'ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ'; ಗ್ರಾಮ ವಾಸ್ತವ್ಯ ಬಗ್ಗೆ ಬಿಜೆಪಿ ಟೀಕೆಗೆ ಸಿಎಂ ಎಚ್​ಡಿಕೆ ತಿರುಗೇಟು

ಶನಿವಾರ (ಇಂದು) ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಹೇರೂರು ಗ್ರಾಮದಲ್ಲಿ ವಾಸ್ತವ್ಯ ಹೂಡಬೇಕಿತ್ತು. ಆದರೆ, ಇಲ್ಲಿ ರಾತ್ರಿ ಇಡೀ ಭಾರೀ ಮಳೆಯಾದ ಕಾರಣ ವಾಸ್ತವ್ಯವನ್ನು ಮುಂದೂಡಲಾಗಿದೆ.

ಗ್ರಾಮ ವಾಸ್ತವ್ಯದ ವೇಳೆ ಶಾಲೆಯ ನೆಲದ ಮೇಲೆ ಮಲಗಿರುವ ಸಿಎಂ ಹೆಚ್​.ಡಿ. ಕುಮಾರಸ್ವಾಮಿ.

ಗ್ರಾಮ ವಾಸ್ತವ್ಯದ ವೇಳೆ ಶಾಲೆಯ ನೆಲದ ಮೇಲೆ ಮಲಗಿರುವ ಸಿಎಂ ಹೆಚ್​.ಡಿ. ಕುಮಾರಸ್ವಾಮಿ.

  • News18
  • Last Updated :
  • Share this:
ಬೆಂಗಳೂರು: ಕಾಂಗ್ರೆಸ್​ನೊಂದಿಗಿನ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಈ ಹಿಂದೆ ಬಿಜೆಪಿ ಜೊತೆಗಿನ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರೇ ಆರಂಭಿಸಿದ್ದ ಗ್ರಾಮವಾಸ್ತವ್ಯದಿಂದ ಎಚ್​ಡಿಕೆಗೆ ದೊಡ್ಡ ಪ್ರಸಿದ್ಧಿ ತಂದುಕೊಟ್ಟಿತು. ಇದೀಗ ಮತ್ತೆ ಈ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.

ಕುಮಾರಸ್ವಾಮಿ ಅವರು ನೆನ್ನೆ ಮೌನ್ನೆ ಯಾದಗಿರಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮುಗಿಸಿದ್ದಾರೆ. ಎಚ್​ಡಿಕೆ ಅವರ ಈ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಾ, ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದು, ಮೊದಲು ಆ ಬಗ್ಗೆ ಗಮನ ಹರಿಸಲಿ ಎಂದು ಹರಿಹಾಯುತ್ತಿದ್ದಾರೆ. ಈ ವಿಚಾರವಾಗಿ ಇಂದು ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಎಚ್​ಡಿಕೆ, ನಿಮ್ಮ ಟೀಕೆಗಳಿಗೆ ಮೌನವೇ ಉತ್ತರ ಎಂದು ಕುವೆಂಪು ಅವರ ವಾಕ್ಯವನ್ನು ಉಲ್ಲೇಖಿಸುವ ಮೂಲಕ ತಿರುಗೇಟು ನೀಡಿದ್ದಾರೆ.

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ. ಇದನ್ನು ಓದಿ: ಮುಗಿಯಿತು ಸರಳ ಗ್ರಾಮ ವಾಸ್ತವ್ಯ; ಯಾದಗಿರಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಸೂಚಿಸಿದ ಸಿಎಂ!

ಕುಮಾರಸ್ವಾಮಿ ಜೂನ್​ 21ರ ಶುಕ್ರವಾರ ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ಕ್ಷೇತ್ರದ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲದೆ ಜನತಾ ದರ್ಶನ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿದ್ದರು. ಶನಿವಾರ (ಇಂದು) ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಹೇರೂರು ಗ್ರಾಮದಲ್ಲಿ ವಾಸ್ತವ್ಯ ಹೂಡಬೇಕಿತ್ತು. ಆದರೆ, ಇಲ್ಲಿ ರಾತ್ರಿ ಇಡೀ ಭಾರೀ ಮಳೆಯಾದ ಕಾರಣ ವಾಸ್ತವ್ಯವನ್ನು ಮುಂದೂಡಲಾಗಿದೆ.

First published: