ಅದೃಷ್ಟದ ರೇಂಜ್​ ರೋವರ್ ಕಾರನ್ನು​ ರಿಪೇರಿಗೆ ಬಿಟ್ಟ ಎಚ್​ಡಿಕೆ; ಭಾರತಕ್ಕೆ ಬಂದ ಮೊದಲ ಲೆಕ್ಸೆಸ್ ದುಬಾರಿ​ ಕಾರಿ​ನಲ್ಲಿ ಸಿಎಂ ಓಡಾಟ!

ನಿಖಿಲ್​ ನಾಮಪತ್ರ ಸಲ್ಲಿಕೆ ವೇಳೆ ಸಿಎಂಗೆ ಈ ಕಾರು ಕೈ ಕೊಟ್ಟಿರುವುದು ಅವರಲ್ಲಿ ಭಯ ಮೂಡಿಸಿದೆಯಾ ಎಂಬ ಅನುಮಾನ ಕೂಡ ಮೂಡಿದೆ. ಮುಂದೆ ಸಿಎಂ ಎಚ್​ಡಿಕೆ ಅವರು ರೇಂಜ್​ ರೋವರ್​ ಕಾರು ದುರಸ್ತಿಯಾದ ಬಳಿಕ ಅದೇ ಕಾರನ್ನು ಬಳಸಲಿದ್ದಾರಾ ಅಥವಾ ಲೆಕ್ಸಸ್​ ಕಾರಿನಲ್ಲೇ ಓಡಾಡಲಿದ್ದಾರಾ ಎಂಬುದನ್ನು ಕಾದುನೋಡಬೇಕು.

Seema.R | news18
Updated:April 17, 2019, 1:29 PM IST
ಅದೃಷ್ಟದ ರೇಂಜ್​ ರೋವರ್ ಕಾರನ್ನು​ ರಿಪೇರಿಗೆ ಬಿಟ್ಟ ಎಚ್​ಡಿಕೆ; ಭಾರತಕ್ಕೆ ಬಂದ ಮೊದಲ ಲೆಕ್ಸೆಸ್ ದುಬಾರಿ​ ಕಾರಿ​ನಲ್ಲಿ ಸಿಎಂ ಓಡಾಟ!
ಲೆಕ್ಸೆಸ್​ ಕಾರಿನ ಸಾಂದರ್ಭಿಕ ಚಿತ್ರ
Seema.R | news18
Updated: April 17, 2019, 1:29 PM IST
ಬೆಂಗಳೂರು (ಏ.17): ದೇವೇಗೌಡರ ಕುಟುಂಬ ದೇವರು, ನಂಬಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ವಸ್ತುಗಳ ಬಳಕೆಯಲ್ಲೂ ಆ ಕುಟುಂಬ ಸದಸ್ಯರು ವಾಸ್ತು ನೋಡುತ್ತಾರೆ ಎಂಬುದು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿದ ರಹಸ್ಯವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ದಿನದಿಂದಲೂ ಈವರೆಗೂ ಸರ್ಕಾರಿ ಕಾರು ಬಳಸದೆ ತಮ್ಮ ರೇಂಜ್​ ರೋವರ್​ ಕಾರಿನಲ್ಲಿಯೇ ಓಡಾಟ ನಡೆಸಿದ್ದರು. ಈ ಕಾರು ಅವರಿಗೆ ಅದೃಷ್ಟದ ಸಂಕೇತ ಎಂದು ನಂಬಿದ್ದರು ಕೂಡ.

ಸಿಎಂಗೆ ಅದೃಷ್ಟ ನೀಡಿದ ಈ ರೇಜ್​ ರೋವರ್​ ಕಾರು ಮಂಡ್ಯ ಪ್ರಚಾರದ ವೇಳೆ ಕೈ ಕೊಟ್ಟಿತು. ನಿಖಿಲ್​ ನಾಮಪತ್ರ ಸಲ್ಲಿಕೆ ವೇಳೆ ಇವರ ಈ ಕಾರು ಮೊದಲ ಬಾರಿ ಕೆಟ್ಟಿತು. ಇದಾದ ಬಳಿಕ ಮತ್ತೊಮ್ಮೆ ಪ್ರಚಾರದಲ್ಲಿ ಕೂಡ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಹೀಗಾಗಿ ಕಾರನ್ನು ಈಗ ರಿಪೇರಿಗೆ ಬಿಡಲಾಗಿದೆ. ಸದ್ಯ ಕುಮಾರಸ್ವಾಮಿ ಅವರು ಸರ್ಕಾರಿ ಕಾರು ಬಳಸದೆ ಮತ್ತೆ ದುಬಾರಿ ಕಾರಿಗೆ ಮೊರೆ ಹೋಗಿದ್ದಾರೆ.

ಜೆಡಿಎಸ್​ ವಿಧಾನ ಪರಿಷತ್​ ಸದಸ್ಯರಾಗಿರುವ ಬಿ.ಎಂ. ಫಾರೂಕ್​ ಬಳಿಯಿರುವ ಜಪಾನ್​ ಮೂಲದ ಅತಿ ದುಬಾರಿ ಕಾರದ ಲೆಕ್ಸೆಸ್​ ಕಾರು ಬಳಕೆಗೆ ಮುಂದಾಗಿದ್ದಾರೆ. 2.30ಕೋಟಿ ಮೌಲ್ಯದ ಈ ಕಾರು ಭಾರತದ ಮಾರುಕಟ್ಟೆಯಲ್ಲಿ ಇನ್ನು ದುಬಾರಿ ಇರಲಿದೆ.

ಇದನ್ನು ಓದಿ: ಪ್ರಚಾರದ ವೇಳೆ ಎರಡುಬಾರಿ ಕೈ ಕೊಟ್ಟ ಸಿಎಂ ಅದೃಷ್ಟದ ಕಾರು; ಎಚ್​ಡಿಕೆಗೆ ಶುರುವಾಯ್ತೆ ಸೋಲಿನ ಭಯ?

ಜಪಾನ್​ನಿಂದ ಇಂಡಿಯಾಕ್ಕೆ ಬಂದ ಮೊದಲ ಲೆಕ್ಸಸ್​ ಕಾರು ಇದಾಗಿದ್ದು, KA03 NB 5555  ಸಂಖ್ಯೆಯಲ್ಲಿ ನೋಂದಾಯಿಸಲಾಗಿದೆ. ಸದ್ಯ ಇದೇ ಕಾರಿನಲ್ಲಿ ಸಿಎಂ ಕುಮಾರಸ್ವಾಮಿ 3 ದಿನಗಳಿಂದ ಓಡಾಡುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಕೊಂಡ ಈ ಬಿಳಿ ಬಣ್ಣದ ಕಾರನ್ನು ಎಂಎಲ್ಸಿ ಫಾರೂಕ್​ ಈಗ ಸಿಎಂಗೆ ನೀಡಿದ್ದಾರೆ. ಸಿಎಂ ಅವರ ಪ್ರೀತಿ ಪಾತ್ರದ ಬ್ಲಾಕ್​ ರೇಂಜ್​ ರೋವರ್​ ಕಾರು ಸಿದ್ದವಾಗುವವರೆಗೂ ಈ ಕಾರೇ ಸಿಎಂ ಅಧಿಕೃತ ವಾಹನವಾಗಿರಲಿದೆ.

ಸಿಎಂ ಈ ಹಿಂದೆ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಕಾರು ಬಿಟ್ಟು ಮಗನ ರೇಂಜ್​ ರೋವರ್​ ಕಾರು ಬಳಸಿದ್ದರು. ಈ ಕಾರಿನಿಂದ ತಮಗೆ ಸಿಎಂ ಆಗುವ ಅವಕಾಶ ಸಿಕ್ಕಿತು ಎಂಬುದು ಅವರ ನಂಬಿಕೆ. ಈ ಹಿನ್ನೆಲೆಯಲ್ಲಿ ಅವರು ಇದೇ ಕಾರನ್ನು ತಮ್ಮ ಅಧಿಕೃತ ವಾಹನವಾಗಿ ಬಳಸಿಕೊಂಡರು. ಈಗ ನಿಖಿಲ್​ ನಾಮಪತ್ರ ಸಲ್ಲಿಕೆ ವೇಳೆ ಸಿಎಂಗೆ ಈ ಕಾರು ಕೈ ಕೊಟ್ಟಿರುವುದು ಅವರಲ್ಲಿ ಭಯ ಮೂಡಿಸಿದೆಯಾ ಎಂಬ ಅನುಮಾನ ಕೂಡ ಮೂಡಿದೆ. ಮುಂದೆ ಸಿಎಂ ಎಚ್​ಡಿಕೆ ಅವರು ರೇಂಜ್​ ರೋವರ್​ ಕಾರು ದುರಸ್ತಿಯಾದ ಬಳಿಕ ಅದೇ ಕಾರನ್ನು ಬಳಸಲಿದ್ದಾರಾ ಅಥವಾ ಲೆಕ್ಸಸ್​ ಕಾರಿನಲ್ಲೇ ಓಡಾಡಲಿದ್ದಾರಾ ಎಂಬುದನ್ನು ಕಾದುನೋಡಬೇಕು.
Loading...

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626