ಸಾಮಾಜಿಕ ಜಾಲತಾಣದಲ್ಲಿ ಸಿಎಂ ಕುಮಾರಸ್ವಾಮಿಯ ನಕಲಿ ರಾಜೀನಾಮೆ ಪತ್ರ ವೈರಲ್​!

ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ತಮ್ಮ ಆಸನದ ಮುಂದೆ ನಕಲಿ ಪತ್ರವನ್ನು ಇಟ್ಟುಕೊಂಡು ಕುಳಿತಿದ್ದರು. ಇದು ನಕಲಿ ರಾಜೀನಾಮೆ ಪತ್ರ ಎಂಬುದಕ್ಕೆ ಕುಮಾರಸ್ವಾಮಿ ಅವರ ಸಹಿಯೇ ಸಾಕ್ಷಿಯಾಗಿದೆ.

HR Ramesh | news18
Updated:July 22, 2019, 9:20 PM IST
ಸಾಮಾಜಿಕ ಜಾಲತಾಣದಲ್ಲಿ ಸಿಎಂ ಕುಮಾರಸ್ವಾಮಿಯ ನಕಲಿ ರಾಜೀನಾಮೆ ಪತ್ರ ವೈರಲ್​!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸಿಎಂ ಕುಮಾರಸ್ವಾಮಿ ಅವರ ನಕಲಿ ರಾಜೀನಾಮೆ ಪತ್ರ.
  • News18
  • Last Updated: July 22, 2019, 9:20 PM IST
  • Share this:
ಬೆಂಗಳೂರು: ರಾಜ್ಯ ರಾಜಕಾರಣದ ಬಿಕ್ಕಟ್ಟು ಇಂದು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುವ ಮೂಲಕ ತೀವ್ರ ಕುತೂಹಲ ಕೆರಳಿಸಿದೆ. ಇಂದು ಬೆಳಗ್ಗೆ ಸದನ ಆರಂಭವಾದಾಗ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಗೆ ಎರಡು ದಿನ ಸಮಯಾವಕಾಶ ಕೇಳಿದರು. ಆದರೆ, ಇದನ್ನು ಒಪ್ಪದ ಸ್ಪೀಕರ್ ರಮೇಶ್​ ಕುಮಾರ್ ಅವರು ಇಂದು ಸಂಜೆ 6.30ರೊಳಗೆ ವಿಶ್ವಾಸ ಮತ ಯಾಚಿಸುವಂತೆ ಸಮಯ ನಿಗದಿ ಮಾಡಿದರು.

ಈ ವೇಳೆ ಮಧ್ಯಾಹ್ನದ ಊಟಕ್ಕೆ ತೆರಳಿದ ಸಿಎಂ ಕುಮಾರಸ್ವಾಮಿ ಅವರು ಇಂದು ಸಂಜೆ 6 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಅಲ್ಲದೇ, ಎಚ್​ಡಿಕೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಪಾಲರಿಗೆ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯಿತು. ರಾಜ್ಯ ಸರ್ಕಾರದ ಲಾಂಛನವನ್ನು ಹೊಂದಿರುವ ಈ ಪತ್ರದಲ್ಲಿ ಕುಮಾರಸ್ವಾಮಿ ಅವರ ಸಹಿ ಕೂಡ ಇತ್ತು. ವಿಶ್ವಾಸಮತ ಯಾಚನೆಯಲ್ಲಿ ವಿಫಲವಾಗುವುದನ್ನು ಅರಿತಿರುವ ಕುಮಾರಸ್ವಾಮಿ ಅವರು ಅದಕ್ಕೂ ಮುನ್ನವೇ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಇದೊಂದು ನಕಲಿ ರಾಜೀನಾಮೆ ಪತ್ರ ಎಂಬುದು ಆನಂತರ ತಿಳಿದುಬಂದಿತು.

ಇದನ್ನು ಓದಿ: ಸದನದಲ್ಲಿ ಪ್ರಾಮಾಣಿಕತೆ ಪಾಠ; ಹಳೆಯ ಆರೆಸ್ಸೆಸ್, ಕಾಂಗ್ರೆಸ್, ಕಮ್ಯೂನಿಸ್ಟರನ್ನು ನೆನೆದ ಸ್ಪೀಕರ್

ರಾತ್ರಿ 8.30ರಲ್ಲಿ ಮತ್ತೆ ಕಲಾಪ ಆರಂಭವಾದಾಗ ಕಾಂಗ್ರೆಸ್​, ಜೆಡಿಎಸ್​ ಸದಸ್ಯರೇ ಸದನದ ಬಾವಿಗೆ ಇಳಿದು ಬೇಕೇ ಬೇಕು ನ್ಯಾಯ ಬೇಕು, ಪ್ರಜಾಪ್ರಭುತ್ವ ಉಳಿಸಿ ಎಂದು ಘೋಷಣೆ ಕೂಗಲು ಆರಂಭಿಸಿದರು. ಪ್ರತಿಭಟನೆ ನಿಲ್ಲಿಸುವಂತೆ ಸ್ಪೀಕರ್​ ಹಾಗೂ ಸಿಎಂ ಎಚ್​ಡಿಕೆ ಎಷ್ಟೇ ಮನವಿ ಮಾಡಿದರೂ ಸದಸ್ಯರು ತಮ್ಮ ಸ್ಥಳಗಳಿಗೆ ಹೋಗಲಿಲ್ಲ. ಆನಂತರ ಸಿದ್ದರಾಮಯ್ಯ ಅವರು ಎಲ್ಲ ಸದಸ್ಯರನ್ನು ತಮ್ಮ ತಮ್ಮ ಸ್ಥಳಗಳಿಗೆ ಕಳುಹಿಸಿದರು.

ಈ ವೇಳೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ತಮ್ಮ ಆಸನದ ಮುಂದೆ ನಕಲಿ ಪತ್ರವನ್ನು ಇಟ್ಟುಕೊಂಡು ಕುಳಿತಿದ್ದರು. ಇದು ನಕಲಿ ರಾಜೀನಾಮೆ ಪತ್ರ ಎಂಬುದಕ್ಕೆ ಕುಮಾರಸ್ವಾಮಿ ಅವರ ಸಹಿಯೇ ಸಾಕ್ಷಿಯಾಗಿದೆ.

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading