ನಾಳೆ ಸಿಎಂ ಮೈಸೂರು ಪ್ರವಾಸ; ದಸರಾ ಆಚರಣೆ ಕುರಿತು ಸಭೆ ನಡೆಸಲಿರುವ ಹೆಚ್​.ಡಿ. ಕುಮಾರಸ್ವಾಮಿ

news18
Updated:August 27, 2018, 9:41 PM IST
ನಾಳೆ ಸಿಎಂ ಮೈಸೂರು ಪ್ರವಾಸ; ದಸರಾ ಆಚರಣೆ ಕುರಿತು ಸಭೆ ನಡೆಸಲಿರುವ ಹೆಚ್​.ಡಿ. ಕುಮಾರಸ್ವಾಮಿ
news18
Updated: August 27, 2018, 9:41 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಆ. 27): ಕಳೆದೊಂದು ತಿಂಗಳಿಂದ ಮಳೆಪೀಡಿತ ಪ್ರದೇಶಗಳಿಗೆ ಭೇಟಿ, ವೈಮಾನಿಕ ಸಮೀಕ್ಷೆ, ಸಚಿವರೊಂದಿಗೆ ಸಭೆಗಳಲ್ಲಿ ಬ್ಯುಸಿಯಾಗಿದ್ದ ಸಿಎಂ ಕುಮಾರಸ್ವಾಮಿ ನಾಳೆ ಮೈಸೂರಿಗೆ ತೆರಳಲಿದ್ದಾರೆ.

ಮೈಸೂರಿನಲ್ಲಿ ವಿವಿಧ ಸಮಾರಂಭಗಳನ್ನು ಉದ್ಘಾಟಿಸಲಿರುವ  ಸಿಎಂ, ನಂತರ ಮೈಸೂರು ದಸರಾ ಆಚರಣೆ ಕುರಿತು ಸಭೆ ನಡೆಸಲಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ನಾಳೆ ಸಂಜೆ ಸಿಎಂ ಕುಮಾರಸ್ವಾಮಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದು, ನಾಡಿದ್ದು ರಾಮನಗರಕ್ಕೆ ತೆರಳಲಿದ್ದಾರೆ.

ಬುಧವಾರ ಬೆಳಗ್ಗೆ ರಾಮನಗರದಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಲಿರುವ ಸಿಎಂ ಕುಮಾರಸ್ವಾಮಿ, ಮಧ್ಯಾಹ್ನ ಕನಕಪುರದ ಹಾರೋಹಳ್ಳಿಗೆ ಭೇಟಿ  ನೀಡಲಿದ್ದಾರೆ. ನಂತರ ಹಾರೋಹಳ್ಳಿಯಿಂದ ದೊಡ್ಡ ಮರಳವಾಡಿಗೆ ಹೋಗಿ ಅಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ. ಬಳಿಕ  ಸಂಜೆ ಹಾರೋಹಳ್ಳಿಯ ಕನಕಪುರ ರಸ್ತೆ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ