ಪಕ್ಷದ ಮೇಲೆ ಮಧು ಬಂಗಾರಪ್ಪ ಮುನಿಸು ; ಓಲೈಕೆಗೆ ಮುಂದಾದ ದೇವೇಗೌಡರು

ಶಿವಮೊಗ್ಗದಲ್ಲಿ ನಾನು ಸೋತಿದ್ದರೂ ಯಡಿಯೂರಪ್ಪನವರಿಗೆ ಫೈಟ್  ಕೊಟ್ಟಿದ್ದೇನೆ. ಸಂಸದೀಯ ಕಾರ್ಯದರ್ಶಿ ಅಥವಾ ರಾಜಕೀಯ ಕಾರ್ಯದರ್ಶಿ ಯಾವ ಆಕಾಂಕ್ಷಿಯೂ ನಾನಲ್ಲ. ಕುಮಾರಣ್ಣನವರು ಎರಡು ದೊಡ್ಡ ಸಂಸಾರ ನಡೆಸುತ್ತಿದ್ದಾರೆ. ಸರ್ಕಾರ ಒಂದು ಸಂಸಾರವಾದರೆ, ಪಕ್ಷ ಮತ್ತೊಂದು ಸಂಸಾರವಾಗಿದೆ. ಇವೆರಡ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ

G Hareeshkumar | news18
Updated:January 12, 2019, 4:31 PM IST
ಪಕ್ಷದ ಮೇಲೆ ಮಧು ಬಂಗಾರಪ್ಪ ಮುನಿಸು ; ಓಲೈಕೆಗೆ ಮುಂದಾದ ದೇವೇಗೌಡರು
ಎಚ್. ಡಿ ದೇವೇಗೌಡ, ಎಚ್. ಡಿ ಕುಮಾರಸ್ವಾಮಿ, ಮಧು ಬಂಗಾರಪ್ಪ
G Hareeshkumar | news18
Updated: January 12, 2019, 4:31 PM IST
-ಜನಾರ್ದನ ಹೆಬ್ಬಾರ್

ಬೆಂಗಳೂರು ( ಜ.12) :  ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಶಿವಮೊಗ್ಗ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಈಗ ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದಾರೆಂದು ಹೇಳಲಾಗಿದ್ದು, ಅವರ ಮನವೊಲಿಕೆಗೆ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮುಂದಾಗಿದ್ದಾರೆ.

ಲೋಕಸಭಾ ಉಪ ಚುನಾವಣೆಯ ಸೋಲಿನ ಬಳಿಕ ಪಕ್ಷದ ವರಿಷ್ಠರು ನೀಡಿರುವ ಕೆಲ ಹೇಳಿಕೆಗಳಿಂದ ಮಧು ಬಂಗಾರಪ್ಪ ಅಸಮಾಧಾನಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಸಿಎಂ ಕುಮಾರಸ್ವಾಮಿ ಭೇಟಿಯಾದ ಮಾಜಿ ಶಾಸಕ ಮಧು ಬಂಗಾರಪ್ಪ

ಹೀಗಾಗಿ ಮಧು ಬಂಗಾರಪ್ಪ ಅವರ ಮನವೊಲಿಕೆಗೆ ದೇವೇಗೌಡರು ಮುಂದಾಗಿದ್ದು, ಇನ್ನೆರಡು ದಿನಗಳ ಒಳಗಾಗಿ ಮಧು ಬಂಗಾರಪ್ಪ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೆ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

'ದೇವೇಗೌಡ್ರು ನನಗೆ ಪತ್ರ ಬರೆಯುವಷ್ಟು ನಾನು ದೊಡ್ಡ ಮನುಷ್ಯ ಅಲ್ಲ'

ಎರಡು ಬಾರಿ ಸೊರಬದಲ್ಲಿ ಹಾಗೂ ಉಪ ಚುನಾವಣೆಯಲ್ಲಿ ಸೋತಿದ್ದೇನೆ. ಸಮ್ಮಿಶ್ರ ಸರ್ಕಾರದ ತೀರ್ಮಾನದಂತೆ ಸ್ಪರ್ಧೆ ಮಾಡಿದ್ದೆ, ಇಲ್ಲಿದಿದ್ದರೆ ತಪ್ಪಾಗುತ್ತಿತ್ತು. ಜೆಡಿಎಲ್ ಪಿ ಸಭೆಗೆ ನನ್ನನ್ನು ಹಿಂದೆ ಕರೆದಿದ್ದರು. ಮೊನ್ನೆ ನಾನು ಇರಲಿಲ್ಲ ಹಾಗಾಗಿ ಸಭೆಗೆ ಹೋಗಿಲ್ಲ. ನನಗೆ ಯಾರ ಮೇಲೂ ಸಿಟ್ಟಿಲ್ಲ. ಜವಾಬ್ದಾರಿ ಕೊಡುವುದನ್ನ ಅವರು ತೀರ್ಮಾನ ಮಾಡುತ್ತಾರೆ. ಸಣ್ಣಪುಟ್ಟ ಸಮಸ್ಯೆ ಇದ್ದರೆ, ವರಿಷ್ಠರ ಬಳಿ ಬಗೆಹರಿಸಿಕೊಳ್ಳುತ್ತೇವೆ ಹೊರತು, ನನಗೆ ಯಾವುದೇ ಅಸಮಾಧಾನ ಇಲ್ಲ ಎಂದಿದ್ದಾರೆ.
Loading...

ಎಂಎಲ್ ಸಿ ಸ್ಥಾನ ಬೇಡ ಎಂದು ಹಿಂದಿನ ಬಾಗಿಲಿನಿಂದ ಹೋಗಿಲ್ಲ. ಪಕ್ಷದಲ್ಲಿ ಮುಂಚೂಣಿಯಲ್ಲಿರೋದಕ್ಕೆ ಬಯಸುತ್ತೇನೆ ಯಾವುದೇ ಜವಾಬ್ದಾರಿ ಕೊಟ್ಟರೂ ತೆಗೆದುಕೊಳ್ಳುತ್ತೇನೆ ಸೋತಾಗಲೂ ನನ್ನನ್ನ ಪಕ್ಷದ ಮುಂಚೂಣಿಗೆ ತೆಗೆದುಕೊಂಡು ಬಂದಿದ್ದಾರೆ

ದೇವೇಗೌಡರ ತೀರ್ಮಾನಕ್ಕೆ ಬದ್ಧ - ಮಧು ಬಂಗಾರಪ್ಪ

ಮುಂಬರುವ ಲೋಕಸಭೆಯ ಸ್ಪರ್ಧೆ ಮಾಡುವ ಬಗ್ಗೆ  ವರಿಷ್ಠರು ತೀರ್ಮಾನ ಮಾಡುತ್ತಾರೆ. ದೇವೇಗೌಡರ ತೀರ್ಮಾನಕ್ಕೆ ನಾನು ಬದ್ಧವಾಗಿದ್ದು, ಶಿವಮೊಗ್ಗದಲ್ಲಿ ನಾನು ಸೋತಿದ್ದರೂ ಯಡಿಯೂರಪ್ಪನವರಿಗೆ ಫೈಟ್  ಕೊಟ್ಟಿದ್ದೇನೆ. ಸಂಸದೀಯ ಕಾರ್ಯದರ್ಶಿ ಅಥವಾ ರಾಜಕೀಯ ಕಾರ್ಯದರ್ಶಿ ಯಾವ ಆಕಾಂಕ್ಷಿಯೂ ನಾನಲ್ಲ. ಕುಮಾರಣ್ಣನವರು ಎರಡು ದೊಡ್ಡ ಸಂಸಾರ ನಡೆಸುತ್ತಿದ್ದಾರೆ. ಸರ್ಕಾರ ಒಂದು ಸಂಸಾರವಾದರೆ, ಪಕ್ಷ ಮತ್ತೊಂದು ಸಂಸಾರವಾಗಿದೆ. ಇವೆರಡ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ; ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

 
First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ