ಚುನಾವಣಾ ಪ್ರಚಾರದಿಂದ ಎಚ್​ಡಿಕೆ ಸುಸ್ತು; ಪಂಚಕರ್ಮ ಚಿಕಿತ್ಸೆಯ ಮೊರೆ ಹೋದ ಸಿಎಂ

ಮಂಡ್ಯದಲ್ಲಿ ಕೊನೆಯ ದಿನದ ಪ್ರಚಾರದ ವೇಳೆ ಕುಮಾರಸ್ವಾಮಿ ಮನೆಮನೆಗೆ ತೆರಳಿ ಪ್ರಚಾರ ಮಾಡಿದ್ದರು. ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಗೂ ಕುಮಾರಸ್ವಾಮಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

Rajesh Duggumane | news18
Updated:April 22, 2019, 10:54 AM IST
ಚುನಾವಣಾ ಪ್ರಚಾರದಿಂದ ಎಚ್​ಡಿಕೆ ಸುಸ್ತು; ಪಂಚಕರ್ಮ ಚಿಕಿತ್ಸೆಯ ಮೊರೆ ಹೋದ ಸಿಎಂ
ಕುಮಾರಸ್ವಾಮಿ
  • News18
  • Last Updated: April 22, 2019, 10:54 AM IST
  • Share this:
ಬೆಂಗಳೂರು (ಏ.22): ಕಳೆದ ಒಂದು ತಿಂಗಳಿಂದ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈಗ ಅವರು ರಿಲ್ಯಾಕ್ಸ್​ ಮೂಡ್​ಗೆ ತೆರಳಿದ್ದಾರೆ. ಶಿವಮೊಗ್ಗದ ಚುನಾವಣಾ ಪ್ರಚಾರ ಮುಗಿಸಿ ಎಚ್​ಡಿಕೆ ಉಡುಪಿಗೆ ತೆರಳಿದ್ದು, ಪಂಚಕರ್ಮ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಮತದಾನದ ವೇಳೆ ಮಂಡ್ಯ, ತುಮಕೂರು, ಹಾಸನ, ಮೈಸೂರು ಮೊದಲಾದ ಕಡೆ ಕುಮಾರಸ್ವಾಮಿ ಪ್ರಚಾರ ನಡೆಸಿದ್ದರು. ಮಂಡ್ಯದಿಂದ ಮಗ ನಿಖಿಲ್​ ಕುಮಾರಸ್ವಾಮಿ ಕಣಕ್ಕೆ ಇಳಿದಿರುವುದು ಸಿಎಂಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಭರ್ಜರಿ ರೋಡ್​ ಶೋ ನಡೆಸಿದ್ದರು.

ಮಂಡ್ಯದಲ್ಲಿ ಕೊನೆಯ ದಿನದ ಪ್ರಚಾರದ ವೇಳೆ ಕುಮಾರಸ್ವಾಮಿ ಮನೆಮನೆಗೆ ತೆರಳಿ ಪ್ರಚಾರ ಮಾಡಿದ್ದರು. ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಗೂ ಕುಮಾರಸ್ವಾಮಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಇದನ್ನೂ ಓದಿ: 'ಪುಟ್ಟರಾಜು ನನಗಿಂತ ಒಳ್ಳೆಯ ನಟ, ಧಮ್ಕಿ ಹಾಕಿದವರನ್ನು ಸುಮ್ಮನೆ ಬಿಡಲ್ಲ'; ಸುಮಲತಾ ಅಂಬರೀಶ್​ ಎಚ್ಚರಿಕೆ

ಭಾನುವಾರ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಹಾಗಾಗಿ, ಶಿವಮೊಗ್ಗದಲ್ಲಿ ಪ್ರಚಾರ ಮುಗಿಸಿ ಕುಮಾರಸ್ವಾಮಿ ಉಡುಪಿಯ ಕಾಪು ತಾಲೂಕಿನ ಮೂಳೂರಲ್ಲಿರುವ ಹೆಲ್ತ್ ರೆಸಾರ್ಟ್​​ಗೆ ಕುಮಾರಸ್ವಾಮಿ ತೆರಳಿದ್ದಾರೆ.  ಪಂಚಕರ್ಮ ಚಿಕಿತ್ಸೆ, ಧ್ಯಾನದಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಯೋಗ ಹಾಗೂ ಆಯಿಲ್ ಥೆರಪಿ ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ಅವರು ಇಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.

First published:April 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...