CM Ibrahim: ಕಾಂಗ್ರೆಸ್​ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ; ‘ಕೈ‘ ತೊರೆಯಲು ನಿರ್ಧರಿಸಿದ ಸಿಎಂ ಇಬ್ರಾಹಿಂ

ಕಾಂಗ್ರೆಸ್​​ನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ನಾಯಕರಿಗೆ ಅಧಿಕಾರ ಕೊಡ್ತಿಲ್ಲ ಎಂದು ಇಬ್ರಾಹಿಂ ಈ ಹಿಂದೆ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಚ್ಡಿಕೆ ಭೇಟಿ ಮಾಡಿ ಕುತೂಹಲ ಮೂಡಿಸಿದ್ದರು.

ಸಿಎಂ ಇಬ್ರಾಹಿಂ

ಸಿಎಂ ಇಬ್ರಾಹಿಂ

  • Share this:
ರಾಜ್ಯ ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕನ ಸ್ಥಾನ ಕೈ ತಪ್ಪಿದ ಹಿನ್ನೆಲೆ, ಕಾಂಗ್ರೆಸ್​ ಅಲ್ಪಸಂಖ್ಯಾತ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ(CM Ibrahim) ಕಾಂಗ್ರೆಸ್​ ತೊರೆಯಲು ನಿರ್ಧರಿಸಿದ್ದಾರೆ. ಇಬ್ರಾಹಿಂ ಪರಿಷತ್ ವಿಪಕ್ಷ ನಾಯಕ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಆ ಸ್ಥಾನವನ್ನು  ಬಿಕೆ ಹರಿಪ್ರಸಾದ್(BK Hariprasad) ಅವರಿಗೆ ನೀಡಿದ ಹಿನ್ನೆಲೆ, ಸಿ.ಎಂ.ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆ ಕೊಡಲು ನಿರ್ಧಾರ 

ಕಾಂಗ್ರೆಸ್ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ಕಾಂಗ್ರೆಸ್ ತೊರೆಯಲು ಸಿಎಂ ಇಬ್ರಾಹಿಂ ನಿರ್ಧರಿಸಿದ್ದಾರೆ. ಇಬ್ರಾಹಿಂ ಬೆಂಗಳೂರಿನಲ್ಲಿ ತಮ್ಮ ನಿಲುವು ಪ್ರಕಟಿಸಿದ್ದಾರೆ. ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರದಲ್ಲಿ ರಾಜೀನಾಮೆ ಕೊಡ್ತೇನೆ. ನಾನು ಜೆಡಿಎಸ್ ಸೇರುತ್ತೇನೊ? ಮಾಯಾವತಿ ಪಕ್ಷ ಸೇರುತ್ತೇನೊ ಗೊತ್ತಿಲ್ಲ. ದೇವೇಗೌಡರು ಪುಣ್ಯಾತ್ಮರು. ಡಿಕೆಶಿ ಜೊತೆಗೆ ಹೊಂದಾಣಿಕೆ ಆಗಲ್ಲ. ನಾನು ಕಾಂಗ್ರೆಸ್ ತೊರೆದಿರುವ ಪರಿಣಾಮ ಯುಪಿ ಚುನಾವಣೆಯ ಮೇಲೆ ಆಗುತ್ತದೆ. ಯುಪಿ ಚುನಾವಣೆ ಫಲಿತಾಂಶದ ಪರಿಣಾಮ ರಾಜ್ಯದ ಮೇಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ BK Hariprasad ನೇಮಕ

ತೀವ್ರ ಬೇಸರ ಹೊರಹಾಕಿದ ಸಿಎಂ ಇಬ್ರಾಹಿಂ

ನಿನ್ನೆ ರಾತ್ರಿಯಿಂದ ಸಾವಿರಾರು ಫೋನ್ ಬರುತ್ತಿವೆ, ಅವರಿಗೆಲ್ಲಾ ಉತ್ತರ ಕೊಡಲು ನನ್ನಿಂದ ಆಗುತ್ತಿಲ್ಲ. ಬಾದಾಮಿಯಲ್ಲಿ ಸಿದ್ದರಾಮಯ್ಯ ನಾಮಿನೇಶನ್ ಮಾಡುವಾಗ ನಾನಿದ್ದೆ. ಅದನ್ನು ಸಿದ್ದರಾಮಯ್ಯ ತೀರಿಸಿದ್ದಾರೆ. ಕಾಲಾಯ ತಸ್ಮೈನಮಃ. ನಾನು ಮತ್ತೆ ಜೋಳಿಗೆ ಹಾಕ್ತೇನೆ.  ಯುಪಿ ಚುನಾವಣೆ ಬಳಿಕ ರಾಜ್ಯದಲ್ಲಿಯೂ ಚುನಾವಣೆ ಆಗಬಹುದು ಅಥವಾ ರಾಷ್ಟ್ರಪತಿ ಆಳ್ವಿಕೆ ಬರಬಹುದು. ರಾಜಕೀಯದಲ್ಲಿ ಈವರೆಗೆ ನಾನು ಹೇಳಿದಂತೆತೇ ಆಗಿದೆ. ಅಲ್ಪಸಂಖ್ಯಾತ ಸಮುದಾಯ ಜನಸಂಖ್ಯೆಯಲ್ಲಿ ನಂಬರ್ 1 ಇದೆ. ದೇಶದ ವಿವಿಧ ಭಾಗಗಳಿಂದ ನಂಗೆ ದೂರವಾಣಿ ಕರೆಗಳು ಬರುತ್ತಿವೆ.

ಇದೇ ವೇಳೆ, ಯಾರೂ ಕೈ ಬಿಟ್ಟರೂ ನೀವು (ಮಾಧ್ಯಮ) ನನ್ನ ಕೈ ಬಿಡಬೇಡಿ ಎಂದು ಮಾಧ್ಯಮದವರಿಗೆ ಇಬ್ರಾಹಿಂ ಮನವಿ ಮಾಡಿದರು. ಜನರಿಗೆ ಈಗ ವಿಶ್ವಾಸ ಉಳಿದಿರುವುದು ಮಾಧ್ಯಮ ಹಾಗೂ ನ್ಯಾಯಾಂಗದ ಮೇಲೆ. ನಂಗೆ ಸಾಲವಿದೆ,  ನನ್ನ ಆಸ್ತಿ ಮಾರಿ ಸಾಲ ತೀರಿಸುತ್ತೇನೆ. ನಂಗೆ ಎಳೆಂಟು ಮಕ್ಕಳಿದ್ದಾರೆ ಎಂದರು.

ಜೆಡಿಎಸ್​ ಸೇರ್ತಾರಾ ಇಬ್ರಾಹಿಂ?

ಕಾಂಗ್ರೆಸ್​​ನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ನಾಯಕರಿಗೆ ಅಧಿಕಾರ ಕೊಡ್ತಿಲ್ಲ ಎಂದು ಇಬ್ರಾಹಿಂ ಈ ಹಿಂದೆ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಚ್ಡಿಕೆ ಭೇಟಿ ಮಾಡಿ ಕುತೂಹಲ ಮೂಡಿಸಿದ್ದರು. ಈಗ ರಾಜ್ಯ ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕನ ಸ್ಥಾನ ಕೈ ತಪ್ಪಿದ ಹಿನ್ನೆಲೆ, ಮತ್ತೆ ಕಾಂಗ್ರೆಸ್​ ಪಕ್ಷದಲ್ಲಿ ಅಸಮಾಧಾನ ಸ್ಪೋಟವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Twitterನಲ್ಲಿ ಬೆಂಗಳೂರು, ದೆಹಲಿಯ ಬಾಡಿಗೆ ಮನೆಗಳ ಕುರಿತು ನಡಿದಿದೆ ಭಾರಿ Debate!

ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಬಿಕೆ ಹರಿಪ್ರಸಾದ್ ಅವರನ್ನು ನೇಮಕ ಮಾಡುವ ಮೂಲಕ ಹೈಕಮಾಂಡ್ ಭಾರೀ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯ ಕಾಂಗ್ರೆಸ್ ‌ನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌ ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿರುವುದರಿಂದ ಇಬ್ಬರಿಗೂ ಮಣಿಯದೆ, ಇಬ್ಬರ ಜೊತೆಯೂ ಯಾವುದೇ ಮುಲಾಜು ಇಲ್ಲದೆ ಮಾತನಾಡುವ ಹಿರಿಯ ನಾಯಕ ಹರಿಪ್ರಸಾದ್ ಅವರಿಗೆ ಮಹತ್ವದ ಹುದ್ದೆ ನೀಡಿದೆ. ಇದಲ್ಲದೆ ಹರಿಪ್ರಸಾದ್ ಅವರನ್ನು ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲು ಇನ್ನೂ ಅನೇಕ ಕಾರಣಗಳಿವೆ.
Published by:Latha CG
First published: