ಹೊಸ ಬಾರ್​ಗಳಿಗೆ ಪರವಾನಗಿ ಸಿಗುತ್ತಾ?; ಜನಾಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

news18
Updated:September 26, 2018, 11:29 AM IST
ಹೊಸ ಬಾರ್​ಗಳಿಗೆ ಪರವಾನಗಿ ಸಿಗುತ್ತಾ?; ಜನಾಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ
ಸಾಂದರ್ಭಿಕ ಚಿತ್ರ
news18
Updated: September 26, 2018, 11:29 AM IST
ಜನಾರ್ದನ ಹೆಬ್ಬಾರ್​, ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 26): ನೂತನವಾಗಿ ಬಾರ್​ಗಳನ್ನು ತೆರೆಯಲು ಪರವಾನಗಿ​ ನೀಡುವ ವಿಚಾರವಾಗಿ ಸಮೀಕ್ಷೆ ನಡೆಸಿ ಮಾಹಿತಿ ನೀಡಲು ಎಲ್ಲ ಜಿಲ್ಲೆಗಳ  ಜಿಲ್ಲಾಧಿಕಾರಿಗಳಿಗೆ ಸಿಎಂ  ಎಚ್​.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಮದ್ಯದಂಗಡಿಗಳು ಬೇಕೇ? ಬೇಡವೆ? ಎಂಬ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕಲೆಹಾಕಲು ಹೇಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಆದಷ್ಟು ಬೇಗ ವರದಿ ಪಡೆದು ಸರ್ಕಾರಕ್ಕೆ ತಿಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆ.

ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್​ ನೀಡುವ ಬಗ್ಗೆ ಬರುವ ವರದಿಯನ್ನು ಸಂಪುಟದಲ್ಲಿ ಚರ್ಚಿಸಲು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತೀರ್ಮಾನ ಮಾಡಿದ್ದಾರೆ. ಒಂದುವೇಳೆ ಸಂಪುಟದಲ್ಲಿ ಇದಕ್ಕೆ ವಿರೋಧ ವ್ಯಕ್ತವಾದರೆ ಹೊಸ ಬಾರ್​ಗಳಿಗೆ ಲೈಸೆನ್ಸ್​ ನೀಡಲಾಗುವುದಿಲ್ಲ. ಸಚಿವ ಸಂಪುಟ ಒಪ್ಪಿಗೆ ಸೂಚಿಸಿದರೆ ಮಾತ್ರ ಲೈಸೆನ್ಸ್​ ನೀಡಲಾಗುವುದು.

ಜನರು ವಿರೋಧ ವ್ಯಕ್ತಪಡಿಸುವ ಕಡೆಗಳಲ್ಲಿ ಮತ್ತು ಕೆಲ ಸೂಕ್ಷ್ಮ ಸ್ಥಳಗಳಲ್ಲಿ ಬಾರ್​ ತೆರೆಯಲು ಲೈಸೆನ್ಸ್​ ನೀಡುವುದಿಲ್ಲ. ಈ  ಹಿನ್ನೆಲೆಯಲ್ಲಿ ಜನಾಭಿಪ್ರಾಯ ಏನೆಂಬುದನ್ನು ತಿಳಿದುಕೊಳ್ಳಲು ಸಿಎಂ ನಿರ್ಧಾರ ಮಾಡಿದ್ದಾರೆ. ಆ ಕಾರಣದಿಂದಲೇ ಆದಷ್ಟು ಶೀಘ್ರದಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳು ಸಮಿತಿಗಳನ್ನು  ರಚಿಸಿ ಜನರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಮೂರರಿಂದ ನಾಲ್ಕು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
First published:September 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ