ಸದನಕ್ಕೆ ಬಾರದ ಸಿಎಂ; ಹೊಸ ಯೋಜನೆ ರೂಪಿಸುತ್ತಿದೆಯಾ ಮೈತ್ರಿ ಸರ್ಕಾರ?

ಇಂದು ಕೂಡ ಕಲಾಪ ಆರಂಭವಾದರೂ ಸಿಎಂ ಮಾತ್ರ ಇನ್ನು ತಾಜ್​ ವೆಸ್ಟೆಂಡ್​, ಪದ್ಮನಾಭನಗರದಲ್ಲಿ ಸುತ್ತಾಡುವ ಮೂಲಕ ಸಮಯ ವ್ಯರ್ಥ ಮಾಡಲು ಉದ್ದೇಶಿಸಿದ್ದಾರೆ. ಇದಕ್ಕೆ ಕಾರಣ ದೇವೇಗೌಡರು ಹೆಣೆದಿರುವ ಹೊಸದೊಂದು ಲೆಕ್ಕಾಚಾರ.

Seema.R | news18
Updated:July 23, 2019, 12:03 PM IST
ಸದನಕ್ಕೆ ಬಾರದ ಸಿಎಂ; ಹೊಸ ಯೋಜನೆ ರೂಪಿಸುತ್ತಿದೆಯಾ ಮೈತ್ರಿ ಸರ್ಕಾರ?
ಸಿಎಂ ಕುಮಾರಸ್ವಾಮಿ
  • News18
  • Last Updated: July 23, 2019, 12:03 PM IST
  • Share this:
ಬೆಂಗಳೂರು(ಜು. 23): ವಿಶ್ವಾಸಮತ ನಿರ್ಣಯಕ್ಕೆ ಮೈತ್ರಿ ಸರ್ಕಾರ ಮುಹೂರ್ತ ನಿಗದಿ ಮಾಡಿ ಐದು ದಿನ ಕಳೆದರೂ ಸಿಎಂ ಕುಮಾರಸ್ವಾಮಿ ಮಾತ್ರ ಬಹುಮತ ಸಾಬೀತಿಗೆ ಮಾತ್ರ ಮುಂದಾಗುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಈ ಹಗ್ಗಜಗ್ಗಾಟ ಇಂದು ಕೂಡ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಇಂದು ಸದನಕ್ಕೆ ಸಿಎಂ ಕುಮಾರಸ್ವಾಮಿ ಗೈರಾಗುವ ಮೂಲಕ ರಾಜ್ಯ ರಾಜಕೀಯ ಬಿಕ್ಕಟ್ಟನ್ನು ಅಂತಿಮಗೊಳ್ಳುವ ಯಾವ ಭರವಸೆಗಳು ಕಂಡುಬರುತ್ತಿಲ್ಲ

ಸದನಕ್ಕೆ ಬಾರದ ಸಿಎಂ ಕುಮಾರಸ್ವಾಮಿ

ಕಳೆದ ಗುರುವಾರ ಸದನದಲ್ಲಿ  ಸಿಎಂ ಕುಮಾರಸ್ವಾಮಿ ಖುದ್ದಾಗಿ ವಿಶ್ವಾಸ ನಿರ್ಣಯ ಮಂಡಿಸಿದರೂ ಬಹುಮತ ಸಾಬೀತು ಮಾಡಲು ತಯಾರಾಗಿಲ್ಲ. ಇದೇ ಉದ್ದೇಶದಿಂದ ಮೈತ್ರಿ ಸರ್ಕಾರದ ನಾಯಕರು ಚರ್ಚೆಯಲ್ಲಿಯೇ ಕಲಾಪವನ್ನು ದಿನದಿಂದ ದಿನಕ್ಕೆ ಮುಂದೂಡುತ್ತಿದ್ದಾರೆ. ಇದೆಲ್ಲವನ್ನೂ ನೋಡಿದರೆ ಸಿಎಂ ಕುಮಾರಸ್ವಾಮಿ ಲೆಕ್ಕಾಚಾರ ಬೇರೆ ಇದೆ ಎಂಬ ಮಾತು ಕೇಳಿ ಬಂದಿದೆ.

ಸೋಮವಾರ ಇನ್ನೇನು ಸಿಎಂ ರಾಜೀನಾಮೆ ನೀಡುತ್ತಾರೆ ಎಂಬ ಬಿಜೆಪಿ ಲೆಕ್ಕಾಚಾರವನ್ನು ಕುಮಾರಸ್ವಾಮಿ ತಲೆಕೆಳಗು ಮಾಡಿದರು. ವಿಪ್​ ಹಾಗೂ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿಯನ್ನು ಮಂಗಳವಾರಕ್ಕೆ ಸುಪ್ರೀಂ ಕೋರ್ಟ್​ ಮಂಗಳವಾರಕ್ಕೆ ಮುಂದೂಡಿತು. ಇದನ್ನು ಕಾರಣವಾಗಿಟ್ಟುಕೊಂಡ ಸಿಎಂ ಸ್ಪೀಕರ್​ ಬಳಿ ಇನ್ನೆರಡು ದಿನಕ್ಕೆ ಚರ್ಚೆಗೆ ಅವಕಾಶ ಕೇಳಿದರು. ಆದರೆ ಸ್ಪೀಕರ್​ ಇದೇ ರೀತಿ ಕಲಾಪವನ್ನು ಮುಂದೂಡಿದರೆ, ನನಗೆ ಕಪ್ಪು ಚುಕ್ಕೆಯಾಗಲಿದೆ ಎಂದು ಸಿಎಂ ಮನವಿಯನ್ನು ತಳ್ಳಿ ಹಾಕಿದ್ದಾರೆ.

ಮಧ್ಯಾಹ್ನದ ಸದನಕ್ಕೆ ಗೈರಾಗುವ ಮೂಲಕ ಅನಿವಾರ್ಯವಾಗಿ ಸ್ಪೀಕರ್​ ರಮೇಶ್​ ಕುಮಾರ್​​ ಅನಿವಾರ್ಯವಾಗಿ ಸದನವನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ.

ಇಂದು ಕೂಡ ಕಲಾಪ ಆರಂಭವಾದರೂ ಸಿಎಂ ಮಾತ್ರ ಇನ್ನು ತಾಜ್​ ವೆಸ್ಟೆಂಡ್​, ಪದ್ಮನಾಭನಗರದಲ್ಲಿ ಸುತ್ತಾಡುವ ಮೂಲಕ ಸಮಯ ವ್ಯರ್ಥ ಮಾಡಲು ಉದ್ದೇಶಿಸಿದ್ದಾರೆ. ಇದಕ್ಕೆ ಕಾರಣ ದೇವೇಗೌಡರು ಹೆಣೆದಿರುವ ಹೊಸದೊಂದು ಲೆಕ್ಕಾಚಾರ.ಏನದು ಹೊಸ ಲೆಕ್ಕಾಚಾರ?

ಮೈತ್ರಿ ಪಕ್ಷದ ಸಂಖ್ಯಾಬಲ ಕುಗ್ಗಿದ್ದು, ಇತ್ತ ಅತೃಪ್ತರು ಪಟ್ಟು ಸಡಿಲಿಸುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಜೊತೆಗೆ ಸುಪ್ರೀಂ ಕೋರ್ಟ್​ ತೀರ್ಪು ವಿಳಂಬ ಆಗುತ್ತಿರುವುದು ಸಿಎಂ ಕುಮಾರಸ್ವಾಮಿಗೆ ದಿಕ್ಕುತೋಚದಂತೆ ಆಗಿದೆ.

ಇದನ್ನು ಓದಿ: ಸ್ಪೀಕರ್ ಆದೇಶ ಉಲ್ಲಂಘಿಸಿದ ರೆಬೆಲ್ಸ್; ವಿಚಾರಣೆಗೆ ಹಾಜರಾಗಲು ಒಂದು ತಿಂಗಳ ಕಾಲಾವಕಾಶ ಕೋರಿಕೆ; ಮುಂದೇನಾಗಬಹುದು?

ಈ ಸಮಯದಲ್ಲಿ ಸಿಎಂ ಬಹುಮತ ಸಾಬೀತಿಗೆ ಮುಂದಾದರೆ  ರಾಜೀನಾಮೆ ನೀಡಬೇಕಾಗುತ್ತದೆ. ಇದರ ಬದಲು ಹೀಗೆ ಕಲಾಪಕ್ಕೆ ಗೈರು ಆಗುವ ಹಾಗೂ ಚರ್ಚೆಯಲ್ಲಿ ಸದನವನ್ನು ಮುಂದೂಡಿದರೆ, ಬಿಜೆಪಿ ನಾಯಕರು, ಮೈತ್ರಿ ಸರ್ಕಾರ ಕಲಾಪ ವ್ಯರ್ಥ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಬಹುದು. ಆಗ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ  ಸರ್ಕಾರ ವಜಾಕ್ಕೆ ಆದೇಶ ನೀಡಬಹುದು. ಇದರಿಂದ ತಾವು ಬಹುಮತ ಸಾಬೀತು ಮಾಡಲು ಮುಂದಿದ್ದರೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸರ್ಕಾರವನ್ನೇ ಕಿತ್ತುಹಾಕಿತು ಎಂದು ಆರೋಪಿಸಬಹುದು. ಆ ಮೂಲಕ ಸಾರ್ವಜನಿಕರಿಂದ ಅನುಕಂಪ ಗಿಟ್ಟಿಸಬಹುದು ಎಂಬ ಲೆಕ್ಕಾಚಾರ ದೇವೇಗೌಡರಿಗೆ ಇದೆ ಎನ್ನಲಾಗಿದೆ.

First published:July 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ