14 ತಿಂಗಳ ಮೈತ್ರಿ ಸರ್ಕಾರ ಪತನ; ವಿಶ್ವಾಸಮತದಲ್ಲಿ ಸೋತ ಸಿಎಂ ಕುಮಾರಸ್ವಾಮಿ; ಸಮ್ಮಿಶ್ರ ಸರ್ಕಾರದ ಪರ 99, ಬಿಜೆಪಿ ಪರ 105 ಮತ

ಕಳೆದ 2018ರ ಮೇ 23ರಂದು ಅಧಿಕಾರಕ್ಕೆ ಬಂದಿದ್ದ ಸಮ್ಮಿಶ್ರ ಸರ್ಕಾರ ಇಂದಿಗೆ ಸರಿಯಾಗಿ 14 ತಿಂಗಳಲ್ಲಿ ಪತನವಾಗಿದೆ.

HR Ramesh | news18
Updated:July 23, 2019, 7:54 PM IST
14 ತಿಂಗಳ ಮೈತ್ರಿ ಸರ್ಕಾರ ಪತನ; ವಿಶ್ವಾಸಮತದಲ್ಲಿ ಸೋತ ಸಿಎಂ ಕುಮಾರಸ್ವಾಮಿ; ಸಮ್ಮಿಶ್ರ ಸರ್ಕಾರದ ಪರ 99, ಬಿಜೆಪಿ ಪರ 105 ಮತ
ವಿಶ್ವಾಸಮತ ಪ್ರಸ್ತಾವನೆ ವಿರುದ್ಧ ಮತ ಚಲಾಯಿಸಿದ ಬಿಜೆಪಿ ಸದಸ್ಯರು.
  • News18
  • Last Updated: July 23, 2019, 7:54 PM IST
  • Share this:
ಬೆಂಗಳೂರು: ಬಹುತೇಕ ನಾಲ್ಕು ದಿನಗಳ ಹೈಡ್ರಾಮಾಕ್ಕೆ ಕೊನೆಗೂ ತೆರೆ ಬಿದ್ದಿದೆ. ಭಾರೀ ಚರ್ಚೆ, ವಾದ, ವಿವಾದ, ಆರೋಪ-ಪ್ರತ್ಯಾರೋಪ ಕಾಲಹರಣದ ಬಳಿಕ ಕೊನೆಗೂ ವಿಶ್ವಾಸಮತ ಯಾಚನೆ ಇಂದು ನಡೆಯಿತು. ಸಭಾನಾಯಕ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಮೇಲೆ ಭಾಷಣ ಮಾಡಿದ ಬಳಿಕ ವಿಶ್ವಾಸಮತ ಯಾಚನೆ ನಡೆಯಿತು. ಆದರೆ, ನಿಗದಿತ ಸದಸ್ಯರ ಬಲವನ್ನು ಸಾಬೀತು ಮಾಡುವಲ್ಲಿ ಸಿಎಂ ಕುಮಾರಸ್ವಾಮಿ ಸೋತು ಹೋದರು.

ಅದರಂತೆ ಸುಮಾರು 7.15ನಿಮಿಷದಲ್ಲಿ ಸದನದ ಬಾಗಿಲುಗಳನ್ನು ಬಂದ್​ ಮಾಡಿ, ಶಾಸಕರನ್ನು ಎದ್ದು ನಿಲ್ಲಿಸಿ, ಯಾರು ಯಾರ ಪರ ಇದ್ದಾರೆ ಎಂಬುದನ್ನು ತಲೆ ಲೆಕ್ಕ ಹಾಕಲಾಯಿತು. ಮೊದಲಿಗೆ ವಿಶ್ವಾಸಮತ  ಪರ ಇರುವವರು ಎದ್ದು ನಿಲ್ಲುವಂತೆ ಸ್ಪೀಕರ್ ಸೂಚನೆ ನೀಡಿದರು. ಅದರಂತೆ ಸಿಬ್ಬಂದಿ ಪ್ರಸ್ತಾವನೆ ಪರ ಇರುವವರನ್ನು ಲೆಕ್ಕ ಹಾಕಿದರು. ಆನಂತರ ವಿಶ್ವಾಸಮತ ಪ್ರಸ್ತಾವನೆ ವಿರುದ್ಧವಾಗಿ ಇರುವವ ಸದಸ್ಯರನ್ನು ಲೆಕ್ಕ ಹಾಕಲಾಯಿತು. ಮೈತ್ರಿ ಸರ್ಕಾರ ಪರ 99 ಸದಸ್ಯರು ಸದನದಲ್ಲಿ ಹಾಜರಿದ್ದು, ಪ್ರಸ್ತಾವನೆ ಪರ ಮತ ಹಾಕಿದರು. ಇನ್ನು ಪ್ರಸ್ತಾವನೆ ವಿರುದ್ಧವಾಗಿ ಬಿಜೆಪಿಯ 105 ಸದಸ್ಯರು ಮತ ಹಾಕಿದರು. ಇದರೊಂದಿಗೆ ಸಿಎಂ ಕುಮಾರಸ್ವಾಮಿ ಅವರ ವಿಶ್ವಾಸಮತ ಪ್ರಸ್ತಾವ ಬಿದ್ದು ಹೋಗಿದೆ ಎಂದು ಸ್ಪೀಕರ್​ ಘೋಷಿಸಿದರು.

ಇದನ್ನು ಓದಿ: ಅಧಿಕಾರ ವ್ಯಾಮೋಹ, ಕುದುರೆ ವ್ಯಾಪಾರ, ರೆಸಾರ್ಟ್​ ವಾಸ್ತವ್ಯ; ಪ್ರಜಾತಂತ್ರದ ಅಣಕು ಪ್ರದರ್ಶನ ಸರ್ಕಾರ ಪತನದಲ್ಲಿ ಅಂತ್ಯ

ಕಳೆದ 2018ರ ಮೇ 23ರಂದು ಅಧಿಕಾರಕ್ಕೆ ಬಂದಿದ್ದ ಸಮ್ಮಿಶ್ರ ಸರ್ಕಾರ ಇಂದಿಗೆ ಸರಿಯಾಗಿ 14 ತಿಂಗಳಲ್ಲಿ ಪತನವಾಗಿದೆ.

First published:July 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ