ಸಾಲಬಾಧೆ ತಾಳಲಾರದೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತ; 4 ವರ್ಷ ಎಚ್​ಡಿಕೆ ಸಿಎಂ ಆಗಿರಲಿ ಎಂದ ಅಭಿಮಾನಿ

ಸಾವಿಗೆ ಮುನ್ನ ಸೆಲ್ಫಿ ವಿಡಿಯೋ ಮೂಲಕ ಮಾತನಾಡಿರುವ ರೈತ ತಾವು ಎಚ್​.ಡಿ ಕುಮಾರಸ್ವಾಮಿ ಅಪ್ಪಟ್ಟ ಅಭಿಮಾನಿ ಎಂದು ತಿಳಿಸಿದ್ದಾರೆ. ಅಲ್ಲದೇ ತಮ್ಮ ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿ ಕೆರೆ ತುಂಬಿಸುವಂತೆ ಇದೇ ವೇಳೆ ಕೋರಿಕೊಂಡಿದ್ದಾರೆ.

Seema.R | news18
Updated:June 17, 2019, 4:30 PM IST
ಸಾಲಬಾಧೆ ತಾಳಲಾರದೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತ; 4 ವರ್ಷ ಎಚ್​ಡಿಕೆ ಸಿಎಂ ಆಗಿರಲಿ ಎಂದ ಅಭಿಮಾನಿ
ಆತ್ಮಹತ್ಯೆ ಮಾಡಿಕೊಂಡ ರೈತ
Seema.R | news18
Updated: June 17, 2019, 4:30 PM IST
ಮಂಡ್ಯ (ಜೂ.17): ಸಾಲಬಾಧೆ ತಾಳಲಾರದೇ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೂ ಮುನ್ನ ವಿಡಿಯೋ ಮಾಡಿರುವ ರೈತ, ತಾನು ಕುಮಾರಸ್ವಾಮಿ ಅಪ್ಪಟ ಅಭಿಮಾನಿಯಾಗಿದ್ದು, ನಾಲ್ಕು ವರ್ಷ ಎಚ್​ಡಿಕೆಯೇ ಸಿಎಂ ಆಗಿರಬೇಕು ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕೆ.ಆರ್​. ಪೇಟೆ ತಾಲೂಕಿನ ಆಘಲಯ ಗ್ರಾಮದ ಸುರೇಶ್​ (42) ಸಾವನ್ನಪ್ಪಿದ ರೈತ. "ಸಾಲಬಾಧೆ ತಾಳಲಾರದೆ ನಾನು ಈ ನಿರ್ಣಯ ಕೈಗೊಳ್ಳುತ್ತಿದ್ದೇನೆ. ನಾನು ಮಾಡಿರುವ ಸಾಲವನ್ನು ನನ್ನ ಸಾವಿನ ಬಳಿಕ ಮಗ ತೀರಿಸುತ್ತಾನೆ. ಆತನ ಮೇಲೆ ಒತ್ತಡ ಹಾಕಬೇಡಿ," ಎಂದು ಮನವಿ ಮಾಡಿದ್ದಾರೆ, ಅಲ್ಲದೇ "ನನಗೆ ಹಣ ಕೊಡಬೇಕಾದವರು ಇನ್ನು ಕೊಟ್ಟಿಲ್ಲ. ನನ್ನ ಸಾವಿನ ಬಳಿಕವಾದರೂ ಹಣವನ್ನು ಮಗನಿಗೆ ಮರುಕಳಿಸುವಂತೆ," ಇದೇ ವೇಳೆ ಮನವಿ ಮಾಡಿದ್ದಾರೆ.

ಎಚ್​ಡಿಕೆ ಅಭಿಮಾನಿ 

ಸಾವಿಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ರೈತ ತಾವು ಎಚ್​.ಡಿ. ಕುಮಾರಸ್ವಾಮಿ ಅವರ ಅಪ್ಪಟ್ಟ ಅಭಿಮಾನಿ ಎಂದು ತಿಳಿಸಿದ್ದಾರೆ. ಅಲ್ಲದೇ ತಮ್ಮ ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿ ಕೆರೆ ತುಂಬಿಸುವಂತೆ ಇದೇ ವೇಳೆ ಕೋರಿಕೊಂಡಿದ್ದಾರೆ.

ಮಳೆ ಇಲ್ಲದೇ ಈ ಭಾಗ ಬರಪೀಡಿತವಾಗಿದ್ದು, ದಯಮಾಡಿ ಸಹಾಯ ಮಾಡಿ, ರೈತರನ್ನು ಬದುಕಿಸಿ ಎಂದು ಸಿಎಂ ಸೇರಿದಂತೆ ಸಚಿವ ಸಿ.ಎಸ್​.ಪುಟ್ಟರಾಜು ಮತ್ತು ಶಾಸಕ ನಾರಾಯಣಗೌಡರಿಗೂ ಮನವಿ ಮಾಡಿದ್ದಾರೆ.

ಕುಮಾರಸ್ವಾಮಿ ನಾಲ್ಕು ವರ್ಷವೂ ಸಿಎಂ ಆಗಿರಬೇಕು.ಈ ಸರ್ಕಾರ ಯಾವುದೇ ಕಾರಣಕ್ಕೂ ಬೀಳದಂತೆ ಸಚಿವ ಡಿಕೆ ಶಿವಕುಮಾರ್​ ಕಾಪಾಡಬೇಕು. ಯಡಿಯೂರಪ್ಪ ಅವರು ಕುಮಾರಸ್ವಾಮಿಯ ಕಾಲೆಳೆಯದಂತೆ ಕಾರ್ಯನಿರ್ವಹಿಸಬೇಕು. ಈ ಸರ್ಕಾರವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಮೇಲಿದೆ ಎಂದು ವಿಡಿಯೋದಲ್ಲಿ ರೈತ ತಿಳಿಸಿದ್ದಾರೆ.
Loading...

ಇದನ್ನು ಓದಿ: Doctors Strike: ಇಂದು ದೇಶಾದ್ಯಂತ ವೈದ್ಯರ ಮುಷ್ಕರ; ರಾಜ್ಯದಲ್ಲೂ ಖಾಸಗಿ ಆಸ್ಪತ್ರೆಗಳ ಓಪಿಡಿಗಳು ಬಂದ್

ಇದೇ ವೇಳೆ ತಮ್ಮ ಅಂತ್ಯಕ್ರಿಯೆಗೆ ಸಿಎಂ ಕುಮಾರಸ್ವಾಮಿ ಬರಬೇಕು ಎಂಬ ಅಪೇಕ್ಷೆಯನ್ನು ಕೂಡ ಸಿಎಂ ಮುಂದೆ ಇಟ್ಟಿದ್ದಾರೆ. ನಾನು ಈಗಾಗಲೇ ಸತ್ತು 8 ದಿನಗಳು ಕಳೆಯಬೇಕಿತ್ತು. ಆದರೆ, ನಮ್ಮ ಮನೆಯ ಸದಸ್ಯರೆಲ್ಲಾ ಧರ್ಮಸ್ಥಳಕ್ಕೆ ಹೋಗಿದ್ದರು. ಅವರ ಮುಖ ನೋಡಿ ಸಾಯಬೇಕು ಎಂದು ಕಾದು ಕುಳಿತೆ. ಈಗ ನಾನು ಸಾವನ್ನಪ್ಪುತ್ತಿದ್ದೇನೆ. ನಮ್ಮೂರಿನ ಕೆರೆಗೆ ನೀರು ಬಿಡಲು ಸರ್ಕಾರದ ಪ್ರತಿನಿಧಿಗಳು ಮುಂದಾಗಬೇಕು ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.

ರೈತ ಆತ್ಮಹತ್ಯೆಗೂ ಮುನ್ನ ಮಾಡಿರುವ ಈ ವಿಡಿಯೋ ಅವರ ಅಂತ್ಯಕ್ರಿಯೆಯ ಬಳಿಕ ಕುಟುಂಬಸ್ಥರಿಗೆ ಸಿಕ್ಕಿದೆ.

First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...