ಮಗನ​ ಸೋಲಿನ ಬಳಿಕ ಎಚ್​​ಡಿಕೆಗೆ ಕೊನೆಗೂ ನೆನಪಾಯಿತು ಮಂಡ್ಯ; ಇಂದು ಮೃತ ರೈತನ ಮನೆಗೆ ಸಿಎಂ ಭೇಟಿ

ರೈತನ ವಿಡಿಯೋ ಮನವಿಗೆ ಕುಮಾರಸ್ವಾಮಿ ಮನ ಕರಗಿದ್ದು, ಅವರು ಇಂದು ಆಘಲಯ ಗ್ರಾಮಕ್ಕೆ ತೆರಳಲಿದ್ದಾರೆ. ಈ ವೇಳೆ ಮೃತ ರೈತ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.

Rajesh Duggumane | news18
Updated:June 18, 2019, 2:50 PM IST
ಮಗನ​ ಸೋಲಿನ ಬಳಿಕ ಎಚ್​​ಡಿಕೆಗೆ ಕೊನೆಗೂ ನೆನಪಾಯಿತು ಮಂಡ್ಯ; ಇಂದು ಮೃತ ರೈತನ ಮನೆಗೆ ಸಿಎಂ ಭೇಟಿ
ಹೆಚ್​.ಡಿ. ಕುಮಾರಸ್ವಾಮಿ.
Rajesh Duggumane | news18
Updated: June 18, 2019, 2:50 PM IST
ಬೆಂಗಳೂರು (ಜೂ. 18): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಸೋತ ನಂತರ ಮುಖ್ಯಮಂತ್ರಿ ಎಚ್​​ಡಿ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಅವರು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ತೆರಳುತ್ತಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ.

ಜಿಲ್ಲೆಯ ಕೆ.ಆರ್​. ಪೇಟೆ ತಾಲೂಕಿನ ಆಘಲಯ ಗ್ರಾಮದ ಸುರೇಶ್​ (42) ಸೆಲ್ಫೀ ವಿಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದರು. “ಸಾಲಬಾಧೆ ತಾಳಲಾರದೆ ನಾನು ಈ ನಿರ್ಣಯ ಕೈಗೊಳ್ಳುತ್ತಿದ್ದೇನೆ. ಸಾವಿನ ಬಳಿಕ ನಾನು ಮಾಡಿರುವ ಸಾಲವನ್ನು ನನ್ನ ಮಗ ತೀರಿಸುತ್ತಾನೆ. ಆತನ ಮೇಲೆ ಒತ್ತಡ ಹಾಕಬೇಡಿ,” ಎಂದು ಕೋರಿದ್ದರು.

ಅಲ್ಲದೆ, ಎಚ್​.ಡಿ. ಕುಮಾರಸ್ವಾಮಿ ಅವರ ಅಪ್ಪಟ್ಟ ಅಭಿಮಾನಿ ಎಂದು ವಿಡಿಯೋದಲ್ಲಿ ತಿಳಿಸಿದ್ದ ಸುರೇಶ್, “ನಾನು ಈಗಾಗಲೇ ಸತ್ತು 8 ದಿನಗಳು ಕಳೆಯಬೇಕಿತ್ತು. ಆದರೆ, ನಮ್ಮ ಮನೆಯ ಸದಸ್ಯರೆಲ್ಲಾ ಧರ್ಮಸ್ಥಳಕ್ಕೆ ಹೋಗಿದ್ದರು. ಅವರ ಮುಖ ನೋಡಿ ಸಾಯಬೇಕು ಎಂದು ಕಾದು ಕುಳಿತೆ. ಈಗ ನಾನು ಸಾವನ್ನಪ್ಪುತ್ತಿದ್ದೇನೆ. ನಮ್ಮೂರಿನ ಕೆರೆಗೆ ನೀರು ಬಿಡಲು ಸರ್ಕಾರದ ಪ್ರತಿನಿಧಿಗಳು ಮುಂದಾಗಬೇಕು. ನಾನು ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿ. ಹಾಗಾಗಿ ನಾನು ಸತ್ತ ನಂತರ ಅಂತ್ಯಸಂಸ್ಕಾರಕ್ಕೆ ಅವರು ಬರಬೇಕು,” ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದರು.

ಇದನ್ನೂ ಓದಿ: ಸಾಲಬಾಧೆ ತಾಳಲಾರದೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತ; 4 ವರ್ಷ ಎಚ್​ಡಿಕೆ ಸಿಎಂ ಆಗಿರಲಿ ಎಂದ ಅಭಿಮಾನಿ

ಈ ವಿಡಿಯೋ ಮನವಿಗೆ ಕುಮಾರಸ್ವಾಮಿ ಮನ ಕರಗಿದ್ದು, ಅವರು ಇಂದು ಆಘಲಯ ಗ್ರಾಮಕ್ಕೆ ತೆರಳಲಿದ್ದಾರೆ. ಈ ವೇಳೆ ಮೃತ ರೈತ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಕಷ್ಟುಬಾರಿ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದ ಎಚ್​ಡಿಕೆ, ನಿಖಿಲ್​ ಕುಮಾರಸ್ವಾಮಿ ಹೀನಾಯ ಸೋಲಿನ ನಂತರ ಮಂಡ್ಯದ ಕಡೆ ತಿರುಗಿಯೂ ನೋಡಿರಲಿಲ್ಲ. ಈಗ ರೈತನ ಮನವಿಗೆ ಸ್ಪಂದಿಸಿ ಅವರು ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

First published:June 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...