'ನಿಖಿಲ್​ ಎಲ್ಲಿದ್ದೀಯಪ್ಪ' ಎಂದರೆ 'ನಮ್ಮ ಹೃದಯದಲ್ಲಿ ಅನ್ನಿ' ಎಂದು ಯುವಕರಿಗೆ ಹೇಳಿಕೊಟ್ಟ ಸಿಎಂ ಎಚ್.ಡಿ.ಕುಮಾರಸ್ವಾಮಿ

ಕೆ.ಆರ್​ನಗರದ ನಾರಾಯಣಪುರ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಯಾರಾದರೂ ನಿಖಿಲ್​ ಎಲ್ಲಿದ್ಯಾಪ್ಪ ಎಂದರೆ, ನಮ್ಮ ಹೃದಯದಲ್ಲಿದ್ದಾನೆ ಎಂದು ಹೇಳಬೇಕು ಎಂದು ನೀತಿ ಪಾಠ ಹೇಳಿಕೊಟ್ಟರು.

Seema.R | news18
Updated:April 14, 2019, 3:48 PM IST
'ನಿಖಿಲ್​ ಎಲ್ಲಿದ್ದೀಯಪ್ಪ' ಎಂದರೆ 'ನಮ್ಮ ಹೃದಯದಲ್ಲಿ ಅನ್ನಿ' ಎಂದು ಯುವಕರಿಗೆ ಹೇಳಿಕೊಟ್ಟ ಸಿಎಂ ಎಚ್.ಡಿ.ಕುಮಾರಸ್ವಾಮಿ
ನಿಖಿಲ್​ ಕುಮಾರಸ್ವಾಮಿ - ಕುಮಾರಸ್ವಾಮಿ
Seema.R | news18
Updated: April 14, 2019, 3:48 PM IST
ಮಂಡ್ಯ (ಏ.14): ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಟ್ರೆಂಡ್​ ಸೃಷ್ಟಿಸಿದ್ದು 'ನಿಖಿಲ್​ ಎಲ್ಲಿದೀಯಪ್ಪಾ?' ಡೈಲಾಗ್​. ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್​ ಸೃಷ್ಟಿಸಿದ ಈ ಡೈಲಾಗ್​ ಹಿಡಿದು ಮಂಡ್ಯ ಅಭ್ಯರ್ಥಿ ಟ್ರೋಲ್​ಗೆ ಒಳಗಾಗಿದ್ದರು. ಈ ಕುರಿತು ಮೊದಲ ಬಾರಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ, ನಿಖಿಲ್​ ಎಲ್ಲಿದೀಯಪ್ಪ ಎಂದು ಯಾರಾದ್ರೂ ಕೇಳಿದ್ರೆ ಈ ರೀತಿ ಉತ್ತರ ಕೊಡಿ ಎಂದು ಜನರಿಗೆ ತಿಳಿಸಿದ್ದಾರೆ.

ಕೆ.ಆರ್​ನಗರದ ನಾರಾಯಣಪುರ ಗ್ರಾಮದಲ್ಲಿ ಪ್ರಚಾರ ನಡೆಸಿದ ಅವರು, ಯಾರಾದರೂ 'ನಿಖಿಲ್​ ಎಲ್ಲಿದ್ದಿಯಪ್ಪ ಎಂದರೆ, ನಮ್ಮ ಹೃದಯದಲ್ಲಿದ್ದಾನೆ' ಎಂದು ಹೇಳಬೇಕು ಎಂದು  ಪಾಠ ಹೇಳಿಕೊಟ್ಟರು. ಗ್ರಾಮಕ್ಕೆ ಸಿಎಂ ತೆರಳಿದ ವೇಳೆ 'ನಿಖಿಲ್ ಎಲ್ಲಿದೀಯಪ್ಪಾ' ಎಂದು ಬಹಳ ಚರ್ಚೆಯಾಗ್ತಿದೆ ಈ ಬಗ್ಗೆ ಮಾತನಾಡಿ ಎಂದು ಊರಿನ ಯುವಕರು ಸಿಎಂಗೆ ಆಗ್ರಹಿಸಿದಾಗ ಅವರು ಹೀಗೆ ಹೇಳಿದರು.

'ನಿಖಿಲ್​ ಎಲ್ಲಿದ್ಯಾಪ್ಪ' ಎನ್ನುವ  ಡೈಲಾಗ್​​  ಇಟ್ಟುಕೊಂಡು ಕೆಲ ಕಿಡಿಗೇಡಿಗಳು ಟ್ರೋಲ್​ ಮಾಡುತ್ತಿದ್ದಾರೆ. ಈ ಟ್ರೋಲ್​ಗಳಿಗೆಲ್ಲಾ ಜನರು ತಲೆಕೆಡಿಸಿಕೊಳ್ಳಬಾರದು. ಈ ವಿಷಯಗಳನ್ನು ಟ್ರೋಲ್​ ಮಾಡುವ ಮೂಲಕ ಕೆಲವರು ಕೆಟ್ಟ ಅಭಿರುಚಿ ಬೆಳಸಿಕೊಂಡು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಅವರಿಗೆ ನೀವು ತಕ್ಕ ಉತ್ತರ ನೀಡಬೇಕು. ನಿಖಿಲ್​ ಎಲ್ಲಿದ್ಯಾಪ್ಪ ಎಂದ್ರೆ ನಿಮ್ಮ ಹೃದಯದಲ್ಲಿ ಎಂದು ಹೇಳಿ ಎಂದು ಟ್ರೋಲಿಗರ ವಿರುದ್ಧ ಹರಿಹಾಯ್ದರು.

ಇದನ್ನು ಓದಿ: ನಾಳೆ ಮಂಡ್ಯಕ್ಕೆ ಆಂಧ್ರ ಸಿಎಂ: ನಾಯ್ಡು ಮತ ಓಲೈಕೆಗೆ ಕುಮಾರಸ್ವಾಮಿ ಹೊಸ ತಂತ್ರ?

ನಿಖಿಲ್​ ಅಭಿನಯದ ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ವೇಳೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಖಿಲ್​ ಎಲ್ಲಿದ್ದೀಯಪ್ಪಾ ಎಂದು ಕುಮಾರಸ್ವಾ,ಮಿ ಕರೆಯುವ ಸನ್ನಿವೇಶ ಲೋಕಸಭಾ ಚುನಾವಣೆಯಲ್ಲಿ ಸದ್ದು ಮಾಡಿತ್ತು., ಇದು ಯಾವ ಮಟ್ಟಿಗೆ ಟ್ರೆಂಡ್​ ಸೃಷ್ಟಿಯಾಗಿತ್ತು ಎಂದರೆ, ವಿದೇಶಿಗರು ಕೂಡ ನಿಖಿಲ್​ ಎಲ್ಲಿದ್ದೀಯಪ್ಪ ಎನ್ನುವ ಮಟ್ಟಿಗೆ ಟ್ರೋಲ್​ಗೆ ಗುರಿಯಾಗಿತ್ತು.

ಇನ್ನು ವಿಭಿನ್ನ ಟೈಟಲ್​ಗೆ ಸದಾ ಕಾಯುವ ಚಿತ್ರರಂಗದ ಕೆಲವರು ಈ ಹೆಸರನ್ನು ತಮ್ಮ ಚಿತ್ರಗಳಿಗೆ ಟೈಟಲ್​ ಆಗಿ ಬಳಸಲು ಕೂಡ ಮುಂದಾಗಿದ್ದರು. ಇನ್ನು ನಿನ್ನೆ ಪ್ರಚಾರದ ವೇಳೆ ಮಾತನಾಡಿದ ಬಿಜೆಪಿ ನಾಯಕಿ, ನಟಿ ತಾರಾ ನಿಖಿಲ್​ ಎಲ್ಲಿದ್ದೀಯಪ್ಪ ಚಿತ್ರ ನಿರ್ಮಾಣ ಮಾಡಿದರೆ ಅದರಲ್ಲಿ ನಟಿಸಲು ನಾನು ಸಿದ್ದ ಎಂದಿದ್ದರು. ಆ ಮಟ್ಟಿನ ಹವಾವನ್ನು ಈ ಡೈಲಾಗ್​ ಸೃಷ್ಟಿಸಿತ್ತು.
Loading...

First published:April 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...