ನೀಡಿದ್ದು, ಸುಪ್ರೀಂ ಮೊರೆ ಹೋಗಲು ಚಿಂತನೆ ನಡೆಲಾಗುತ್ತಿದೆ ಎಂದು ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಆದಿ ಹೇಳಿಕೆ ನೀಡಿದ್ದಾರೆ.

ಶಾಂತಿ ಸೌಹಾರ್ದಯುತವಾಗಿ ವರ್ತನೆ ಮಾಡುವಂತೆ ಎಲ್ಲರಿಗೂ ಕೋರಿಕೊಳ್ಳಲಾಗಿದೆ. ಕಾನೂನಾತ್ಮಕವಾಗಿ ನಾವು ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ. ನ್ಯಾಯಾಧೀಶರು ಯಾವ ಆಧಾರದ ಮೇಲೆ ತೀರ್ಪು ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಹಿಜಾಬ್ ಕುರಾನ್ ನಲ್ಲಿ ಕಡ್ಡಾಯ ಅಂತ ಹೇಳಿದೆ. ಕುರಾನ್ ನ ಅದೇಶ ಕಡ್ಡಾಯವಲ್ಲ ಎಂದು ಹೇಳಿದ್ದು ಎಷ್ಟು ಸರಿ ಅಂತ ಪ್ರಶ್ನೆ ಮಾಡಲಾಗುವುದು.
ಇಸ್ಲಾಂಮಿನ ಅವಿಭಾಜ್ಯ ಅಂಗ ಅಲ್ಲ ಎಂದು ಹೇಳಿದ್ದು ಸರಿಯಲ್ಲ ಅಂತ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೊರೆ ಹೋಗಲಾಗುವುದು ಎಂದು ತಿಳಿಸಿದರು.

ಶಾಂತಿ ಕಾಪಾಡುವಂತೆ ಸಿಎಂ ಬೊಮ್ಮಾಯಿ ಮನವಿ

ಸಮವಸ್ತ್ರದ ಕುರಿತು ನ್ಯಾಯಾಲಯ ಒಳ್ಳೆಯ ತೀರ್ಪು ನೀಡಿದೆ. ಇದು ಮಕ್ಕಳ (Students) ಭವಿಷ್ಯ ಶಿಕ್ಷಣ(Education)ದ ಪ್ರಶ್ನೆಯಾಗಿದೆ. ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದು ಇಲ್ಲ.  ನ್ಯಾಯಾಲಯದ ಆದೇಶವನ್ನು ಎಲ್ಲರು ಪಾಲಿಸಬೇಕು. ಎಲ್ಲರೂ ಸಹಕಾರ ಕೊಟ್ಟು ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು.

ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಈ ತೀರ್ಪನ್ನು ಒಪ್ಪಿಕೊಳ್ಳಬೇಕು. ತೀರ್ಪಿನ ಅನ್ವಯ ಶಿಕ್ಷಣ ಕೂಡಲು ಎಲ್ಲರು ಸಹಕಾರ ಕೊಡಬೇಕು. ಎಲ್ಲ ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ತರಗತಿ ಬಹಿಷ್ಕಾರ ಮಾಡದೇ, ಪರೀಕ್ಷೆಗೆ ಹಾಜರಾಗಬೇಕು ಎಂದು ಹೇಳಿದರು.

ಇದನ್ನೂ ಓದಿ:  Arif Mohammad Khan: ಇಸ್ಲಾಂ ನಮ್ಮ ಧರ್ಮ, ಕೃಷ್ಣಾರ್ಜುನ ನಮ್ಮ ಸಂಸ್ಕೃತಿ, ಮೈನಾರಿಟಿ-ಮೆಜಾರಿಟಿ ಪ್ರಯತ್ನದ ಬಗ್ಗೆ ಕೇರಳ ಗವರ್ನರ್ ಮಾತು

ಕೋರ್ಟ್ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು

ಈಗಾಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಟ್ಟು ನಿಟ್ಟಾಗಿ ಮಾಡಿದ್ದೇವೆ. ಯಾರಾದರೂ ಕಾನೂನು ಕೈಗೆತ್ತಿಕೊಂಡ್ರೆ ಗೃಹ ಇಲಾಖೆಯಿಂದ ತಕ್ಕ ಪಾಠ ಆಗಲಿದೆ ಎಂದು ಕಾನೂನು ಕದಡುವವರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದರು.
Published by:Mahmadrafik K
First published: