ಕೊಡಗಿಗೆ 3,000 ಕೋಟಿ ರೂ ಪರಿಹಾರ ಕೇಳಿದ್ದೇವೆ; ಕೇಂದ್ರದಿಂದ ಸಿಗುವ ಭರವಸೆಯಿದೆ: ಕುಮಾರಸ್ವಾಮಿ

news18
Updated:August 30, 2018, 7:45 PM IST
ಕೊಡಗಿಗೆ 3,000 ಕೋಟಿ ರೂ ಪರಿಹಾರ ಕೇಳಿದ್ದೇವೆ; ಕೇಂದ್ರದಿಂದ ಸಿಗುವ ಭರವಸೆಯಿದೆ: ಕುಮಾರಸ್ವಾಮಿ
news18
Updated: August 30, 2018, 7:45 PM IST
ಧರಣೇಶ್​ ಭೂಕನಕೆರೆ

(ನವದೆಹಲಿ): ಸಮ್ಮಿಶ್ರ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ ರಾಹುಲ್​ ಗಾಂಧಿಯವರನ್ನು ಭೇಟಿಯಾದ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ನಂತರ ರಾಜ್​ನಾಥ್​ ಸಿಂಗ್​ರನ್ನೂ ಭೇಟಿ ಮಾಡಿದರು. ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದ ನಂತರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಕೊಡಗಿಗೆ ನೆರೆ ಪರಿಹಾರಕ್ಕಾಗಿ ರಾಜ್​ನಾಥ್​ ಸಿಂಗ್​ರ ಜತೆ ಚರ್ಚಿಸಿರುವುದಾಗಿ ತಿಳಿಸಿದರು.

ರಾಜ್ಯದ ಕೆಲ ಜಿಲ್ಲೆಗಳಲ್ಲಿನ ಮಳೆ ಅನಾಹುತಗಳ ಬಗ್ಗೆ ಹೇಳಿದ್ದೇನೆ. ಡಿಸಿಎಂ ಪರಮೇಶ್ವರ್, ಸಚಿವ ದೇಶಪಾಂಡೆ, ಬಂಡೆಪ್ಪ ಕಾಶಂಪೂರ್ ಜತೆಗೆ ತೆರಳಿ ಭೇಟಿ ಮಾಡಿದ್ದೇನೆ. ಕೇಂದ್ರಕ್ಕೆ ಮಧ್ಯಂತರ ವರದಿ ನೀಡಿದ್ದೇವೆ, ಎಂದು ಕುಮಾರಸ್ವಾಮಿ ತಿಳಿಸಿದರು.

ಕೊಡಗು ಗುಡ್ಡಕುಸಿತದಿಂದ 3 ಸಾವಿರ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಗೃಹ ಸಚಿವರು ತಕ್ಷಣವೇ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ತಕ್ಷಣವೇ NDRF ನಿಧಿಯಿಂದ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಗೃಹ ಸಚಿವರು ಸಕಾರಾತ್ಮಕ ವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಸಿಎಂ ಹೇಳಿದರು.

ಜತೆಗೆ ತಕ್ಷಣವೇ ಅಧ್ಯಯನ ತಂಡ ಕಳಿಸುವ ಭರವಸೆಯನ್ನೂ ಗೃಹ ಸಚಿವರು ನೀಡಿದ್ದಾಗಿ ಎಚ್​ಡಿಕೆ ತಿಳಿಸಿದರು. ಪ್ರಧಾನಿ ವಿದೇಶ ಪ್ರವಾಸದಿಂದ ಬಂದ ಬಳಿಕ ಅವರ ಗಮನಕ್ಕೆ ತರುತ್ತಾರಂತೆ, ರಾಜ್ಯ ಗೃಹ ಇಲಾಖೆ ಸುಧಾರಣೆಗಾಗಿ ಪ್ರತ್ಯೇಕ ಮನವಿ ಮಾಡಿದ್ದೇವೆ ಎಂದರು.

ಮುಂದುವರೆದ ಅವರು ಕರಾವಳಿಯ ಸುರಕ್ಷತೆಯ ಬಗ್ಗೆ ರಾಜ್ಯ ಗೃಹ ಸಚಿವ ಪರಮೇಶ್ವರ್ ಮನವಿ ಮಾಡಿದ್ದಾರೆ, ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ್ದೇವೆ, ಎಂದರು. ಕೊಡಗಿನ ಅನಾಹುತದ ಬಗ್ಗೆ ರಾಜ್ಯ ಸರ್ಕಾರದ ಕೆಲಸ ವಿವರಿಸಿದ್ದೇವೆ, ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎಂದೂ ಕುಮಾರಸ್ವಾಮಿ ತಿಳಿಸಿದರು.

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೊಡಗಿನ ಅತಿವೃಷ್ಟಿ ಯಿಂದ ಆಗಿರುವ ನಷ್ಟಕ್ಕೆ ಪರಿಹಾರ ಧನವನ್ನು ನೀಡುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ನವದೆಹಲಿಯಲ್ಲಿ ಇಂದು ಮನವಿ ಪತ್ರವನ್ನು ಸಲ್ಲಿಸಿದರು. 
Loading...
ಹೆಸರು ಕಾಳಿಗೆ ಬೆಂಬಲ ಬೆಲೆಕೊಟ್ಟು ಖರೀದಿಸಲು ಕೇಂದ್ರ ಅನುಮತಿ ನೀಡಿದೆ ಎಂದು ಕುಮಾರಸ್ವಾಮಿ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಬಯಲು ಸೀಮೆ ಪರಿಹಾರಕ್ಕೆ ಮತ್ತೊಂದು ಸಭೆ:

ದೆಹಲಿಯಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿದ್ದು, ಬಯಲು ಸೀಮೆ ಜಿಲ್ಲೆಗಳ ಸಂಬಂಧ ಮತ್ತೊಂದು ಮನವಿ ಕೊಡಬೇಕಿದೆ ಎಂದರು. ಬಯಲು ಸೀಮೆಯ ಸಂಬಂಧವಾಗಿಯೇ ಮತ್ತೊಂದು ಸಭೆ ಕರೆದು ನಿರ್ಧರಿಸುತ್ತೇವೆ ಎಂದು ದೇಶಪಾಂಡೆ ಹೇಳಿದರು.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...