ಚರ್ಚೆಗೆ ಇನ್ನೆರಡುದಿನ ಕಾಲಾವಕಾಶ ಕೇಳಿದ ಸಿಎಂ; ಎಚ್​ಡಿಕೆ ಮನವಿ ನಿರಾಕರಿಸಿದ ಸ್ಪೀಕರ್​​​

HDK Floor Test:  ಈಗಾಗಲೇ ಚರ್ಚೆ ನೆಪದಲ್ಲಿ ಸದನದ ವೇಳೆ ಹಾಳುಮಾಡುತ್ತಿದ್ದೇವೆ ಎಂಬ ಮಾತು ಕೇಳಿ ಬಂದಿದೆ. ಆ ಕಾರಣ  ಇಂದೇ ವಿಶ್ವಾಸ ನಿರ್ಣಯ ಮಂಡಿಸೋಣ ಎಂದು ಸ್ಪೀಕರ್​ ತಿಳಿಸಿದ್ದಾರೆ.

Seema.R | news18
Updated:July 22, 2019, 12:18 PM IST
ಚರ್ಚೆಗೆ ಇನ್ನೆರಡುದಿನ ಕಾಲಾವಕಾಶ ಕೇಳಿದ ಸಿಎಂ; ಎಚ್​ಡಿಕೆ ಮನವಿ ನಿರಾಕರಿಸಿದ ಸ್ಪೀಕರ್​​​
ಸಿಎಂ ಎಚ್​ಡಿಕೆ- ಸ್ಪೀಕರ್​ ರಮೇಶ್​ ಕುಮಾರ್​
  • News18
  • Last Updated: July 22, 2019, 12:18 PM IST
  • Share this:
ಬೆಂಗಳೂರು (ಜು.22): ವಿಶ್ವಾಸ ನಿರ್ಣಯದ ಮೇಲೆ ಈಗಾಗಲೇ 2 ದಿನಗಳ ಕಾಲ ಚರ್ಚೆ ನಡೆಸಿರುವ ಮೈತ್ರಿ ಸರ್ಕಾರಕ್ಕೆ ಈಗ ಮತ್ತೆರಡು ದಿನ ಕಾಲಾವಕಾಶ ನೀಡುವಂತೆ ಸ್ಪೀಕರ್​​ ರಮೇಶ್​​ ಕುಮಾರ್​​ಗೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಕಲಾಪಕ್ಕೆ ಹಾಜರಾಗುವ ಮುನ್ನ ಸ್ಪೀಕರ್​ ರಮೇಶ್​ ಕುಮಾರ್​​ ಕಚೇರಿಗೆ ಭೇಟಿ ನೀಡಿದ ಅವರು, ವಿಪ್​ ಸಂಬಂಧ  ಕಾಂಗ್ರೆಸ್​ ನಾಯಕರು ಸಲ್ಲಿಸಿರುವ  ಸುಪ್ರೀಂಕೋರ್ಟ್​ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ನಾಳೆಗೆ ಮುಂದೂಡಿದೆ.   ಈ ಹಿನ್ನೆಲೆಯಲ್ಲಿ ಈ ಕುರಿತು ಚರ್ಚೆ ನಡೆಸಿ ನಂತರ ವಿಶ್ವಾಸಮತ ಸಾಬೀತು ಮಾಡುತ್ತೇವೆ. ಹಾಗಾಗಿ ಇನ್ನೆರಡು ದಿನ ಸಮಯ ನೀಡಬೇಕು ಎಂದು ಕೋರಿದ್ದಾರೆ

ಇನ್ನು ಸಿಎಂ ಮನವಿಯನ್ನು ಸ್ಪೀಕರ್​ ರಮೇಶ್​ ಕುಮಾರ್​ ತಳ್ಳಿ ಹಾಕಿದ್ದು, ಈಗಾಗಲೇ ಚರ್ಚೆ ನೆಪದಲ್ಲಿ ಸದನದ ವೇಳೆ ಹಾಳುಮಾಡುತ್ತಿದ್ದೇವೆ ಎಂಬ ಮಾತು ಕೇಳಿ ಬಂದಿದೆ. ಆ ಕಾರಣ  ಇಂದೇ ವಿಶ್ವಾಸ ನಿರ್ಣಯ ಮಂಡಿಸೋಣ ಎಂದಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: HDK Trust Vote: ಮುಖ್ಯಮಂತ್ರಿಗಳ ವಿಶ್ವಾಸಭಂಗ ಮಾಡಲು ಬಿಜೆಪಿ ಸಜ್ಜು; ಸದನಕ್ಕೆ ಹೋಗುವ ಮುನ್ನ ಬಿಎಸ್​ವೈ ರಣತಂತ್ರ

ಈಗಾಗಲೇ ವಿಶ್ವಾಸಮತ ನಿರ್ಣಯ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಅಪಸ್ವರ ಎತ್ತಿದ್ದಾರೆ. ಇದನ್ನು ಸುಮ್ಮನೆ ಮುಂದೂಡಿದರೆ ನನ್ನ ವೃತ್ತಿ ಜೀವನಕ್ಕೆ ಇದು ಕಪ್ಪು ಚುಕ್ಕೆಯಾಗಲಿದೆ. ಇಂದೇ ಮುಗಿಸೋಣ ಎಂದು ಸಿಎಂ ಮಾತಿಗೆ ಸ್ಪೀಕರ್​ ಅಸಮಾಧಾನ ತೋರಿದ್ದಾರೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ಶಾಸಕರ ಕಡ್ಡಾಯ ಹಾಜರಾತಿ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ. ಹೀಗಾಗಿ ಕಾನೂನು ಗೊಂದಲ ಬಗೆಹರಿಸಲು ಅಡ್ವೋಕೇಟ್ ಜನರಲ್ ಸಲಹೆ ಪಡೆದಿದ್ದೇನೆ. ಇಂದೇ ವಿಶ್ವಾಸಮತ ಯಾಚನೆ ಮಾಡಲಾಗುವುದು ಎಂದರು.

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading