ಜೆಡಿಎಸ್​ ಶಾಸಕರೊಂದಿಗೆ ಸಿಎಂ ಅನೌಪಚಾರಿಕ ಸಭೆ; ಆಮಿಷಕ್ಕೆ ಒಳಗಾಗಬೇಡಿ ಎಂದು ಎಚ್ಡಿಕೆ ಮನವಿ

news18
Updated:September 9, 2018, 8:10 AM IST
ಜೆಡಿಎಸ್​ ಶಾಸಕರೊಂದಿಗೆ ಸಿಎಂ ಅನೌಪಚಾರಿಕ ಸಭೆ; ಆಮಿಷಕ್ಕೆ ಒಳಗಾಗಬೇಡಿ ಎಂದು ಎಚ್ಡಿಕೆ ಮನವಿ
news18
Updated: September 9, 2018, 8:10 AM IST
ಗಂಗಾಧರ್, ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.9): ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಮೈತ್ರಿ ಸರ್ಕಾರದ ಅಳಿವು-ಉಳಿವಿಗೆ ಎಲ್ಲ ಪಕ್ಷಗಳು ಕಸರತ್ತು ನಡೆಸುತ್ತಿವೆ. ಇದೇ ವಿಚಾರವಾಗಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಶನಿವಾರ ರಾತ್ರಿ ಜೆಡಿಎಸ್​ ಶಾಸಕರೊಂದಿಗೆ ಖಾಸಗಿ ಹೋಟೆಲ್​ನಲ್ಲಿ ಅನೌಪಚಾರಿಕ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಜೆಡಿಎಸ್​ನ ಶಾಸಕರು ಮತ್ತು ಮೇಲ್ಮನೆ ಸದಸ್ಯರು ಭಾಗಿಯಾಗಿದ್ದು, ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಿದ ಸಿಎಂ ಎಚ್ಡಿಕೆ, ಸರಕಾರವನ್ಮು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಯಾರೂ ಆಮಿಷಕ್ಕೆ ಒಳಗಾಗಬೇಡಿ ಎಂದು ಕೇಳಿಕೊಂಡಿದ್ದಾರೆ.

ರಾಹುಲ್ ಗಾಂಧಿ ನಮಗೆ ಐದು ವರ್ಷಗಳ ಕಾಲ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಆದರೆ, ಬಿಜೆಪಿ ಮಧ್ಯಂತರವಾಗಿ ಮೈತ್ರಿ ಸರ್ಕಾರ ಉರುಳಿಸುವ ಹಗಲುಕನಸು ಕಾಣುತ್ತಿದೆ. ಸಿಕ್ಕಿರುವ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಹೀಗಾಗಿ ಎಲ್ಲರೂ ಜತೆಗಿರಿ, ನಿಮ್ಮ ಕ್ಷೇತ್ರಗಳ ಅಭಿವೃದ್ದಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಶಾಸಕರಿಗೆ ಹೇಳಿದರು.

ಇದನ್ನು ಓದಿ: ದೆಹಲಿಯತ್ತ ಡಿ.ಕೆ. ಶಿವಕುಮಾರ್​; ಜಾರಿ ನಿರ್ದೇಶನಾಲಯದಿಂದ ಬಚಾವ್​​ ಆಗಲು ತಂತ್ರ

ಸಭೆಯ ಬಳಿಕ ಪ್ರತಿಯೊಬ್ಬರ ಜತೆಗೂ ಕುಮಾರಸ್ವಾಮಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ವೇಳೆ ಶಾಸಕರು, ಅಧಿಕಾರಿಗಳ ಬಗ್ಗೆ ದೂರು ಹೇಳಿಕೊಂಡರು. ಯಾವ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಅವಲತ್ತುಕೊಂಡರು. ಶಾಸಕರ ದೂರು ಆಲಿಸಿದ ಮುಖ್ಯಮಂತ್ರಿಗಳು, ಎಲ್ಲಾ ಸರಿ ಮಾಡುವುದಾಗಿ ಭರವಸೆ ನೀಡಿದರು.

ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ನಡುವಿನ ಭಿನ್ನಮತ ಭುಗಿಲೆದ್ದು, ಸಂಧಾನದ ಬಳಿಕ ಒಂದು ಹಂತಕ್ಕೆ ತಹಬದಿಗೆ ಬರುವ ಮೂಲಕ ಮೈತ್ರಿ ಸರ್ಕಾರಕ್ಕೆ ಎದುರಾಗಿದ್ದ ಕಂಟಕ ದೂರವಾಗಿತ್ತು. ಕಾಂಗ್ರೆಸ್ ಆಂತರಿಕ ಕಿತ್ತಾಟದ ಲಾಭ ಪಡೆಯಲು ಮುಂದಾದ ಬಿಜೆಪಿಗೆ ಭಾರೀ ನಿರಾಸೆಯಾಗಿತ್ತು. ಇದರ ಬೆನ್ನಲ್ಲೇ, ಸಚಿವ ಡಿ.ಕೆ.ಶಿವಕುಮಾರ್​ ಮೇಲೆ ಬಿಜೆಪಿ ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಎಫ್​ಐಆರ್​ ದಾಖಲಿಸಲು ಸಜ್ಜಾಗುತ್ತಿದೆ ಎನ್ನಲಾಗುತ್ತಿದೆ. ಇಡಿಯಲ್ಲಿ ಪ್ರಕರಣ ದಾಖಲಾಗಲು ಬಿಜೆಪಿಯೇ ನೇರ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.
Loading...

ಈ ಎಲ್ಲ ಹಿನ್ನೆಲೆಗಳನ್ನು ಗಮನಿಸತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್​ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುಬಹುದು. ಹಾಗಾಗಿ ಎಲ್ಲರನ್ನು ಒಟ್ಟಾಗಿ ಇರುವಂತೆ ಸೂಚನೆ ನೀಡಲು ಈ ಔಪಚಾರಿಕ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ