JDS: ಡಿಸಿಎಂ ಆಗ್ತಾರಾ ಸಿಎಂ ಇಬ್ರಾಹಿಂ?

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

Nazma Nazeer: ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ್ರೆ ಸಿಎಂ ಇಬ್ರಾಹಿಂ ಡಿಸಿಎಂ  ಆಗುತ್ತಾರೆ ಎಂದ ನಜ್ಮಾ ನಜೀರ್

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರು: ಕಾಂಗ್ರೆಸ್ (Congress) ತೊರೆದು ಜೆಡಿಎಸ್ (JDS) ಸೇರ್ಪಡೆಯಾಗಿರುವ ಮಾಜಿ ಸಚಿವ ಸಿಎಂ ಇಬ್ರಾಹಿಂ (CM Ibrahim) ಡಿಸಿಎಂ ಆಗ್ತಾರಾ ಅನ್ನೋ ವಿಷಯ ಚರ್ಚೆಗೆ ಬಂದಿದೆ. ಸದ್ಯ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಸಿಎಂ ಇಬ್ರಾಹಿಂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಜೆಡಿಎಸ್ ವಕ್ತಾರೆ ನಜ್ಮಾ ನಜೀರ್ (Nazma Nazeer, JDS Spoke person), ಪಕ್ಷ ಅಧಿಕಾರಕ್ಕೆ ಬಂದ್ರೆ ಸಿಎಂ ಇಬ್ರಾಹಿಂ ಡಿಸಿಎಂ ಆಗ್ತಾರೆ ಎಂದು ಹೇಳಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ್ (Guu Patil, JDS Candidate) ಪರ ಚುನಾವಣಾ ಪ್ರಚಾರ ನಡೆಸಿದ ನಜ್ಮಾ ನಜೀರ್, ಸಿಎಂ ಇಬ್ರಾಹಿಂ ಡಿಸಿಎಂ ಅಭ್ಯರ್ಥಿ ಎಂದು ಹೇಳುವ ಮೂಲಕ ಮುಸ್ಲಿಂ ಮತಗಳನ್ನು ಸೆಳೆಯಲು ಪ್ರಯತ್ನಿಸಿದರು.


ಅತಿ ಹೆಚ್ಚು ಮುಸ್ಲಿಂ ಸಮುದಾಯದ ಜನರು ವಾಸವಾಗಿರುವ ಶಹಾಪುರನ ಆಸಾರ ಮೋಹಲ್ಲಾ ಓಣಿಯಲ್ಲಿ ನಜ್ಮಾ ನಜೀರ್ ಪ್ರಚಾರ ನಡೆಸಿದರು. ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ್ರೆ ಸಿಎಂ ಇಬ್ರಾಹಿಂ ಡಿಸಿಎಂ  ಆಗುತ್ತಾರೆ. ಗುಡಿಸಲು ಮುಕ್ತ ಕರ್ನಾಟಕ ಮಾಡಲು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದರು.


ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ್ ಅಣ್ಣನಿಗಾಗಿ ಮತ ಭಿಕ್ಷೆ ಕೇಳುತ್ತಿದ್ದೇನೆ. ಗುರು ಪಾಟೀಲ ಶಿರವಾಳ ಅವರನ್ನು ಗೆಲ್ಲಿಸಬೇಕೆಂದು ನಜ್ಮಾ ನಜೀರ್ ಮತದಾರರಲ್ಲಿ ಮನವಿ ಮಾಡಿಕೊಂಡರು.


ನಜ್ಮಾ ನಜೀರ್, ಜೆಡಿಎಸ್ ವಕ್ತಾರೆ


ಚುನಾವಣೆ ಗೆಲ್ಲಲು ಜೆಡಿಎಸ್ ರಣತಂತ್ರ


ಒಂದೆಡೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಪ್ರಚಾರ ನಡೆಸುತ್ತಿದ್ರೆ, ಮತ್ತೊಂದೆಡೆ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಪ್ರಚಾರದ ರೂಪುರೇಷೆ ತಯಾರು ಮಾಡಲಾಗಿದೆ.
ಇಂದು ಬೆಳಗ್ಗೆ 11.30ಕ್ಕೆ ಜೆಡಿಎಸ್ ಪ್ರಚಾರ ಸಮಿತಿ ಸಭೆ ಕರೆಯಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಚುನಾವಣಾ ಪ್ರಚಾರ, ಸಮಾವೇಶ, ರೋಡ್​ಶೋ, ಸ್ಟಾರ್ ಪ್ರಚಾರಕರು, ತಂಡಗಳ ರಚನೆ ಸಂಬಂಧ ಮಹತ್ವದ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Basavaraj Bommai: 'ಕಾಮನ್ ಮ್ಯಾನ್‌'ನಿಂದ 'ಸಿಎಂ' ಹುದ್ದೆಯವರೆಗೆ ಬಸವರಾಜ ಬೊಮ್ಮಾಯಿ ಹೆಜ್ಜೆಗುರುತು


ಸಭೆಯಲ್ಲಿ ಯಾರೆಲ್ಲಾ ಭಾಗಿ?


ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆಯುವ ಸಭೆಯಲ್ಲಿ ಸಮಿತಿ ಅಧ್ಯಕ್ಷ ಸಿ.ಎಂ.ಧನಂಜಯ, ಸಂಸದ ಪ್ರಜ್ವಲ್ ರೇವಣ್ಣ, ಯುವ ಘಟಕದ ನಿಖಿಲ್ ಕುಮಾರಸ್ವಾಮಿ, ಕುಪೇಂದ್ರ ರೆಡ್ಡಿ, ಭೋಜೆಗೌಡ ಶ್ರೀಕಂಠೇಗೌಡ , ಅಪ್ಪಾಜಿಗೌಡ, ಟಿ‌.ಎ.ಶರವಣ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

top videos
    First published: