ಮಗನನ್ನು ಗೆಲ್ಲಿಸಲು ಸಿಎಂ ಗುತ್ತಿಗೆದಾರರಿಂದ ನೂರಾರು ಕೋಟಿ ಕಮಿಷನ್​ ಪಡೆದಿದ್ದಾರೆ; ಶ್ರೀರಾಮುಲು ಆರೋಪ

ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರಿಗೆ ಪರಸ್ಪರ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಲೀಡರ್​ಗಳು ಮಾತ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜೆಡಿಎಸ್ ಮಂತ್ರಿಗಳು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

Sushma Chakre | news18
Updated:April 18, 2019, 8:53 AM IST
ಮಗನನ್ನು ಗೆಲ್ಲಿಸಲು ಸಿಎಂ ಗುತ್ತಿಗೆದಾರರಿಂದ ನೂರಾರು ಕೋಟಿ ಕಮಿಷನ್​ ಪಡೆದಿದ್ದಾರೆ; ಶ್ರೀರಾಮುಲು ಆರೋಪ
ಶ್ರೀರಾಮುಲು
Sushma Chakre | news18
Updated: April 18, 2019, 8:53 AM IST
ಗದಗ (ಏ. 17): ತಮ್ಮ ಮಗನನ್ನು ಗೆಲ್ಲಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಗುತ್ತಿಗೆದಾರರಿಂದ ನೂರಾರು ಕೋಟಿ ರೂ. ಕಮಿಷನ್ ಪಡೆದಿದ್ದಾರೆ. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಂದ ಕಮಿಷನ್ ಪಡೆದಿದ್ದಾರೆ ಎಂದು ಬಿಜೆಪಿ ನಾಯಕ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಗೆಲ್ಲಿಸಲೇಬೇಕೆಂದು ಸಿಎಂ ಕುಮಾರಸ್ವಾಮಿ ಹರಸಾಹಸ ಪಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಂದ ಅದಕ್ಕಾಗಿ ಕಮಿಷನ್ ಪಡೆದಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಈ ಬಗ್ಗೆ ತನಿಖೆ ನಡೆಸುತ್ತೇವೆ. ಸಿಎಂ ಕುಮಾರಸ್ವಾಮಿ, ಸಚಿವ ಎಚ್​.ಡಿ. ರೇವಣ್ಣನವರ ಮೇಲೂ ತನಿಖೆ ನಡೆಸುತ್ತೇವೆ ಎಂದು ಗದಗದಲ್ಲಿ ಹೇಳಿದ್ದಾರೆ.

'ಉಮೇಶ್​ ಜಾಧವ್​ ಗೋಮುಖ ವ್ಯಾಘ್ರ, ಅವನಿಗೆ ನಿಯತ್ತಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

ಸುಮಲತಾಗೆ ಬೆಂಬಲ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ಕರ್ನಾಟಕದ ಧೀಮಂತ ಕಲಾವಿದ ಅಂಬರೀಶ್​ ಮರಣಾನಂತರ ಸುಮಲತಾ ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ. ಆಗಲೇ ರೇವಣ್ಣ ಸುಮಲತಾ ವಿರುದ್ಧ ಅಸಹ್ಯವಾದ ಹೇಳಿಕೆ ನೀಡಿದ್ದರು. ಗಂಡ ಸತ್ತು 6 ತಿಂಗಳು ಕೂಡ ಆಗಿಲ್ಲ, ಈಗಲೇ ರಾಜಕೀಯ ಮಾಡತೊಡಗಿದ್ದಾರೆ ಎಂದಿದ್ದರು. ಅದನ್ನೇ ಹಠವಾಗಿ ಸ್ವೀಕರಿಸಿದ ಸುಮಲತಾ ಚುನಾವಣೆ ಎದುರಿಸುತ್ತಿದ್ದಾರೆ. ಸ್ವಾಭಿಮಾನಿಗಳಾದ ಮಂಡ್ಯ ಜನರು ಸುಮಲತಾಗೆ ಬೆಂಬಲ ನೀಡಿ ಗೆಲ್ಲಿಸುತ್ತಾರೆಂಬ ನಂಬಿಕೆಯಿದೆ ಎಂದಿದ್ದಾರೆ.

ಮೋದಿಯಂತೆ ವ್ಯಾಕ್ಸಿಂಗ್​ ಮಾಡಿಸಿಕೊಳ್ಳಲ್ಲ, ಬಡವರ ಬೆವರ ಹನಿ ಸ್ಪರ್ಶಿಸಿ ಊಟ ಮಾಡುವವನು ನಾನು; ಸಿಎಂ ಎಚ್​ಡಿಕೆ

ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರಿಗೆ ಪರಸ್ಪರ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಲೀಡರ್​ಗಳು ಮಾತ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜೆಡಿಎಸ್ ಮಂತ್ರಿಗಳು ಬಹಿರಂಗವಾಗಿ ಹೇಳುತ್ತಿದ್ದಾರೆ. ಆಕಸ್ಮಿಕವಾಗಿ ಲೋಕಸಭಾ ಚುನಾವಣೆಯಲ್ಲಿ ಸೋತರೆ ಆ ಜವಾಬ್ದಾರಿ ನೀವೇ ವಹಿಸಬೇಕು ಅಂತಿದ್ದಾರೆ. ಅವರಿಗೆ ಪರಸ್ಪರ ಹೊಂದಾಣಿಕೆ ಇಲ್ಲದೇ ಇರುವುದರಿಂದ ಸರ್ಕಾರ ಮುಂದೆ ಹೋಗುವುದಿಲ್ಲ. ಅದಷ್ಟಕ್ಕೆ ಅದೇ ಬಿದ್ದುಹೋಗುತ್ತದೆ ಎಂದು ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
Loading...

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...