ಅನೌಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಮೌನ; ಸೋಲಿನ ಬಗ್ಗೆ ಸಚಿವರಿಂದ ವಿಶ್ಲೇಷಣೆ

ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಆರಂಭವಾಗಿದ್ದು, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಸಿ.ಮನಗೂಳಿ ಹೊರತುಪಡಿಸಿ ಬಹುತೇಕ ಸಚಿವರು ಭಾಗಿಯಾಗಿದ್ದಾರೆ. ಮೈತ್ರಿ ಅಭ್ಯರ್ಥಿಗಳು ಸೋಲಿನ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದೆ.

ಕುಮಾರಸ್ವಾಮಿ

ಕುಮಾರಸ್ವಾಮಿ

  • News18
  • Last Updated :
  • Share this:
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಭಾರೀ ಮುಖಭಂಗವಾದ ಬಳಿಕ ಫಲಿತಾಂಶ ಮೈತ್ರಿ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮ, ಮೈತ್ರಿಯ ಭವಿಷ್ಯ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು  ಅನೌಪಚಾರಿಕ ಸಚಿವ ಸಂಪುಟ ಸಭೆ ನಡೆಯಿತು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್, .ಸಿ.ಮನಗೂಳಿ ಹೊರತುಪಡಿಸಿ ಬಹುತೇಕ ಸಚಿವರು ಭಾಗಿಯಾಗಿದ್ದರು.

ಅನೌಪಚಾರಿಕ ಸಚಿವ ಸಂಪುಟ ಸಭೆ‌ಯಲ್ಲಿ ಸಿಎಂ ಕುಮಾರಸ್ವಾಮಿ ಸೋಲಿನ ಬಗ್ಗೆ ಸಚಿವರ ವಿಶ್ಲೇಷಣೆಯನ್ನು  ಮೌನವಾಗಿ ಕೇಳಿಸಿಕೊಳ್ಳುತ್ತಿದ್ದರು. ಈ ವೇಳೆ ಮಂಡ್ಯ ಭಾಗದ ಸಚಿವರಾದ ಡಿ.ಸಿ. ತಮ್ಮಣ್ಣ, ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು ಸಹ ಗಪ್ ಚುಪ್ ಆಗಿದ್ದರು. ಮಂಡ್ಯದ ಆಪ್ತ ಸಚಿವರ ಜೊತೆ ಸಿಎಂ ಅಷ್ಟಕ್ಕಷ್ಟೇ ಎಂಬಂತೆ ಇದ್ದರು.  ಸಭೆಯಲ್ಲಿ ಆಪ್ತ ಸಚಿವರ ಜೊತೆಗೂ ಸರಿಯಾಗಿ ಮಾತನಾಡದೇ ಸುಮ್ಮನಿದ್ದರು.

ಸೋಲಿನ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಂಭೀರ ‌ಚರ್ಚೆ ನಡೆಯಿತು. ಫಲಿತಾಂಶ ಹೀಗೆ ಬರುತ್ತೆ ಅಂತಾ ಯಾರು ಅಂದಾಜಿಸರಿಲಿಲ್ಲ.  ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ನಾವು ರಾಜ್ಯದಲ್ಲಿ ಈ ಮೈತ್ರಿ ಮಾಡಿಕೊಂಡಿದ್ವಿ. ಅದರಂತೆ ಚುನಾವಣೆಯನ್ನು ಕೂಡ ಸಮರ್ಥವಾಗಿ ಎದುರಿಸಿದ್ದೇವೆ.  ಆದರೆ ನಮ್ಮ ನಿರೀಕ್ಷೆಗೆ ತಕ್ಕಂತೆ ಈ ಚುನಾವಣೆಯಲ್ಲಿ ನಮಗೆ ಫಲಿತಾಂಶ ಬಂದಿಲ್ಲ. ನಾವು ಯಾರೂ ಕೂಡ ಊಹೆ ಮಾಡಿಕೊಳ್ಳದಂತಹ ಫಲಿತಾಂಶ ಇದು. ನಿಜಕ್ಕೂ ಕೂಡ ಇದು ನಮಗೆ ದೊಡ್ಡ ಶಾಕ್. ದೊಡ್ಡ ದೊಡ್ಡ ನಾಯಕರಿಗೆ ಸೋಲಾಗಿದೆ. ಈ ದೊಡ್ಡ ನಾಯಕರಿಗೆ ಯಾವ ರೀತಿ ಸೋಲಾಯಿತು ಅನ್ನೋದೆ ತಿಳಿಯುತ್ತಿಲ್ಲ. ಮಹಾಘಟ್ ಬಂದನ್ ನಾಯಕತ್ವ ವಹಿಸಿಕೊಂಡವರಿಗೆ ಸೋಲಾಗಿದೆ. ಅತಿ ಹೆಚ್ಚು ಲೀಡ್ ಗಳಿಂದ ಗೆಲ್ಲಬೇಕಾದವರೇ ಸೋತಿದ್ದಾರೆ ಎಂದು ಕೆಲ ಸಚಿವರು ಹೇಳಿದರು. ಮತ್ತೆ ಕೆಲವು ಸಚಿವರು ಇವಿಎಂಗಳಿಂದ ಸೋಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

First published: